ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಮೂಹ ಸಂಚಯದ ಕನ್ನಡದ ಕೆಲಸಕ್ಕೆ ಕೈ ಜೋಡಿಸಿ ಅಂತಾರೆ ಓಂಶಿವಪ್ರಕಾಶ್

ಓಂ ಶಿವಪ್ರಕಾಶ್ ಕನ್ನಡ ಸಂಚಯದ ಹೊಸ ಯೋಜನೆ - ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಆಗಬೇಕಿರುವ ಅನೇಕ ಕೆಲಸಗಳನ್ನು 'ಕ್ರೌಡ್ ಸೋರ್ಸಿಂಗ್' ಮೂಲಕ ಸಾಧ್ಯವಾಗಿಸುವ ವೇದಿಕೆಯಾಗಿದೆ. ಮೊದಲಿಗೆ, ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ (http://oudl.osmania.ac.in) ೨೦೦೦ಕ್ಕೂ...

read more
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಹಟಕ್ಕೆ ಬಿದ್ದು ದಾನಕೊಟ್ಟವಳು…

ಅದೊಂದು ಪುಟ್ಟ ಸಂಸಾರ. ತಂದೆ, ತಾಯಿ, ಮಗಳು, ಮಗ ನಾಲ್ಕೇ ಜನ. ಬಡವರಲ್ಲ. ಶ್ರೀಮಂತರೂ ಅಲ್ಲ. ವಿಜಯಪುರ ಜಿಲ್ಲೆಯ ಬಹುತೇಕ ಜನರಂತೆ ಇವರದೂ ಕೆಳ ಮಧ್ಯಮ ವರ್ಗ. ಹೆಸರಿಗೆ ಒಂದಿಷ್ಟು ಭೂಮಿ, ನಮ್ಮೂರಿನವರು. ವಿಜಯಪುರ ಜಿಲ್ಲೆಯಲ್ಲಿ ಬೀಳುವ ಒಂದಷ್ಟು ಸೆ.ಮೀ. ಮಳೆಯಿಂದಾಗಿ ಬೆಳೆಯುವುದು ಅತೀ ಸ್ವಲ್ಪ. ಒಣ ಜಮೀನಿನಲ್ಲಿ ಬರುವ ಉತ್ಪನ್ನವೂ...

read more
ಫೋನನ್ನು ಕೈಯಲ್ಲಿ ಹಿಡಿದುಕೊಂಡಷ್ಟು ಹೊತ್ತು ನಿಮ್ಮ ಮಗುವನ್ನು ಎತ್ತಿಕೊಂಡಿದ್ದೀರಾ? – ಶ್ರೀನಾಥ್ ಭಲ್ಲೆ

ಶ್ರೀನಾಥ್ ಭಲ್ಲೆ ಇಲ್ಲಿ ನಾನು ಎಂದರೆ ನಾನೇ ಅಲ್ಲ. ನಾನು, ನನ್ನಿಂದ, ಎಂಬುದನ್ನು ಹೊತ್ತುಕೊಂಡೇ ಸಾಗುವ ಯಾರೂ ಆಗಿರಬಹುದು. ಒಂದು ಶುಭ ಮುಸ್ಸಂಜೆ, ಹೊಟ್ಟೆಪಾಡಿಗಾಗಿ ಅಮೇರಿಕದಲ್ಲಿ ಕೆಲಸ ಮಾಡುವ ನಾನು, ಘನ ಬೆಂಗಳೂರಿನ ಪಾರ್ಕ್ ಒಂದರಲ್ಲಿ ಕುಳಿತಿದ್ದೆ. ಇಲ್ಲ ಬಿಡಿ, ಸಂಜೆಯವರೆಗೂ ಅಮೇರಿಕದಲ್ಲಿ ಕೆಲಸ ಮಾಡಿ ನಂತರ ಹುಟ್ಟೂರಿನ...

read more
ಹಂಪನಾ ಅವರ ಸಂದರ್ಶನ ಮಾಡಿದ್ದಾರೆ ರಾಘವೇಂದ್ರ ಜೋಶಿ

ರಾಘವೇಂದ್ರ ಜೋಶಿ "ಕನ್ನಡದ ಬಗ್ಗೆ ಮಡಿ ಬೇಡ, ಮುನ್ನುಗ್ಗುವ ಧೈರ್ಯವಿರಲಿ.." - ಡಾ.ಹಂಪನಾ ಕನ್ನಡ ಸಾರಸ್ವತ ಲೋಕದಲ್ಲಿ 'ಹಂಪನಾ' ಎಂದೇ ಚಿರಪರಿಚಿತರಾಗಿರುವ ಡಾ. ಹಂ.ಪ.ನಾಗರಾಜಯ್ಯ ಅವರು ಖ್ಯಾತ ಭಾಷಾ ತಜ್ಞ ಮತ್ತು ಗ್ರಂಥ ಸಂಪಾದಕರು. ಕಸಾಪದ ಗೌರವ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕನ್ನಡದ ಕೆಲಸ ಮಾಡಿದವರು. ಕರ್ನಾಟಕ...

read more
'ನೇಯಬೇಕು, ತದನಂತರ ನೋಯಬೇಕು..' – ಸಂಗೀತ ರವಿರಾಜ್

ಜೇಡನ ಸ್ವಗತ ಸಂಗೀತ ರವಿರಾಜ್ ಬದುಕು ಸುಮ್ಮನೆ ಅಲ್ಲ ನೇಯಬೇಕು; ತದನಂತರ ನೋಯಬೇಕು!   ಬಲೆ ತೆಗೆಯುವ ನಾರಿಗೇನು ಗೊತ್ತು ನನ್ನ ಕಲೆಯ ಜಾಣತನ? ಆಕೆ ತೆಗೆಯುವ ರಭಸದಲ್ಲಿ ಬಲೆಯಲ್ಲಿ ಸಿಲುಕಿದ ನನ್ನ ಆಹಾರದ ಜೀವವುಳಿಯುತ್ತದೆ! ಆದರೆ ನಾನು ದಡಬಡನೆ ಓಡುತ್ತೇನೆ ಜೀವಭಯದಿಂದ... ಬದುಕು ಅದಲು ಬದಲಾಗುವುದೆಂದರೆ ಹೀಗೆ ನಮಗೆ ತಿಳಿಯದ...

read more
ಬಯೋಮೆಟ್ರಿಕ್ಕು "ಬಯ್ಯೋ"ಮೆಟ್ರಿಕ್ಕಾದಾಗ!

ಪ್ರಸಾದ್ ಕೆ "ಸಾರ್ ಸಾರ್..." ಎನ್ನುತ್ತಾ ಇಂಜಿನಿಯರ್ ಸಾಹೇಬರ ರೂಮಿನೆಡೆಗೆ ಏದುಸಿರು ಬಿಡುತ್ತಾ ಒಂದು ಪೇಪರಿನೊಂದಿಗೆ ಒಳನುಗ್ಗಿದ ಮಂಗೇಶ. ಮಂಗೇಶ ಬೈ ಪ್ರೊಫೆಷನ್ನು ಚಪರಾಸಿ. ಟಿಪಿಕಲ್ ಕೇಂದ್ರ ಸರಕಾರಿ ನೌಕರ. ಬೆಣ್ಣೆ ಮಾತುಗಳೇ ಇವನ ಡಿಗ್ರಿಗಳು. ಭಟ್ಟಂಗಿತನವೇ ಇವನ ಪಫರ್ಾಮೆನ್ಸು. ಕಳೆದ ಹದಿನೈದು ವರುಷಗಳಿಂದ ಇಂಜಿನಿಯರ್...

read more
ತಿರುಪತಿ ಭಂಗಿ ಕಥೆಗಳು ಈಗ ಪುಸ್ತಕವಾಗಿ

ತಮ್ಮ ಕಥೆಗಳ ಮೂಲಕ ’ಅವಧಿ’ ಓದುಗರಿಗೆ ಪರಿಚಿತರಾಗಿರುವ ತಿರುಪತಿ ಭಂಗಿ ಅವರ ಕಥಾ ಸಂಕಲನ ’ಜಾತಿ ಕುಲುಮ್ಯಾಗ ಅರಳಿದ ಪ್ರೀತಿ’ ಇದೇ ೨೭ರಂದು 'ಕನ್ನಡ ಪುಸ್ತಕ ಪ್ರಾಧಿಕಾರ’ದ ಸಹಯೋಗದೊಂದಿಗೆ ಪ್ರಕಟವಾಗಲಿದೆ. ತಿರುಪತಿ ಭಂಗಿಯವರಿಗೆ ’ಅವಧಿ’ಯ...

read more
ಕುಸುಮಬಾಲೆ ಕಾಲಂ : ನಂಜುಂಡಸ್ವಾಮಿಯವರೆ ಅಷ್ಟೇನು ಅರ್ಜೆಂಟಿತ್ತು ಅಂತ ಹೋಗಿಬಿಟ್ಟಿರಿ ನೀವು?

ನಿಲ್ಸಿ ನಿಲ್ಸಿ ನಿಲ್ಸಿ..ಕೂಗಿದೆ. ಇಳಿಬೇಕಾದ ಜಾಗದಿಂದ ಹೆಚ್ಚು ಕಡಿಮೆ ಒಂದು ಕಿಲೋಮೀಟರ್ ಮುಂದಕ್ಕೆ ಹೋಗಿಯಾಗಿತ್ತು. “ಹೇಳಬಾರದಾ ಮೆಡಂ, ಹೋಗ್ಲಿ ಬನ್ನಿ” ಅಂತ ಯೂಟರ್ನ್ ಮಾಡಿದ.ಆಟೋದವ. ರಸ್ತೆ ಕಡೆ ಗಮನವಿದ್ದರೆ ತಾನೇ? ಮಾತಾಡ್ತಾ ಮಾತಾಡ್ತಾ ಕಥೆಯೊಳಗೆ, ಕಥೆಯೊಳಗಿನ ವ್ಯಥೆಯೊಳಗಿ ಮುಳುಗಿಹೋಗಿದ್ದೆ. ಮೋಟಾರು ವಾಹನ ಜಗತ್ತಿನ...

read more
ಅಕ್ಕು ಬರ್ತಿದಾಳೆ ರಂಗಶಂಕರಕ್ಕೆ

ರಂಗಮಂಟಪ ರಂಗಮಂಟಪ ರಂಗಭೂಮಿಯನ್ನು ನಂಬಿಕೊಂಡಿರುವ ಒಂದು ಸಾಮೂಹಿಕ ಕನಸು. ಬದುಕನ್ನು ತೀವ್ರವಾಗಿ ಪ್ರೀತಿಸುವುದನ್ನು ಕಲಿಸುವುದು ರಂಗಭೂಮಿ. ತರತಮಗಳ ಸಮಾಜದಲ್ಲಿ ಸಂಬಂಧಗಳ ಅರ್ಥವಂತಿಕೆಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಕಲೆಗಳು ಮಾಡಬೇಕೆನ್ನುವ ಹಲವು ಕನಸಿಗರು ಸೇರಿ ಅಸ್ತಿತ್ವಕ್ಕೆ ತಂದ ತಂಡವೇ ರಂಗಮಂಟಪ. ಮೊದಲ...

read more
ಕಾಶ್ಮೀರದಲ್ಲೊಬ್ಬಳು ಅಕ್ಕಮಹಾದೇವಿ – ಪ್ರಜ್ಞಾ ಶಾಸ್ತ್ರಿ

ಲಲ್ಲಾ ಎಂಬ ಅಸೀಮರೂಪಿ ಕಡಲು ಪ್ರಜ್ಞಾ ಶಾಸ್ತ್ರಿ ಲಾಲ್ ದೀದಿ, ಲಲ್ಲೇಶ್ವರಿ, ಲಲ್ಲಾ ಅರೀಫಾ ಹಾಗೂ ಲಾಲ್ ಡೇಡ್ ಎಂದೆಲ್ಲ ಕರೆಯಿಸಿಕೊಳ್ಳುವ ಹದಿನಾಲ್ಕನೆಯ ಶತಮಾನದ ಈ ಕಾಶ್ಮೀರಿ ಶಿವ ಶರಣೆ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವುಂಡು, ಸಂಸಾರವನ್ನು ತ್ಯಜಿಸಿ, ಶೈವ ಮಾರ್ಗವನ್ನು ಹಿಡಿದವಳು. ಕಾಶ್ಮೀರಿ ಪಂಡಿತರ ಕುಟುಂಬದ ಈಕೆಗೆ...

read more
ಇದು ಹಳ್ಳಿ ಹುಡುಗರ ಬೆಂಗಳೂರ್ ಲೈಪು!

ಮಲ್ಲಿಕಾರ್ಜುನ ತಳವಾರ ಸ್ವರ ಬರದಿದ್ರೂ..... ಬಾರಿಸ್ಲೇಬೇಕು ತಂಬೂರಿ ನಿನ್ನೆ ಮೊನ್ನೆ ಪಕ್ಕದಲ್ಲಿ ಓಡಾಡಿಕೊಂಡಿದ್ದ ಹುಡುಗ, 'ನಾನು ಬೆಂಗಳೂರಿಗೆ ಹೊರಟೆ' ಎಂದು ಘೋಷಿಸಿದಾಗ ಜತೆಯಿದ್ದ ಗೆಳೆಯರ ಗುಂಪಿನೊಳಗೆ ಆಶ್ಚರ್ಯ. ಬಂಧುವರ್ಗದವರಲ್ಲಿ ಕುತೂಹಲ. ಸಮಾನ ಮನಸ್ಕರಲ್ಲಿ ಗೊಂದಲ. ಎಲಾ... ಇವನ ಅಂತೂ!. ನೆಲೆ ನಿಲ್ಲಾಕ ಹೊಂಟ ಪಾ......

read more
ಚಂದ್ರಶೇಖರ ಆಲೂರರ ಪ್ರೀತಿಯೂ ಅವರ ’ಗೀತ ಸಂಗೀತ’ವೂ – ರವಿ ವರ್ಮ

ರವಿವರ್ಮ ಹೊಸಪೇಟೆ ಗೆಳೆಯ ಚಂದ್ರಶೇಖರ ಅಲೂರು ಅವರ ಗೀತ ಸಂಗೀತ ಪುಸ್ತಿಕೆ ಮರು ಓದಿಗಾಗಿ ಹಿಡಿದಿದ್ದೆ. ಒಂದು ದುರಂತವೆಂದರೆ ನಾವು ಅತ್ಯುತ್ತಮ ಹಾಡುಗಳನ್ನು ಕೇಳಿ ಆನಂದಿಸುವಾಗ, ಖುಶಿ ಪಡೆವಾಗ, ನರ್ತಿಸುವಾಗ,ಮೈಮರೆಯುವ ಆ ಘಳಿಗೆಗಳಲ್ಲಿ ಕೂಡ ಆ ಹಾಡು ಬರೆದ ಕವಿ ನಮಗೆ ಯಾರೆಂದು ಗೊತ್ತಿರುವುದೇ ಇಲ್ಲ.. ಆ ನಟ ನಟಿ, ಹೆಚ್ಚೆಂದರೆ...

read more
ಗೊರೂರರ ಬದುಕಿನ ಹಾಸ್ಯ ಘಟನೆಗಳು ಹಾಗೂ ರಸಪ್ರಸಂಗಗಳು

ಗೊರೂರು ಶಿವೇಶ್ ಕನ್ನಡ ಸಾಹಿತ್ಯವನ್ನು ತಮ್ಮ ಸಣ್ಣ ಕಥೆ, ಕಾದಂಬರಿ, ಲಲಿತ ಪ್ರಬಂಧ, ಪ್ರವಾಸ ಕಥನ, ವಿಡಂಬನೆ ಮುಂತಾದ ಪ್ರಕಾರಗಳಿಂದ ಶ್ರೀಮಂತಗೊಳಿಸಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಗ್ರಾಮೀಣ ಸಂಸ್ಕೃತಿಯನ್ನು ಹಾಗೂ ಅವರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹಾಸ್ಯದ ಪರಿಚಯವನ್ನು ಓದುಗರಿಗೆ ಮಾಡಿಕೊಟ್ಟಿದ್ದಾರೆ. ಸ್ವತಃ...

read more
ಸವಾಲನ್ನು ಸ್ವೀಕರಿಸದೇ ಹೋದ ಸಾಹಿತ್ಯ ಪರಿಷತ್ತು

ಜಿ ಪಿ ಬಸವರಾಜು ದೇವನೂರು ಮಹಾದೇವ ಒಂದು ಸಣ್ಣ ಬಿರುಗಾಳಿಯನ್ನು ಎಬ್ಬಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದ್ದರೆ, ಈ ಬಿರುಗಾಳಿ ಬಹುದೊಡ್ಡ ಚಂಡಮಾರುತವಾಗಿ ಇಡೀ ನಾಡನ್ನು ಆವರಿಸಿಬಿಡುವ ಸಾಧ್ಯತೆ ಇತ್ತು. ಈ ಚಂಡಮಾರುತ ಕನ್ನಡ ನಾಡಿನ ಆಶೋತ್ತರಗಳನ್ನು ಹೊತ್ತು ದೆಹಲಿಯತ್ತ...

read more

Pin It on Pinterest

Share This