ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

​ತಲೆಯಲಿ ಹರಕಲು ಪೆಟ್ಟಿಗೆ

​- ದಿನೇಶ್ ನಾಯಕ್

ಆಟದವನು

​ತಲೆಯಲಿ ಹರಕಲು ಪೆಟ್ಟಿಗೆ
ಕೈಯ್ಯಲ್ಲಿ ತಾಳ, ಬಗಲಲ್ಲಿ ಚೀಲ
ಹೊತ್ತು ಮುಳುಗುವ ಹೊತ್ತಿನೊಳಗೆ
ಬರಿಗಾಲ ಬಳಸು ನಡಿಗೆ
ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ

ಅಪ್ಪ-ಣೆ ದೊರೆ-ತರೆ
ಗುಂಡಿ ತೆಗೆದು, ​ಕಂಬ ಕಟ್ಟಿ
ಕೇಳಿ ಬಾರಿಸಿ, ಊರ ಸೇರಿಸಿ
ಸರೀಕರ ಜೊತೆ ಸರಿಮಿಗಿಲೆನಿಸಲು ಹೆಣ-ಗಾಟ, ಆಟ-ಬಯಲಾಟ

​ಹೊತ್ತು ಇಳಿಯಲು ಪೃಥ್ವಿಪಾಲಕ,‌ನಾಕಲೋಕದ ನಾಯಕ, ಪಾತಾಳದ ಅಧಿನಾಯಕ
ಮತ್ತೆ ಬೆಳಕು ಮೂಡಲು
ಬಣ್ಣದ ಮನೆಯ ಮಡಿವಾಳತನದ ಕಾಯಕ

ಹಿರಿ ತಲೆ ತಿನ್ನುವ ಗಡಸು ಎಲೆಗೆ
ಸುಣ್ಣ-ಬಣ್ಣವ ಅರಸುವ ಬಾಲಕ
ಆಗಾಗ ಅಡಕತ್ತರಿಯಲ್ಲಿ ಸಿಲುಕುವ ಚಾರಕ

ಎಪ್ಪತ್ತು ತಿರುಗಾಟದ ಕಥನದುದ್ದಕ್ಕೂ
ಆರ್ಥ-ಗಾರಿಕೆಯದ್ದೇ ಕರಡಿಯಾಟ
ದೇವರ ಬಿಟ್ಟ ಬಂಜರು ನೆಲದಲ್ಲಿ
ಈ ತನಕ ಗೂಳಿ ಹೂಂಕರಿಸಿದ್ದೇ ಇಲ್ಲ

ಹೋಮ-ಹವನ, ಕ್ಯಾಸೆಟ್ ಹರಿಕತೆಯಲ್ಲೂ
ಮೂರು-ಕಾಸಿನ ಹುಡುಕಾಟ
ಸಾಬರ ಖಬರಸ್ಥಾನಕ್ಕೆ ತಂದ
ಅಕ್ಕಿ ಬೇಯಿಸಿ ತಿಂದ
ಅವನ ಅರ್ಥದಲ್ಲೂ ಕಣ್ಮರೆಯಾಗಿದೆ ಈ ಗೋಳಾ-ಟದ ಅರ್ಥ

‍ಲೇಖಕರು Admin

26 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading