'ದುಬೈ ಆಫೀಸ್ನಲ್ಲಿ ಹಾಸ್ಯದ (ಗು)ಘಳಿಗೆಗಳು' – ಆರತಿ ಘಟಿಕಾರ್

ಆರತಿ ಘಟಿಕಾರ್

ನನ್ನ ಪತಿ ದುಬೈ ನಗರಿಗೆ ವಲಸೆ ಹೋದ ಬಳಿಕ ಒಂದು ವರ್ಷದ ನಂತರ ನಾನೂ ನನ್ನ ಬೃಹತ್ ಲಗ್ಗೇಜ್ ಹಾಗು ನನ್ನ ಎರಡು ಪುಟ್ಟ ಲಗ್ಗೇಜ್ (ಮಕ್ಕಳು ) ನೊಂದಿಗೆ ದುಬೈ ನಗರಿ ಮುಟ್ಟಿದೆ .
ಚಂದದ ದುಬೈ ನಿಜಕ್ಕೂ ಬೆರಗುಮೂಡಿಸುವಂತಹ ಊರು . ಇಲ್ಲಿನ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು , , ಆಧುನಿಕ ಶಾಪಿಂಗ್ ಮಾಲ್ ಗಳು , /ಮನಮೋಹಕ ಗಗನ ಚುಂಬಿಗಳು, ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು ಹೀಗೆ …ಎಲ್ಲವನ್ನು ಕಣ್ದಣಿಯ ನೋಡುತ್ತಾ , ಅಲ್ಲಿನ ಸ್ನೇಹಪರ ವಾತಾವರಣ , ಇಷ್ಟ ವಾಗತೊಡಗಿತು .
ಹೊಸ ಊರಿಗೆ ಕ್ರಮೇಣ ಹೊಂದುಕೊಂಡು ನನ್ನ ಬಿಡುವಿನ ವೇಳೆ ಕಳೆಯಲು ನಾನು ನೌಕರಿಯ ಯತ್ನ ಮಾಡಿದಾಗ , ಒಳ್ಳೆಯ ಸೂಕ್ತವಾದ ಕಂಪನಿ ಒಂದನ್ನ ಹುಡುಕುವುದರಲ್ಲಿ ಯಶಸ್ವೀ ಆದೆ.
ಮೂಲತಹ ಇದು ಅರಬ್ ಕಂಪನಿ . (ಬ್ರ್ಯಾಂಚ್ ಆಫೀಸು ) ಇನ್ನು ನನ್ನ ಕಚೇರಿಯ ಬಗ್ಗೆ ಹೇಳುವುದಾದರೆ , ಅಲ್ಲಿ ಎಲ್ಲರೂ ಅರಬ ಮೂಲದವರು , ಕೆಲವರು ಬ್ರಿಟಿಶ್ಶ್ ರಿದ್ದರು . ಇನ್ನು ಬಹುಪಾಲು ಸಹದ್ಯೋಗಿಗಳು ಇಸ್ಲಾಂ ಧರ್ಮದವರು . ನಾನು ಹಾಗು ಇನ್ನೊಬ್ಬರು ಮಲಯಾಳಿ , ಹುಸ್ಸೈನ್ ಎಂಬುವವರು , ನಾವಿಬ್ಬರೇ ಅಲ್ಲಿದ್ದ ಭಾರತೀಯರು .. ಅದರಲ್ಲಿ ನಾನೊಬ್ಬಳೆ ಹಿಂದೂ . ಸಾಮಾನ್ಯವಾಗಿ ಅರಬರು ಎಲ್ಲಾ ಭಾರತೀಯ ಮೂಲದವರನ್ನ “ ಅಲ್ ಹಿಂದ್ “ ಅಂದು ಕರೆಯುತ್ತಾರೆ ! ಮೊದಮೊದಲು ನಾನು ಅದನ್ನು ಕನ್ನಡೀಕರಿಸಿ ಕೊಂಚ ಗಲಿಬಿಲಿ ಗೊಂಡಿದ್ದೂ ಉಂಟು .
ಅಂತೂ ಹೊಸ ಕಚೇರಿ ಅನಾಯಾಸವಾಗಿ ಒಗ್ಗಿತು , ಅಲ್ಲಿ ಎಲ್ಲರೂ ಬಹಳ ಸ್ನೇಹಪರರಾಗಿದ್ದ ಕಾರಣ ಕಚೇರಿಯ ವಾತಾವರಣ ಕ್ರಮೇಣ ಇಷ್ಟವಾಗತೊಡಗಿತು.
ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಮೂಲತಹ ಲೆಬಿನಾನ್ ದೇಶದವರು , ಬಹಳ ಆತ್ಮೀಯವಾಗಿ ನನ್ನ ಜೊತೆ ಮಾತನಾಡುತ್ತಿದ್ದರು . ಅವರು ನನ್ನನ್ನು ಸಂಬೋಧಿಸುವಾಗ ಹಲೋ ಅರ್ರಾ ………ತೀ ಎಂದು “ ರಾ “ ಅಕ್ಷರವನ್ನ ಎಷ್ಟು ದೀರ್ಘವಾಗಿ ಎಳೀತಿದ್ದರು ಅಂದರೆ … ಅದೇ ಸಮಯದಲ್ಲಿ ಒಂದು ಲಾಡು ಆರಾಮವಾಗಿ ಅವರ ಬಾಯಲ್ಲಿ ಹಾಕಬಹುದು ಅಷ್ಟು !  ಒಟ್ಟಿನಲ್ಲಿ ಬಹಳ ಸ್ವಾರಸ್ಯಕರವಾದ ವ್ಯಕ್ತಿ, ಅವರ ಬಗ್ಗೆ ಪುಟಗಟ್ಟಲೆ ಬರೆಯಬಹುದು.
ನಮ್ಮ ಆಫೀಸಿನಲ್ಲಿ ಮಹಿಳಾ ಸಹದ್ಯೋಗಿಗಳ ಸಂಖ್ಯೆ ಕಡಿಮೆ . .ಅದರಲ್ಲಿ ಒಬ್ಬ ಚೆಂದುಳ್ಳಿ ಚೆಲುವೆ, ಮೂಲತಹ ಸಿರಿಯಾ ದೇಶದವಲಾಗಿದ್ದವಳು , ನಿಜಕ್ಕೂ ದಂತದ ಬೊಂಬೆಯೆಂತಹ ಮೈಮಾಟ ಎಂದರೆ ತಪ್ಪಾಗಲಾರದು. ಅವಳಂತೆಯೇ ಮುದ್ದಾದ ಹೆಸರು ಅವಳದು “ಸಮಾ “ ಎಂದು . . Interior design departmentinalli ಅವಳ ಕೆಲಸ . ನಾವಿಬ್ಬರೂ ಆಗಾಗ ಕುಶಲೋಪರಿ ವಿನಿಮಯ ಮಾಡುಕೊಳ್ಳುತಿದ್ದ್ದೆವು . ಅವಳು ನಾ ಕೆಲ್ಸಕ್ಕೆ ಸೇರಿದ ಶುರುವಿನಲ್ಲಿ ಒಮ್ಮೆ ತನ್ನ ಟಿಫನ್ ಬಾಕ್ಸಿನಲ್ಲಿದ್ದ ನಾನ್ -ವೆಜ್ ಆಹಾರವನ್ನ ನನ್ನೊಂದಿಗೆ ಹಂಚಿಕೊಳ್ಳಲು ಬಂದಾಗ ನಾನು ( ಅಲ್ಲಿ ನಾನೊಬ್ಬಳೇ !) ಸಸ್ಯಹಾರಿ ಅಂತ ಗೊತ್ತಾಗಿ ,ಅಯ್ಯೋ ಮೀನು ಕೂಡ ತಿನ್ನಲ್ವಾ ಪಾಪ ! ಅರ್ರೆ ಮೀನು ವೆಜ್ ಅಲ್ವಾ !ಎಂದು ಉದ್ಘರಿಸಿ ಬೇಜಾರು ಪಟ್ಟುಕೊಂಡಾಗ ನಾನು ನಕ್ಕು “ ಸಮಾ” ಮೀನು ನಿಮಗೆ ವೆಜ್ ಇರಬಹುದು , ಆದರೆ ನಮಗೆ ಅದು ನಾನ್ ವೇಜ್ ಅಂದಾಗ ಪೆಚ್ಚನೆ ನಕ್ಕು ಬಿಟ್ಟಳು !

ಒಮ್ಮೆ ಆಕೆ ಹೋಗುತ್ತಿದ್ದ ಕ್ಲಬ್ಬ್ ಒಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಳು ಪಾಲ್ಗೊಂಡಾಗ . ಆ ಕಾರ್ಯಕ್ರಮಕ್ಕೆ ಭಾರತೀಯ ಉಡುಗೆಯನ್ನು ಧರಿಸುವ ಅವಶ್ಯಕತೆ ಒದಗಿ ಬಂದಿತ್ತು .. ಅವಳ ಭಾರತೀಯ ಗೆಳತಿ ನಾನೇ ಆಗಿದ್ದರಿಂದ ನನ್ನ ಬಳಿಗೆ ಬಂದು “ ಆರತಿ , ದಯವಿಟ್ಟು ನೀವು ಏನು ಅಂದುಕೊಳ್ಳ ದ್ದಿದ್ದರೆ ನಿಮ್ಮ ಯಾವುದಾದರೂ ಗ್ರಂಡಾಗಿರುವ ಸ್ಯಾರಿ ನನಗೆ ಒಂದು ದಿನ ಮಟ್ಟಿಗೆ ಬಾಡಿಗೆಗೆ ಕೊಡ್ತೀರಾ ? “ ಅಂತ ಕೇಳಿದಾಗ ನನಗೆ ನಗು . ನಾನು “ಅಯ್ಯೋ ಧಾರಾಳವಾಗಿ ಕೊಡ್ತೀನಿ , ರೆಂಟು /ಬಾಡಿಗೆ ಏನೂ ಬೇಡಮ್ಮ “ ಅಂದೆ . “ ಒಹ್ ತುಂಬಾ ಧನ್ಯವಾದಗಳು ! ಹಾಗಿದ್ರೆ ಸರಿ ನಾಳೇನೆ ಕಾರ್ಯಕ್ರಮ , ನನಗೆ ನೀವೇ ಸೀರೆ ಉಡಿಸಿ ಬೇಕು ಪ್ಲೀಜ್ “ ಎಂದು ವಿನಂತಿಸಿ , ನನ್ನಿಂದ ಅಸ್ತು ಎನಿಸಿಕೊಂಡ ಮೇಲೆ ನಿರಾಳವಾಗಿ “ಬಾಯ್ ಆರತಿ ತುಂಬಾ ಧನ್ಯವಾದಗಳು “ ಮುದ್ದಾಗಿ ವಿದಾಯ ಹೇಳಿ ಹೊರನಡೆದಳು .
ಸರಿ ನನ್ನ ಒಂದು ಗ್ರಾಂಡ್ ಆಗಿರುವ ಸೀರೆ ಹಿಡಿದು ಮಾರನೆಯ ದಿನ ಆಫೀಸಿಗೆ ಬಂದಾಗ ಆಗಲೇ ಅವಳು ಚಂದದ ಬಳೆ ತೊಟ್ಟು , .ಮೇಕ್ಅಪ್ ಮಾಡಿಕೊಂಡು ತಯಾರಾಗಿ ಕಾಯುತ್ತಿರುವುದನ್ನು ನೋಡಿ ನಾನು ತಡ ಮಾಡದೆ ಅವಳ ಚೇಂಬರ್ನೋಳಗಡಿಯಿಟ್ಟೆ . ಅಂದು ಅವಳ ಕೋಣೆ ನಮ್ಮ ನಾಟಕದ ಗ್ರೀನ್ ರೂಂ ಆಗಿ ಮಾರ್ಪಾಡಾಯಿತು , ಸರಿ ,ಅವಳಿಗೆ ನನ್ನದೇ ಒಂದು ರವಿಕೆ ಅಡ್ಜಸ್ಟ್ ಮಾಡಿ , ನೀಟಾಗಿ ಸೀರಿ ಉಡಿಸಿ , ಬಿಂದಿ ಇಟ್ಟು ( ವಧುವಿನಂತೆ ) ಅವಳನ್ನು ಹೊರಗೆ ಕರೆ ತಂದಾಗ , ಇನ್ನಿತರ ಅರಬ್ ಸಹದ್ಯೋಗಿಗಳು , ಅವಳನ್ನೇ ನೋಡುತ್ತಾ ಕಣ್ಣಲ್ಲೇ ನಕ್ಕು “ ವಾಹ್ , ಇದೇನು ಅರ್ರಾ….ಥಿ , ಸಮಾಳನ್ನು ಅಪ್ಪಟ ಭಾರತೀಯಳನ್ನಾಗಿ ಮಾಡಿಬಿಟ್ಟಿದ್ದೀರಲ್ಲಾ ಸೂಪರ್ “ ಅಂದಾಗ ನನಗೆ ಏನೋ ಹುಮ್ಮಸ್ಸು . ಅವಳು ಪದೆ ಪದೆ “ ಬಹುತ್ ಶುಕ್ರಿಯ ಆರತಿ , ಅಂತ ತಾ ಕಲಿತ ಒಂದೆರಡು ಹಿಂದಿ ಶಬ್ದಗಳನ್ನು ನನ್ನ ಮೇಲೆ ಪ್ರಯೋಗಿಸಿ , ಸೀರೆಯನ್ನು ಮೇಲೆ ಹಿಡುದು ಕಷ್ಟಪಟ್ಟು ಸಂಭಾಳಿಸಿಕೊಂಡು ನಡೆದು ಹೋಗುವುದು ನೋಡಿ ನನಗೂ ನಗು 🙂
(ಸದ್ಯ ಕಾರ್ಯಕ್ರಮ ಮುಗಿಯುವವರೆಗೂ ಅವಳ ಸೀರೆ ಯಥಾ ಸ್ಥಿತಿಯಲ್ಲಿದ್ದು ಅವಳ ಜೊತೆ ನನ್ನ ಗೌರವವನ್ನೂ ಕಾಪಾಡಪ್ಪ ಎಂದು ನನ್ನ ಇಷ್ಟದೇವರನ್ನು ಬೇಡಿಕೊಂಡೆ )
ಈ ಮದ್ಯೆ ಒಮ್ಮೆ ನಮ್ಮ ಕಚೇರಿಯಲ್ಲಿ ಅಕ್ಕೋಟೆಂಟ್ ಆಗಿದ್ದ ಹುಸ್ಸೈನ್ ( ಕೇರಳದವರು ). ನನಗೊಂದು ಹೊಸ ಸುದ್ದ್ದಿ ತಂದರು, ನಾನು ಮೊದಲೇ ಹೇಳಿದಂತೆ ನಮ್ಮ ಕಚೇರಿಯಲ್ಲಿ ಭಾರತೀಯ ಮೂಲದವರು ನಾವಿಬ್ಬರೆ ..ಹಾಗಾಗಿ ಆಫೀಸಿನ ಒಳ ಸುದ್ದಿಗಳೇನಿದ್ದರೂ , ನಮಗೆ ತಿಳಿದ ತಕ್ಷಣವೇ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಿದ್ದೆವು ! ಅಂದು ಅವರು ಉತ್ಸಾಹದಿಂದ “ ಆರದಿ ನಿಮಗೆ ಗೊತ್ತಾ ? ನಮ್ಮ ಆಫೀಸಿಗೆ ಒಬ್ಬ ಹೊಸ ಅಪರೇಷನ್ ಮ್ಯಾನೇಜರ್ ( operation manager ) ಸೇರ್ಪಡೆ ಆಗುತ್ತಿದ್ದರಂತೆ ಹೆಸರು “ಸಮೀರ್ ಆಚಕರ್ “ ಎಂದು ಕೇಳಿದ ಹಾಗಿತ್ತು ! ಅಂದಾಗ
ನಾನು ತಕ್ಷಣ “ ಸಮೀರ್ ಆಚಾರ್ “ ಇರಬಹುದು ಅನ್ಸತ್ತೆ ಹುಸ್ಸೈನ್ , ಬಾರತೀಯ ಹೆಸರು ಇದ್ದ ಹಾಗಿದೆ “ ಖುಷಿಯಿಂದಲೇ ಉಲಿದೆ !  ಸರಿ ಲಂಚ್ ವೇಳೆಯಾಗಿದ್ದರಿಂದ ಅವರೊಂದಿಗೆ ಕುಶಲೋಪರಿಗಳು,, ಸುದ್ದಿ ವಿಶೇಷ ಗಳು , ಸಮಯದ ಪರಿವಿಲ್ಲದೆ ಮುಂದುವರಿದು , ಕೊನೆಗೆ ಪರಿಸಮಾಪ್ತಿ ಗೊಂಡು ಅವರ ನಿರ್ಗಮನದ ವಾಗುತ್ತಿದ್ದಂತೆಯೇ , ಆ ಕ್ಷಣದಿಂದಲೇ ಅವರು ಹೇಳಿದ ಹೆಸರಿನ ಸುತ್ತ ನನ್ನ ಊಹೆ ಪ್ರಾರಂಭವಾಗಿ ಬಿಟ್ಟಿತು . ಒಹ್ ! ಸಮೀರ್ ಆಚಾರ್ ಅಂದ್ರೆ ಕರ್ನಾಟಕದವರು ಇರಬಹುದಲ್ಲವೇ ! ಅಂದುಕೊಂಡಾಗ ಮನಸ್ಸು ಸಂತಸದ ಮೋಡಗಳಲ್ಲಿ ತೇಲಾಡಿತು ! ಹಾಗೆಯೇ ಅಂದು ಆಫೀಸಿನಿಂದ ಮನೆಯ ದಾರಿ ಹಿಡಿದಾಗ . ಈ ವಿಚಾರವೆ ಮನದಲ್ಲಿ ಮನೆಮಾಡಿತ್ತು , ನಾನೂ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾ ಮನೆಯಲ್ಲೂ ನಮ್ಮವರಿಗೆ ಈ ಸುದ್ದಿ ಯನ್ನ ಬಿತ್ತರಿಸಿದಾಗ ಅವರೂ ಆಶ್ಚರ್ಯ ,ಖುಷಿ ಒಟ್ಟಿಗೆ ವ್ಯಕ್ತ ಪಡಿಸಿದ್ದರು !
ಅರಬ ಮೂಲದವರೇ ತುಂಬಿಕೊಂಡಿರುವ ನಮ್ಮ ಆಫೀಸಿನಲ್ಲಿ ಒಬ್ಬರಾದರೂ ನಮ್ಮ ಕನ್ನಡವರಿದ್ದರೆ ಎಷ್ಟು ಚೆನ್ನ ! ಎನ್ನುವ ಸಂತಸದ ಭಾವನೆಯೊಂದು ನನ್ನೊಳಗೆ ಅರಳಿ ಹೂವಾಗಿತ್ತು , ಅಂತೂ ನನ್ನ ನಿರೀಕ್ಷೆಯ ಕ್ಷಣಗಳಿಗೆ ಮಂಗಳ ಹಾಡುವ ಸಮಯ ಬಂದಿತು , ಅರ್ಥಾತ್ ನಮ್ಮ ಹೊಸ “operation manager “ “ಆಗಮಿಸುವ ಘಳಿಗೆ ಬಂದೆ ಬಿಟ್ಟಿತು ,ನನಗೋ ಅವರನ್ನು ನೋಡುವ ಕೊತೂಹಲ ಬೆಳೆದು ಹೆಮ್ಮರವಾಗಿ ನಿಂತ್ತಿತ್ತು ! ಅಂದು ಬೆಳಿಗ್ಗೆ ಒಂಬತ್ತರ ಸುಮಾರಿಗೆ ,ಸೂಟು /ಟೈ ನಲ್ಲಿ ಆಗಷ್ಟೇ ಬ್ಯುಸಿನೆಸ್ಸ್ ಮೀಟಿಂಗ್ ನಿಂದ ಬಂದಂತೆ , ಒಬ್ಬ ಎತ್ತರದ ಸುಂದರ ವ್ಯಕ್ತಿ ಆಫೀಸಿನೊಳಗೆ ಕಾಲಿಟ್ಟರು . ನಮ್ಮ ಸಹದ್ಯೋಗಿಗಳು ಅವರನ್ನು ಸ್ವಾಗತಿಸಿ ಹೂ ಗುಚ್ಚಳನ್ನು ಕೊಟ್ಟ ನಂತರ , ನಮ್ಮ ಮ್ಯಾನೇಜರ್ ಅವರನ್ನ ಪರಚಯಿಸುತ್ತ “ ಫ್ರೆಂಡ್ಸ್ ಇವರು ಸಾಮೇರ್ ಅಚಾಕರ್ “ ( saamer achaakar ) ನಮ್ಮ ಹೊಸ ಅಪರೇಷನ್ ಮ್ಯಾನೇಜರ್ , ಲೆಬಿನಾನಿನ ದೇಶದವರು “ !!!! ಎಂದು ಉತ್ಸಾಹದಿಂದ ಹೇಳಿದರು, ನಾನು ಕೂಡಾ ಇತರರಂತೆ ಅವರಿಗೆ “ ಹಲೋ ವೆಲ್ಕಂ ಸರ್ “ ಎಂದು ಅವರತ್ತ ಮುಗುಳ್ನಗೆ ಬೀರಿ ಹೇಳಿದರೂ , ಗೋಪುರದಂತೆ ಎತ್ತರಕ್ಕೆರಿದ ನನ್ನ ಉತ್ಸಾಹ ಜರ್ರನೆ ಇಳಿದು , ಮನದಲ್ಲಿ ನಿಧಾನವಾಗಿ ನಿರಾಶೆಯ ಕಾರ್ಮೋಡಗಳು ಹೆಪ್ಪುಗಟ್ಟಲಿಕ್ಕೆ ಶುರು ಮಾಡಿದ್ದವು ! . ಇನ್ನು ನಾ ಕಟ್ಟಿಕೊಂಡಿದ್ದ ಊಹೆಯ ಸೌಧ ಗ್ರೌಂಡ್ ಜೀರೋ ಆಗಿ ಮಲಗಿ ಬಿಟ್ಟಿತ್ತು ಅಂತ ಬೇರೆ ಹೇಳಬೇಕೆ 🙂
ಆದರೆ ಆ ( ಪೆದ್ದ) ಭಾವನೆಗಳೆಲ್ಲಾ ಆ ಕ್ಷಣಕ್ಕಷ್ಟೇ ಜಾಮಯಿಸಿಕೊಂಡು ನಿಧಾನವಾಗಿ ಕರಗಿ ನೀರಾಗಿ ಹರಿದು ಹೋದವು ,ಅಷ್ಟೇ ಅಲ್ಲದೆ ,ನನ್ನ ಊಹೆಗೆ ನಾನೇ ನಕ್ಕು ಬಿಟ್ಟೆ ! . ಆದರೆ ಹೇಗೆಲ್ಲಾ ಆಸೆ ಪಡುವುದರಲ್ಲಿ ತಪ್ಪೇನು ಇಲ್ಲ ಎಂದು ನೀವು ಒಪ್ಪುತೀರಾ ಅಲ್ವೇ ? 🙂
ಇರಲಿ , ಈ ನಮ್ಮ ಹೊಸ Operation manager ,ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ ಕಾರ್ಯ ಕ್ಷಮತೆ ,ಸ್ನೇಹ ಸ್ವಭಾವದಿಂದ ನಮೆಲ್ಲರ ಮನಸನ್ನ ಬಹಳ ಶೀಘ್ರದಲ್ಲೇ ಗೆದ್ದು ಬಿಟ್ಟಿರು .  ಆದರೆ ಅವರ ಬರುವಿಕೆ ಯ ಸುತ್ತಾ ನನ್ನಲ್ಲಿ ಹೆಣೆದು ಕೊಂಡಿದ್ದ ಕಲ್ಪನೆಯ ಎಳೆಗಳು ನೆನಪಾದಾಗ ಈಗಲೂ ಕಚಗುಳಿ ಇಟ್ಟಂತಾಗುತ್ತದೆ !

‍ಲೇಖಕರು G

July 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

11 ಪ್ರತಿಕ್ರಿಯೆಗಳು

  1. vageesha JM

    ನಮ್ಮ ಒಮಾನ್ ಆಫಿಸಿನಲ್ಲ ಎಲ್ಲರೂ ಕನ್ನಡದವರೇ… ಇಲ್ಲಿ ಕನ್ನಡವೆ ನನ್ನ ದಿನ ನಿತ್ಯದ ಭಾಷೆಯಾಗಿದೆ..

    ಪ್ರತಿಕ್ರಿಯೆ
    • Kiran

      Which means you are most probably speaking more Kannada being in Oman than you would have if u were to work in NAMMA BENGALURU.

      ಪ್ರತಿಕ್ರಿಯೆ
  2. Arathi ghatikar

    Dhanyavadagalu ellarigoo nanna laghu lekhnavannu mecchiddakkagi .vageesha avaragi oman office nalli kannadada vatavarana viruvudu kandu khushi aythu .

    ಪ್ರತಿಕ್ರಿಯೆ
  3. ಮಾಲಾ

    ಚೆನ್ನಾಗಿತ್ತು ನಿಮ್ಮ ಅನುಭವ ಕಥನ

    ಪ್ರತಿಕ್ರಿಯೆ
  4. k.vasuki

    I enjoyed a lot by reading your article. my son is also working in sharaja. And very much pleased to know a hindu woman can lead a happy life in Arab country

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: