ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಬೆಂಗಳೂರೆಂಬ ಶುದ್ಧ ಉದಾಸೀನ ನಗರ…’ – ಸೂರಿ ಬರೀತಾರೆ
ಸೂರಿ ಬೆಂಗಳೂರಲ್ಲಿ ನನ್ನಂತಹವನು ಒಬ್ಬನಿದ್ದ. ಜೀವನದ ಅರ್ಥ ಹುಡುಕಿಕೊಂಡು ಗುರುವಿನ ಬಳಿ ಹೋದ. ಸ್ವಯಂಪಾಕದ ಅಭ್ಯಾಸದ ಗುರು ಮಾತನಾಡದೇ ನನ್ನಂತಹ ಆ ಒಬ್ಬನಿಗೆ ಎದುರಿದ್ದ ಈರುಳ್ಳಿಯನ್ನು ಕೊಟ್ಟು ಸುಲಿಯುತ್ತಾ ಹೋಗು, ಏನು ಸಿಗತ್ತೋ ಅದರಲ್ಲಿ ನಂಗೂ ಒಂದು ಚೂರು ಕೊಡು ಅಂದ. ನನ್ನಂತಹ ಆ ಒಬ್ಬನು ಈರುಳ್ಳಿಯನ್ನು ಸುಲಿಯುತ್ತಾ ಹೋದ....
ಬೇಂದ್ರೆ ಅವರ 'ನಲ್ಲ ನಲ್ಲೆಯರ ಲಲ್ಲೆ' – ಅನಿಲ್ ತಾಳಿಕೋಟೆ ಬರೀತಾರೆ
ಅನಿಲ್ ತಾಳಿಕೋಟೆ ನಲ್ಲ : 'ನಲ್ಲೆ ! ನಿನ್ನ ಲಲ್ಲೆವಾತು ಮುಗಳುನಗೆಯಲಲ್ಲೆ ಹೂತು ಸೋತು,ಓತು,ಬಂತು,ಹೋ'ತು ನಲ್ಲೆ, ನಿನ್ನ ಲಲ್ಲೆ ವಾತು'. ನಲ್ಲೆ: 'ನಲ್ಲ!ನಿನ್ನ ಲಲ್ಲೆ ವಾತು ಮೀಸೆ ಕುಡಿಯಲ್ಲಲ್ಲೆ ಹೂತು ಕುಣಿದು,ಮಣಿದು,ಬಂತು,ಹೋ'ತು ನಲ್ಲ!ನಿನ್ನ ಲಲ್ಲೆ ವಾತು.' ನಲ್ಲ : 'ನಲ್ಲೆ ! ನಿನ್ನ ಲಲ್ಲೆ ವಾತು ಕಣ್ಣ...
ರಂಗಶಂಕರದಲ್ಲಿ ’ಪಂಪ ಭಾರತ’
ನಿತ್ಯವೂ ಸಾಯುತ್ತಲೇ ಇರುತ್ತಾಳೆ, ಆದರೂ ಜೀವಂತವಾಗಿದ್ದಾಳೆ…
ಅಮ್ಮ ಮತ್ತು ಸಾವು -ವಿಜಯಕಾಂತ ಪಾಟೀಲ ಅಮ್ಮ ನಿತ್ಯವೂ ಸಾಯುತ್ತಲೇ ಇರುತ್ತಾಳೆ; ಆದರೂ ಜೀವಂತವಾಗಿದ್ದಾಳೆ..! ಕ್ಷಣಕ್ಷಣಕ್ಕು ಚಿಗುರುತ್ತಾಳೆ, ಕೊನರುತ್ತಾಳೆ, ಆಳಕ್ಕಿಳಿಯುತ್ತಾಳೆ, ಉದ್ದುದ್ದ ಬೆಳೆಯುತ್ತಾಳೆ, ಉಡಿ ತುಂಬಿ ತುಂಬಿ ಕೊಡುತ್ತಾಳೆ, ಹೊಟ್ಟೆ ಬಿರಿಯೇ ಉಣಿಸುತ್ತಾಳೆ; ಜೀವಂತಿಕೆಯನ್ನು ಸಾಬೀತು ಪಡಿಸುವ ಯಾವ...
ಒಬ್ಬ ಸುಂದರಿ ಮತ್ತು ಒಂದು ಸುಂದರವಾದ ಹಾಡು
http://youtu.be/7-2sfiRQFwQ
ಹೂ..ಹೀಚು..ಮಿಡಿಯನ್ನೇ ಹರಿದು ಮುಕ್ಕುವ ಸೈತಾನರು
- ಡಾ ಎಸ್ ಬಿ ಜೋಗುರ ಒಂದು ವಾರದಲ್ಲಿ ಹತ್ತಾರು ಕಡೆ ಇನ್ನೂ ಮೊಗ್ಗು.. ಹೀಚು.. ಮಿಡಿಯಂತಿರುವ ಎಳೆಯ ಬಾಲೆಯರನ್ನು ಅತ್ಯಾಚಾರಗೈದು ಹರಿದು ಮುಕ್ಕುವಂತೆ ವ್ಯವಹರಿಸುವ ಸೈತಾನರ ಮನ:ಸ್ಥಿತಿಯನ್ನು ನೋಡಿದರೆ ಮನುಷ್ಯನ ಬೆಳವಣಿಗೆಯ ತೀವ್ರತೆಯೊಂದಿಗೆಯೇ ಆತನ ಮನೋವಿಕೃತಿ ಕೂಡಾ ಕವಲೊಡೆಯತೊಡಗಿದೆ ಎನಿಸುತ್ತದೆ. ಕಾಮಕ್ಕೆ ಕಣ್ಣಿಲ್ಲ...
'ಸಂಜೆಗತ್ತಲಿನ ಮೌನವೇ…', ಬಿ ಜಯಶ್ರೀ ಕವಿತೆ
ಪಾರಿಜಾತದ ಗಂಧ ಜಯಶ್ರೀ ಬಿ ಕದ್ರಿ ಅಂಗಳದಲ್ಲೊಂದು ಪಾರಿಜಾತದ ಘಮಲು ಮುಟ್ಟಿದರೆ ಬಾಡಿ ಹೋದೀತು ಕನಸ ಪಕಳೆಗಳು ನಲುಗಿ ಹೋದೀತು ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ ಅರಳಿಸಿ ಬಿಡು ಜೀವದಲಿ ರಾಗವನ್ನು ಒಡಲಿನಲಿ ಚೈತನ್ಯದ ಚಿಲುಮೆಯನ್ನು ಸಂಜೆಗತ್ತಲಿನ ಮೌನವೇ ತಣಿಸಿ ಬಿಡು ಒಡಲುರಿಯ ಬೇಗೆಯನ್ನು ಬಾನ ಕಾವಳದ ರೌದ್ರವನ್ನು...
'ರಾಮಕಥ’ ಎನ್ನುವ ಪ್ರಯೋಗ
‘ರಾಮಕಥ’ ಎನ್ನುವ ಪ್ರಯೋಗ
ಪುಂಡಲೀಕ ಕಲ್ಲಿಗನೂರ ಅವರ ’ವಚನ-ಚಿತ್ರಕಲಾ ಸಂಗಮ’
ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಏಕೆ ಓದಬೇಕು?
ಬಿ ಆರ್ ಸತ್ಯನಾರಾಯಣ 'ರಾಮಾಯಣದ ಕಥೆ ಗೊತ್ತಿರುವುದೆ. ಅದನ್ನೇ ಆಧರಿಸಿ ಬರೆದ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಏಕೆ ಓದಬೇಕು?' ಇದು ನನ್ನ ಸ್ನೇಹಿತರೊಬ್ಬರು ನನಗೆ ಕೇಳಿದ ಪ್ರಶ್ನೆ. ಆಗ ನಾನು ಅವರಿಗೆ ಶ್ರೀ ರಾಮಾಯಣ ದರ್ಶನಂ ಕಾವ್ಯದಿಂದಲೇ ಆಯ್ದ ಒಂದು ಕಥೆ ಹೇಳಿದೆ. (ಅಲ್ಲಿ ಕಥೆ ಹೇಳಿದ ಹಾಗೆಯೇ ಇಲ್ಲಿ...
ಭಾನುವಾರದ ಸಣ್ಣ ಕಥೆ : ರಂಗಸ್ವಾಮಿ ಮೂಕನಹಳ್ಳಿ ಬರೆದ ಕಥೆ ’ಮೌಲ್ಯ’
ರಂಗಸ್ವಾಮಿ ಮೂಕನಹಳ್ಳಿ ಕಣ್ಣು ಬಿಟ್ಟಾಗ ಕಂಡಿದ್ದು ಓಂ ಚಿನ್ಹೆ ಉಳ್ಳ ಕ್ಯಾಲೆಂಡರ್ ವಾರದ ಹಿಂದಷ್ಟೇ ನಾಲ್ಕು ರುಪಾಯಿ ಕೊಟ್ಟು ತಂದಿದ್ದೆ , ಅಲಾರಂ ನಿಂತು ನಿಖರವಾಗಿ ಎಷ್ಟು ಹೊತ್ತು ಆಯ್ತು ಅಂತ ಗಡಿಯಾರ ನೋಡಿದರೆ ಮಾತ್ರ ತಿಳಿಯುತ್ತೆ , ನಾನಂತು ಬಹಳ ಹೊತ್ತಿನಿಂದ ಕಣ್ಣು ಬಿಡಲು ಪ್ರಯತ್ನ ಪಟ್ಟು ಇದೀಗ ಜಯ ಗಳಿಸಿದ್ದೇನೆ ,...
’ಭಾವನೆಗಳಿಲ್ಲದ ಬರಿದು ಮುಖಗಳು……..’ – ಸಂಗೀತಾ ಕವನ
ಆಸ್ಪತ್ರೆ -ಸಂಗೀತ ರವಿರಾಜ್ ತುರ್ತುಗಳ ನಡುವೆ ಸಂಯಮ ಅನಿವಾರ್ಯ ಸರಕು ದಿನತಪ್ಪಿದರೆ ಹದ ತಪ್ಪುವುದೀದೇಹ ವೈದ್ಯರ ಪರಾಕು ಇಲ್ಲಿ ಪದೇ ಪದೇ ಕಾಣುವ ಪೇಲವ ಮುಖದ ನಲುಗುವ ಪಾದಗಳು ನಿಲ್ಲಲಾರದೆ ಬಳಲುತ್ತಿದೆ ನೆರಳು ! ನಿಸ್ತೇಜದ ಜೋಡಿ ಕಂಗಳು ದಿಟ್ಟಿಸುವ ಛಾವಣಿಯು ಕರುಣೆ ತೋರದೆ ಅರೆ ಅಕ್ಷಿಯ ಭಾವನೆಗಳ ಶೂನ್ಯ ನೋಟದಲ್ಲು ಇಂಚಿಂಚು...
'ದಕ್ಷಿಣ ಭಾರತೀಯ ಸಣ್ಣಕಥೆಗಳು : ನೋಟ – ನಿಲುವು
‘ದಕ್ಷಿಣ ಭಾರತೀಯ ಸಣ್ಣಕಥೆಗಳು : ನೋಟ – ನಿಲುವು
ಸಂಪು ಕಾಲಂ : ಅನ್ ಕಂಡಿಶನಲ್ ಲವ್ ಅಂದ್ರೆ..
ಅನ್ ಕಂಡೀಶನಲ್ ಲವ್ ಅಂದ್ರೆ ಇದೇನಾ? ಆಗ ಕಾಲೇಜಿನಲ್ಲಿದ್ದೆ. ಶೇಕ್ಸ್ ಪಿಯರ್ ನ ಪುಸ್ತಕ ಹಿಡಿದು, ಅದರ ಸಂಕೀರ್ಣತೆಯನ್ನು, ಭಾವಪರವಶತೆಯನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದೆ, ಸುಖಾಸುಮ್ಮನೆ ಮುಖಪುಟ ನೋಡುತ್ತಾ, ಶೇಕ್ಸ್ ಪಿಯರ್ ನ ಬೋಳು ತಲೆಯ ಚಿತ್ರ ಬಿಡಿಸುತ್ತಿದ್ದೆ. ತಟ್ಟನೆ ಪಕ್ಕದ ರೂಮಿನಲ್ಲಿದ್ದ ಅಪ್ಪನ ಧ್ವನಿಯಲ್ಲಿ ಕೇಳಿಸಿದ...
'ಕಣ್ಗಳು ಕಲ್ಪನೆಗಳಲ್ಲೇ ಹೂತಿವೆ, ಅವನಿಲ್ಲ ಎದುರಲಿ' – ದಿವ್ಯ ಅಂಜನಪ್ಪ
ಅವನಿಲ್ಲ ದಿವ್ಯ ಅಂಜನಪ್ಪ ನನಗೂ ಗೊತ್ತಿದೆ, ನನ್ನದು ಉಸಿರುಗಟ್ಟಿಸೋ ಪ್ರೀತಿಯೆಂದು ನನ್ನ ಪ್ರೀತಿಯ ಮುದ್ದಿಗೆ ಚಿಕ್ಕ ಮಕ್ಕಳಾಗಿದ್ದರೆ ಓ ಎಂದು ಅಳುತ್ತಿದ್ದವು ! ಇವನೋ ಓಹೋ! ಎಂದು ಮರೆಯಾದ ಕಣ್ಮರೆಯಾದ, ನಾನಲ್ಲದ ನನ್ನವೇ ಕೆಲ ಸಂಭ್ರಮಗಳಿಗೆ ಸುಮ್ಮನೆ ಬೆರಗಾಗಿ ಅನಿಸತೊಡಗಿದೆ ನನಗೀಗ ನೋವುಗಳನು ಮುಚ್ಚಿಡುವುದೂ ತಪ್ಪೇ ಸುಳ್ಳೇ...
'ಮಂಡ್ಯದಲ್ಲಿ ನಾಳೆ’, ಮತ್ತೆ ನೆನಪಿಸುತ್ತಿದ್ದೇವೆ..
‘ಮಂಡ್ಯದಲ್ಲಿ ನಾಳೆ’, ಮತ್ತೆ ನೆನಪಿಸುತ್ತಿದ್ದೇವೆ..
ಶತಮಾನದ ಅಂಚಿನಲ್ಲಿ ಕಯ್ಯಾರರು
ಮಹೇಶ್ವರಿ ಯು ಬದುಕಿನಲ್ಲಿ ಬತ್ತದ ಶ್ರದ್ಧೆಯನ್ನೂ ಭತ್ತದ ಕೃಷಿಯ ಮೇಲಣ ಸಹಜ ಪ್ರೀತಿಯನ್ನೂ ಜೊತೆ ಜೊತೆಗೆ ನಡೆಸಿಕೊಂಡು ಹೋದ ನನ್ನ ಗುರುಗಳಾದ ಕಯ್ಯಾರರು ಎಳೆಯ ತಲೆಮಾರಿಗೆ ಒಂದು ಅಚ್ಚರಿಯೇ ಆಗಿದ್ದಾರೆ. ಜೀವನ ಶ್ರದ್ಧೆಯೆನ್ನುವುದು ಆ ತಲೆಮಾರಿನವರ ಹಿರಿಯ ಗುಣವೇ ಹೌದಾದರೂ ಕಯ್ಯಾರರನ್ನು ನೆನೆಯುವಾಗ ಆ ಗುಣವು ಅಪ್ಪಟ...
'ಸಾಂಸ್ಕೃತಿಕ ಪ್ರಭುತ್ವ ಮತ್ತು ಭಾಷಾ ಮಾಧ್ಯಮ' – ಎಸ್ ಬಿ ಜೋಗೂರ್
ಡಾ ಎಸ್ ಬಿ ಜೋಗೂರ್ ಈಚೆಗೆ ಸುಪ್ರೀಂ ಕೋರ್ಟ್ ತಮ್ಮ ಮಕ್ಕಳ ಶಿಕ್ಷಣ ಮಾಧ್ಯಮದ ಭಾಷೆಯ ಆಯ್ಕೆ ಪಾಲಕರದ್ದು ಎಂದು ಕರಾರುವಕ್ಕಾಗಿ ಹೇಳಿರುವುದಿದೆ. ಆ ಮೂಲಕ ಈ ಭಾಷಾ ಮಾಧ್ಯಮದ ಚೆಂಡನ್ನು ಕೊನೆಗೂ ಪಾಲಕರ ಅಂಗಳಕ್ಕೆ ತಳ್ಳಿರುವುದಿದೆ. ಇಲ್ಲಿ ಸರ್ವೋಚ್ಚ ನ್ಯಾಯಾಲಯ ಇಂಥದೇ ಮಾಧ್ಯಮವಾಗಿರಬೇಕೆಂದು ಹೇಳಿರದಿದ್ದರೂ ಸಹಜವಾಗಿ ನಮ್ಮ...
