ಹೀಗೊಂದು ಕುಂದಾಪ್ರ ಕನ್ನಡದ ಪದ್ಯ

ಎನ್ ಶಂಕರ ಕೆಂಚನೂರು

ಬಿಸ್ಲ್ ಉರಿಯಲ್ ಕಡ್ಲ್ ಬದಿಯಂಗ್
ಆಚೀಚ್ ಕಾಂತ ಕೈ-ಕೈ ಹಿಡ್ಕ ನೆಡದ್
ನಿಂಗ್ ನೆನ್ಪಿತ್ತಾ ಇವ್ಳೆ ?
ಯಾರಾರು ಕಾಂತ್ರ್ ಅಂದ್ಹೇಳಿ ಹೆದ್ರ್’ಕಂತ
ಒಂದ್ ಮುಲ್ಯೇಗ್ ಹೋಯ್ ಕೂಕಂಡದ್
ನಿಂಗ್ ನೆನ್ಪಿತ್ತಾ ಇವ್ಳೆ ?
ಹೊತ್ ಕಂತು ಹೊತ್ತಾರೂ
ಮನೀಗ್ ಹ್ವಾಪ್ಕ್ ಕುಸೀ ಇಲ್ದೇ ಒದ್ದಾಡ್ತಿದ್ದದ್
ನಿಂಗ್ ನೆನ್ಪಿತ್ತಾ ಇವ್ಳೆ ?

ಬಂದ್ ಬಸ್ ಪೂರ ಬೇಕಂದೇ ಬಿಟ್ಕಂಡ್
ಒಬ್ರನ್ನೊಬ್ರ್ ಕಂಡ್ ನಗಾಡಿದ್
ನಿಂಗ್ ನೆನ್ಪಿತ್ತಾ ಇವ್ಳೆ ?
ಸುರ್ಗಿ ಮರ್ದಡಿ ಹೂಗ್ ಹೆಕ್ಕಿ ಕಟ್ಟದ್
ನೀನ್ ಅದನ್ ಮುಡ್ಕಂಡದ್
ನಿಂಗ್ ನೆನ್ಪಿತ್ತಾ ಇವ್ಳೆ ?
ದಾರಿಮೇಲ್ ಸಿಕ್ಕಿದ್ ನವಿಲ್ ಗಿರಿ
ಮರಿ ಹಾಕತ್ ಅಂದ್ಹೇಳಿ ಪುಸ್ತಕದಲ್ ಇಟ್ಟಿದ್
ನಿಂಗ್ ನೆನ್ಪಿತ್ತಾ ಇವ್ಳೆ ?
ಒಟ್ಟಿಗೆ ಬದ್ಕು ಕನ್ಸ್ ಕಂಡದ್ ಇಬ್ರೂ
ಆ ಕನ್ಸ್ ಹ್ಯಾಂಗ್ ಕರ್ಗಿ ಹೋಯ್ತ್ ಅಂದ್ಹೇಳಿ
ನಿಂಗ್ ನೆನ್ಪಿತ್ತಾ ಇವ್ಳೆ ?
ನಂಗಿಂತ ಒಳ್ಳೇವ್ಳ್ ನಿಂಗ್ ಸಿಕ್ತಾಳ್ ಅಂದ್ಹೇಳಿ
ತಿರ್ಗಿ ಸೈತ ಕಾಣ್ದೆ ನೀ ಮರ್ಕಂತ ಹ್ವಾದ್
ನಿಂಗ್ ನೆನ್ಪಿತ್ತಾ ಇವ್ಳೆ ?
ಆ ಒಳ್ಳೆಯವ್ಳ್ ನೀನೇ ಆಪುಕೆ ಆತಿಲ್ಯಾ ಇವ್ಳೆ ?
ನಾ ಇನ್ನೂ ಕಾಯ್ತಿದ್ದೆ ನೀ ಬತ್ತಿಲ್ಯಾ ಇವ್ಳೆ ?
 

‍ಲೇಖಕರು G

May 31, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Lokesh Raj Mayya

    ಹೊಸತನ ಮೂಡೈತೆ ಇವ್ರೆ…
    ತುಂಬಾ ಚೆನ್ನಾಗಿದೆ…ವಿಭಿನ್ನ ಶೈಲಿ ಬರವಣಿಗ ೆಇಷ್ಟ ಆಯ್ತು

    ಪ್ರತಿಕ್ರಿಯೆ
    • shankar

      ಕುಂದಾಪುರ ಕನ್ನಡ ಕನ್ನಡದ ಅನೇಕ ಪ್ರಾದೇಶಿಕ ರೂಪಗಳಲ್ಲಿ ಒಂದು ಕುಂದಗನ್ನಡ ಎಂದೂ ಕರೆಯಲಾಗುತ್ತದೆ

      ಪ್ರತಿಕ್ರಿಯೆ
  2. kvtirumalesh

    ಸೊಗಸಾಗಿದೆ ಕುಂದಾಪುರ ಕನ್ನಡದ ಈ ಭಾವಗೀತೆ! ನಿಂಗ್ ನೆನ್ಪಿತ್ತಾ ಇವ್ಳೆ ? ಎಂಬ ಪಲ್ಲವಿ ಆಹ್ಲಾದಕರವಾಗಿದೆ.
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: