-ತಿಪ್ಪೇಸ್ವಾಮಿ ಗುಜ್ಜಿ ಘಟ್ಟಿಹೊಸಹಳ್ಳಿ
ಚಿತ್ರಪಟ
ಕೊರವಂಜಿಯ ಮಾತಿಗೆ
ಕುಂಚಕ್ಕೆ ಕೈಯಾದ ಸೀತೆ
ರಾವಣನ ಜೀವಂತ ಪಟ
ಈ ಚಿತ್ರಪಟ
ಕಣ್ಣ ಹಚ್ಚೆಯ ಚಿತ್ತ ಭಿತ್ತಿಯಲ್ಲಿ
ಬಿತ್ತರವಾದವನು
ಚಿತ್ರಪಟದಿ ಚಿತ್ತಾರವಾದ
ಅಂಗ ಅಂಗವೂ ಕಣ್ಣ ಹಾದಿ
ಕೂದಲೆಳೆಯಂತೆ ನವಿರು
ಬೆರಗು ಮೂಡಿಸುವಂತ ಬಿಂಬ
ಅವನ ಧ್ಯಾನಿಸಿದ್ದೆ…?
ಈ…ಪ್ರತಿಬಿಂಬ
ಚಿತ್ರ ವೆನ್ನುವ ಹೊರತು
ಎಲ್ಲವೂ ಜೀವಂತ
ಒಳಗೆಲ್ಲೋ ಇದ್ದನೀತ
ಕಾಣನಲ್ಲೊ ರಾಮ ‘ನಾಥ ‘
ಕುಂಚಕ್ಕೆ ಕೈ ಆದವನು
ಮೈ ಆದವನು
ಮರೆಯಲೆಲ್ಲೋ …ನಿಂತು
ಮನದೊಳಗೆ ಇಳಿದವನು
ಚಿತ್ರಪಟಕೆ ಜೀವ ಬಂದರೆ!
ರಾಮ…ರಾಮ
ಬಂದೀತೆ ಜೀವ
ನನ್ನೊಳಗಿನ ಬಿಂಬ
ನಾನೇ ಬಿತ್ತಿದ್ದು….ಹೆತ್ತಂತಲ್ಲವೇ
ಮಗನಲ್ಲವೇ… ರಾವಣ
ರಾಮ ಕೆಂಡವಾದ
ಸೀತೆ ಚಿತ್ರಪಟವಾದಳು….ಗುಜ್ಜಿ






0 Comments