ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವರ್ಗ ಧರೆಗೇ ತಂದ್ಯಲ್ಲೋ ಮಹಾರಾಯ!

ಸಾಹೇಬ

 ಪ್ರಕಾಶ್ ಕೊಡಗನೂರ್

 

ಅಲಲಲಾ ಸಾಹೇಬ

ಆದೆ ನೀ ಪ್ರಭುದೇವ!

 

ಅದೇನು ಪರಾಕು

ಅದೆಂಥ ಘನತೆ

ಕೂತಲ್ಲಿ ನಿಂತಲ್ಲಿ

ನಿನ್ನದೇ ಜನತೆ

 

ಅಧಿಕಾರಿಗಳೇ

ಅರ್ಚಕರು ನಿನಗಾದರೆ

ಬಡಜನರೇ

ಭಕ್ತರು ನಿನ್ನಯ ಸೇವೆಗೆ

 

ಎಲ್ಲೆಲ್ಲಿ ಓದಿದ್ಯೋ

ಏನೆಲ್ಲಾ ಬರೆದಿದ್ಯೋ;

ಹಗಲು ಇರುಳೆನ್ನದೆ

ಹೇಗೆಲ್ಲಾ ಶ್ರಮಿಸಿದ್ಯೋ?

 

ಯಾರ್ಯಾರ ಕೈ ಕಾಲ್ಹಿಡಿದು

ರೆಕಮೆಂಡು ಮಾಡ್ಸಿದ್ಯೋ;

ಕಪ್ಪಕಾಣಿಕೆಗೂ ಒಪ್ಪಿ

ಎಷ್ಟೆಷ್ಟು ಹಂಚಿದ್ಯೋ?

 

ಅಂತೂ ಆದೆ ನೀ ಸಾಹೇಬ

ದೈವಕಳೆಯಲಿ ಮಿಂದೆ ಅಬ್ಬಬ್ಬಾ!!

ಅತ್ಲಾಗ ಇತ್ಲಾಗ

ಓಣ್ಯಾಗ ಊರಾಗ

ಎಲ್ಲೆಲ್ಲೂ ಹವಾ

ನಿಂದೇ ಕಣೋ

 

ಹೋದಲ್ಲಿ ಬಂದಲ್ಲಿ

ಅವರಿವರ ಮನೆಯಲ್ಲಿ

ಝಗಮಗಿಸುವ ನೀ

‘ಇಂದ್ರ-ಚಂದ್ರ’ ಅಣೋ

 

ರಂಭೆ ಊರ್ವಶಿಯರು

ನಿನ್ನೆಡಬಲಗಳಲ್ಲಿ

ಸುರಸುಂದರಾಗಿಯರು

ನೀ ಹೆಣೆವ ಬಲೆಯಲ್ಲಿ!

 

ಹೂಸಿದರೂ ನೀ ಮೂಸುವರು

ಹುಸಿನಗೆಯ ಚೆಲ್ಲುವರು

ದುರ್ಗಂಧಕೂ ಸುಗಂಧದ

ಬಿರುದು ದಯಪಾಲಿಸುವರು

 

ಏನು ಮಹಿಮೆಯೋ

ನಿಂದು ಸಾಹೇಬ

ಸ್ವರ್ಗ ಧರೆಗೇ

ತಂದ್ಯಲ್ಲೋ ಮಹಾರಾಯ!

‍ಲೇಖಕರು nalike

2 June, 2020

3 Comments

  1. ಪ್ರಕಾಶ್ ಕೊಡಗನೂರ್

    ನನ್ನ “ಸಾಹೇಬ ” ಕವಿತೆ ಪ್ರಕಟಿಸಿದ ಅವಧಿಗೆ ಧನ್ಯವಾದಗಳು.

  2. keerthyraj C M

    ಸಾಹೇಬ ಕವಿತೆಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ…… ಪತ್ರಿಕೆಗೆ ಹ್ಯಾಟ್ಸ್ಆಫ್

  3. T S SHRAVANA KUMARI

    ತುಂಬಾ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading