ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸದಾಶಿವ ದೊಡಮನಿ ಕವಿತೆ- ವಿಷಾದ ಗೀತೆ…
ಡಾ ಸದಾಶಿವ ದೊಡಮನಿ ಎದೆಯ ನೋವು ಹೂಗಳ ಪೋಣಿಸಿಮಾಲೆ ಕಟ್ಟಿದ್ದೇನೆಸಂತೆ, ಪೇಟೆಯಲ್ಲಿ ಇಟ್ಟುಕೊಳ್ಳುವವರ ಮುಖ, ಮನ ಹೊತ್ತಿಗೆಓದುತ್ತಲೇ ಇದ್ದೇನೆಮುಟ್ಟುವವರಿಲ್ಲ, ಮುಡಿಯುವವರಿಲ್ಲಬರೀ ವಿಷಾದ, ಲೊಚುಗುಟ್ಟುವಿಕೆಯ ಧ್ವನಿಗಳೊಂದಿಗೆ ಮುಂದೆ ಸಾಗುತ್ತಿದ್ದಾರೆಕರುಳು ಹಿಂಡುತ್ತಿದ್ದಾರೆ ಘಮ್ ಎನ್ನುವ ವಾಸನೆಯತ್ತಲೇಎಲ್ಲರ ನೋಟ,...
ನಂದಿನಿ ಹೆದ್ದುರ್ಗ ಕವಿತೆ- ಪದೇಪದೇ ಮುಗಿಲು ನೋಡುತ್ತೇನೆ…
ನಂದಿನಿ ಹೆದ್ದುರ್ಗ ಒಂದು ಹದವಿರದ ಮಳೆಬಿದ್ದುಬಿಸಿಲು ಇಣುಕಿದ ವೇಳೆದಿಕ್ಕುಗಳ ಫರಕ್ಕಿಲ್ಲದೆಪದೇಪದೇಮುಗಿಲು ನೋಡುತ್ತೇನೆ 'ಕಾಮನಬಿಲ್ಲು ಕಟ್ಟಿತಾ..ಕಾಮನಬಿಲ್ಲು ಕಂಡಿತಾ..?' ಕಾಮನೂ…ಬಿಲ್ಲೂಋಣವಿದ್ದವರ ಪಾಲಂತೆಹರಿದು ಬರುತ್ತಿರುವಹರಿತ ಬಾಣವೊಂದೇನನ್ನ ಹಣೆ ಬರಹದಲ್ಲಿ ನಾನು ಏನನ್ನೂಮಾಡಬಹುದಿತ್ತು ಎದೆ ಕೊಟ್ಟು...
ಪ್ರೇಮವೆಂಬ ಎಲ್ಲರೆದೆಯಲ್ಲೂ ಇರುವ ಹೋಲ್ ಸೇಲ್ ಸರಕು…
ಶಿವಕುಮಾರ ಮಾವಲಿ ಕನ್ನಡ ಪ್ರಕಾಶನ ರಂಗಕ್ಕೆ 'ಮಾವಲಿ ಪಬ್ಲಿಕೇಷನ್' ಪ್ರವೇಶ ಕೊಟ್ಟಿದೆ. ಇದರ ಮೊದಲ ಕೃತಿಯಾಗಿ ಶಿವಕುಮಾರ ಮಾವಲಿ ಅವರ 'ಪ್ರೇಮಪತ್ರದ ಆಫೀಸು ಮತ್ತು ಅವಳು' ಪ್ರಕಟಗೊಂಡಿದೆ. 'ಮಾವಲಿ ಪಬ್ಲಿಕೇಷನ್'ಗೆ 'ಅವಧಿ' ಶುಭಹಾರೈಸುತ್ತದೆ. 'ಪ್ರೇಮಪತ್ರದ ಆಫೀಸು ಮತ್ತು ಅವಳು' ಅವಧಿಯಲ್ಲಿ ಪ್ರಕಟವಾಗಿರುವ ಕಥಾ ಅಂಕಣ. ಈ...
ಮುಳುಗಿದ ಕತೆಗಳು…
ಯಮುನಾ ಗಾಂವ್ಕರ್ ಅವಳ ಕತೆಗಳು ಇದೇ ನೀರಲ್ಲಿ ಮುಳುಗಿ ಹೋಗಿವೆ. ನೀವು ನಂಬಬೇಕೆಂದೇನಿಲ್ಲ, ನಾನೇ ಸ್ವತಃ ಕಂಡಿದ್ದೇನೆ, ಅದು ನನ್ನ ಅನುಭವವಷ್ಟೇ. ಅಂದು ನಾನು ಅಬ್ಬೆಯ ಮಡಿಲಿಗೆ ಮುಖ ಒರೆಸುತ್ತಲೇ ನಿಂತಿದ್ದೆ. ಅವಳು ನಮ್ಮೆಲ್ಲರ ತನ್ನ ತೆಕ್ಕೆಯಲ್ಲಿಟ್ಟು ಗಟ್ಟಿಯಾಗಿ ಕಣ್ಣು ಮುಚ್ಚಿ ನಿಂತಿದ್ದಳು, ನಮ್ಮ ಮುಖದ ಮೇಲೆ...
Pic by Claudio Dell’Osa
ಈ ದಡದಲ್ಲಿಯೇ ಒಂಟಿ…
ಮೂಲ: ಇಂದು ಕಿಲ್ಲಮ್ ಕನ್ನಡಕ್ಕೆ : ಸಂವರ್ತ 'ಸಾಹಿಲ್' ಕೆರೆದಂಡೆಯ ಮೇಲೆ ಕೂತುನೋಡುತ್ತಿದ್ದೇನೆ. ದಾಟಲುಅತ್ತಿಂದಿತ್ತ ಇತ್ತಿಂದತ್ತ ಸಾಗಲುನಾವಿಕ ನೆರವಾಗುತ್ತಿದ್ದಾನೆ.ಕಿಸೆಯೊಳಗೆ ಕೈಯಾಡಿಸಿ ನೋಡಿದರೆನಯಾಪೈಸೆ ಇಲ್ಲ.ನನ್ನಿಂದ ಸಾಲ ಪಡೆದುಹಿಂದಿರುಗಿಸದೆ ಉಳಿದವರೂಯಾರಿಲ್ಲ.ಎಲ್ಲಿಂದಲೋಎಲ್ಲಿಗೋ-ಎಲ್ಲೆಲ್ಲಿಗೋಎಲ್ಲರೂ...
ಸೀಟು ಕಾಯ್ದಿರಿಸಲಾಗಿದೆ…
ಚಂದ್ರಶೇಖರ ಹೆಗಡೆ ನನ್ನ ಪ್ರಯಾಣದೊಳಗೆ ನನಗೆ ಕಾಡಿದ ಚೋದ್ಯದ ಪ್ರಸಂಗಗಳಲ್ಲಿ ಈ ಸೀಟು ಕಾಯ್ದಿರಿಸುವ ಸಂದರ್ಭವೂ ಒಂದು. ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಹೊರಡುವ ಬಸ್ಸನ್ನೇರಬೇಕೆಂದು ನಿಲ್ದಾಣದಲ್ಲಿ ಒಂಟಿಗಾಲಿನಲ್ಲಿ ನಿಂತು ಕಾಯುತ್ತಿದ್ದೆ. ಬಿಸಿಲು ನೆತ್ತಿಗೇರುವುದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ಸಮಯವದು....
ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆಗೆ ಆಹ್ವಾನ…
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ-೨೦೨೩ ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ'ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ...
ಜಿ ರಾಮಕೃಷ್ಣ ಅವರ ಕೃತಿ ಬಿಡುಗಡೆಯ ಫೋಟೋ ಆಲ್ಬಂ…
ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ಡಾ.ಜಿ.ರಾಮಕೃಷ್ಣ ಅವರ 'ಎ ಗ್ಲಿಂಪ್ಸ್ ಇನ್ ಟು ದಿ ಭಗವದ್ಗೀತಾ' ಪುಸ್ತಕವನ್ನು ಖ್ಯಾತ ಗಾಯಕರಾದ ವಿದ್ವಾನ್ ಟಿ.ಎಮ್.ಕೃಷ್ಣ ಅವರು ಬಿಡುಗಡೆ ಮಾಡಿದರು. ಈ ಕೃತಿಯನ್ನು ಡಾ. ಬಿ.ಆರ್. ಮಂಜುನಾಥ್ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಮತ್ತು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ...
ಬಿ ಎ ವಿವೇಕ ರೈ ಕಂಡಂತೆ ‘ಶಬ್ದ ಸೂರೆ’
ಡಾ. ಬಿ. ಎ. ವಿವೇಕ ರೈ ಡಾ.ಯು.ಮಹೇಶ್ವರಿ ಅವರು ಕಾಸರಗೋಡು ಕನ್ನಡನಾಡಿನ ಹಿರಿಯ ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಸಂಶೋಧಕಿಯಾಗಿ, ಕನ್ನಡ ಪ್ರಾಧ್ಯಾಪಕಿಯಾಗಿ ಕನ್ನಡದ ಕಾಯಕವನ್ನು ಕಳೆದ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಕಾಲಾವಧಿಯಲ್ಲಿ ಮಾಡುತ್ತಾ ಬಂದವರು. ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿದ್ದ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಪಾದದ ಗುರುತು ಹುಡುಕುತ್ತಾ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Jimmy Liu
ಸಿ ಎಸ್ ಭೀಮರಾಯ ಓದಿದ ‘ಯುದ್ಧ ಕಾಲದ ಹುಡುಗಿಯರು’
ಸಿ ಎಸ್ ಭೀಮರಾಯ ಚಿನುವಾ ಅಚೆಬೆ (ನವೆಂಬರ್ ೧೬, ೧೯೩೦- ಮಾರ್ಚ್ ೨೨, ೨೦೧೩) ಆಫ್ರಿಕನ್ ಸಾಹಿತ್ಯ ಕಂಡ ಪ್ರಮುಖ ಕವಿ, ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಮತ್ತು ವಿಮರ್ಶಕ. ಅಚೆಬೆ ಸಾಹಿತ್ಯದಲ್ಲಿ ಇಡೀ ಆಫ್ರಿಕಾ ಖಂಡವನ್ನು ಪ್ರತಿನಿಧಿಸಬಲ್ಲಷ್ಟು ಬೀಸಿನ ಶಕ್ತ ಲೇಖಕ. ಅವನು ಆಫ್ರಿಕನ್‌ರ ಅದರಲ್ಲೂ ವಿಶೇಷವಾಗಿ ನೈಜೇರಿಯಾದ ಇಗ್ಬೋ...
ವಸುಂಧರಾ ಕದಲೂರು ಕವಿತೆ- ‘ಕಾಲವಶದಲಿ ಅಬ್ದಿ….’
ವಸುಂಧರಾ ಕದಲೂರು ಅಬ್ದಿಯುಂ ಒರ್ಮೆ ಕಾಲವಶದಿಂಮರ್ಯಾದೆಯಂ ದಾಂಟದೇ ಕಡಲು ಕದಲುವುದಿಲ್ಲನಿಂತ ಆವಾರದ ಆಚೆಗೆತುಳುಕದೆ ಥಳುಕು ಬದುಕಿಗೆಹೊರಳದೇ.. ಬಳುಕಿ ಬಂದನದಿಗಳ ಒಡಲೊಳಗೆಶಾಂತಗೊಳಿಸುವಕಡಲು ತನ್ನೊಡಲಲಿ ನಿತ್ಯನಿರಾಳ ಮೌನದಲಿ ಧ್ಯಾನಮಾಡುವಂತಿರುತ್ತದೆ. ಕಾಲವಶದಲಿ ಅಬ್ದಿಮರ್ಯಾದೆಯಂ ದಾಂಟಿಮುನ್ನಡೆದರೆ…. ಕಡಲ ಮೌನ ಕದಡುವಒಡಲ...
‘ಅಕ್ಷರ ಸಂಗಾತ’ ಓದು ಬಳಗದಲ್ಲಿ…
ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ‘ಅಕ್ಷರ ಸಂಗಾತ’ ಓದು ಬಳಗದ ಸಾಹಿತ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕತೆಗಾರ ದಯಾನಂದ ಅವರ ‘ಸಾಹಿತ್ಯ ಎಂಬ ಲಕ್ಷುರಿ ಮತ್ತು ದೇವ್‌ದಾಸ್ ಸಿಂಡ್ರೋಮ್’ ಎಂಬ ಲೇಖನದ ಬಗ್ಗೆ ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಿಕ ‘ಓದು ಬಳಗ’ದ ಅಂಗವಾಗಿ ಆಯೋಜಿಸಿದ್ದ ಈ...
ಕುಪ್ಪಮ್ಮನ ಸಂಸಾರ…
ರಹಮತ್ ತರೀಕೆರೆ ಬಿಜಿಎಲ್ ಸ್ವಾಮಿ ನನ್ನ ಪ್ರಿಯ ಲೇಖಕರು. ಅವರ 'ಹಸಿರುಹೊನ್ನು', 'ನಮ್ಮಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ' ಅದೆಷ್ಟು ಬಾರಿ ಓದಿರುವೆನೊ. 'ತಮಿಳು ತಲೆಗಳ ನಡುವೆ’ ಓದುವಾಗ ಮೊದಮೊದಲು ಖುಶಿಯಾಗಿತ್ತು. ಮತ್ತೆ ಓದುವಾಗ, ಅಲ್ಲಿನ ಹಾಸ್ಯ-ವ್ಯಂಗ್ಯಗಳಲ್ಲಿ ಸೂಕ್ಷ್ಮವಾಗಿ ಭಾಷಿಕ ಸಮುದಾಯವೊಂದರ ದ್ವೇಷದ ಎಳೆಗಳಿವೆ,...
ಬಸ್ಸು ನಿಲ್ದಾಣ…
ಎನ್ ಶೈಲಜಾ ಹಾಸನ ಬಸ್ಸು ನಿಲ್ದಾಣ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ಜೀವನದಲ್ಲೂ ಈ ಬಸ್ಸು ನಿಲ್ದಾಣ ಅನಿವಾರ್ಯವಾಗಿರುತ್ತದೆ.ಯಾವುದೇ ಊರಿಗೆ ಹೋಗಬೇಕು ಅಂದ್ರೂ ನಾವು ಬಸ್ಸನ್ನು ಅವಲಂಬಿಸಲೇ ಬೇಕು ಅಲ್ಲವೇ. ಈಗೆಲ್ಲ ಮನೆಗೊಂದು ಕಾರಿರುತ್ತೆ. ಎಲ್ಲಿಗೆ ಹೋದ್ರೂ ಕಾರಿನಲ್ಲಿಯೇ ಅಂದುಕೊ೦ಡರೂ, ದೂರದ ಪ್ರಯಾಣ...
‘ನಾವಿಬ್ಬರೇ ಗುಬ್ಬಿ’ ಬಿಡುಗಡೆ ಫೋಟೋ ಆಲ್ಬಂ…
ಕವಿ ವಿಕ್ರಮ ಬಿ ಕೆ ಅವರ ಮೊದಲ ಕವನ ಸಂಕಲನ 'ನಾವಿಬ್ಬರೇ ಗುಬ್ಬಿ' ಬಿಡುಗಡೆ ಮಾಡಲಾಯಿತು. ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಹಮ್ಮಿಕೊಳ್ಳಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು. ಪಂಜರದೊಳಗಿಂದ ಪುಸ್ತಕಗಳ ಕಟ್ಟನ್ನು ಹೊರ ತೆಗೆಯುವುದರ ಮೂಲಕ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರು ಬಿಡುಗಡೆ ಮಾಡಿದರು....
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಹಾಳಾದ್ದು ಸೊಳ್ಳೆ…ಎಲ್ಲಾ ನಿಮ್ಮಿಂದಲೇ..?’
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by Claudio Dell’Osa
ಮೈಕ್ ಬಿಟ್ಟು ಮೌನಕ್ಕೆ ಜಾರಿದ ಸುಮಂಗಲಾ…
ನಾಗೇಶ ಹೆಗಡೆ ನಿನ್ನೆ ಬೆಳಿಗ್ಗೆ (12 ಮಾರ್ಚ್) ಕನ್ನಡದ ಪ್ರಮುಖ ವಿಜ್ಞಾನ ಲೇಖಕರ ಒಂದು ವಿಷಣ್ಣ ಸಮಾವೇಶ ಬೆಂಗಳೂರಿನಲ್ಲಿ ಜರುಗಿತು. ಹಠಾತ್ ನಿಧನರಾದ ಶ್ರೀಮತಿ ಸುಮಂಗಲಾ ಎಸ್ ಮುಮ್ಮಿಗಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಕೆಯಾಯಿತು. ಆನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ನುಡಿನಮನಗಳು ಹನಿಗೂಡಿದವು. ಸುಮಂಗಲಾ ಬೆಂಗಳೂರು...

















