–ಮಹಮ್ಮದ್ ರಪೀಕ್ ಕೊಟ್ಟೂರು
ಬಿಡುಗಡೆ
ಬಣ್ಣಗಳು ಒಂದರೊಳಗೊಂದು
ಬೆರೆತರೆ
ಹೊಸದರ ಸೃಷ್ಟಿ…!
ಹಳೆಯದರ ಗೋಜಿಲ್ಲದ
ಹಿಂದಿನದೆಲ್ಲವ
ತೊರೆದು
ಬಿಡುಗಡೆ ಪಡೆದಂತೆ..
ನಾವೇಕೆ ಹಾಗೇ?
ನಾವು ಅವರೊಂದಿಗೆ ಬೆರೆಯಲಿಲ್ಲ
ನಾಟಕದಂತೆ
ನಮ್ಮೊಂದಿಗೆ
ಒಂದಾದೆವೆಂದರು
ಹೊಸದೋ.. ಊಹೂಂ
ಅಸಾಧ್ಯವೇ ಸರಿ
ನಮ್ಮತನವನ್ನೆಲ್ಲಾ
ಅವರ ಮೇಲೇ ಹೇರಿ
ಅವರದ್ದನ್ನೆಲ್ಲಾ
ಗಾಳಿಗೆ ತೂರಿ
ನಮ್ಮದೇ ಶ್ರೇಷ್ಠವೆಂದು
ಬೀಗುತ
ನಾವು ನಾವೇ ಆಗಿರುವೆವು
ಅವರು…
ಅಲ್ಲಿಯೇ….?
ನೀರಿನಂತಾಗಬೇಕು
ತಳದ ತಗ್ಗು-ದಿನ್ನೆಗಳ
ಮುಚ್ಚಿ
ಸಮತೆ ಕಾಯವಂತೆ
ಹರಿವು ನಿಂತಾಗಲೊಮ್ಮೆ ತಿಳಿಯಾಗಬೇಕು
ಬಿಡುಗಡೆ ಪಡೆಯುವಂತೆ
ಅದೂ.. ಇದೂ..
ಅವರೂ.. ಇವರೂ..
ಎಲ್ಲ.. ಎಲ್ಲವ ಸೇರಿ
ಹೊಸದಾದ ಹೊಸದೊಂದು
ಸೃಜಿಸಿದಂತೆ..!






0 Comments