ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ..

ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕಳೆದ ಒಂಬತ್ತು ವರ್ಷಗಳಿಂದ ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾಸ್ಪರ್ಧೆ’ಯನ್ನು ನಡೆಸಿಕೊಂಡು ಬರುತ್ತಿದೆ. ನಾಡಿನ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪುರಸ್ಕಾರ ಪಡೆಯುವ ಕಥೆಯು ರೂ. ೫೦೦೦/- ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಪಡೆಯಲಿದ್ದು, ಇದೇ ಜೂನ್ ತಿಂಗಳಲ್ಲಿ ನಡೆವ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಎಂದು ‘ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ’ ತಿಳಿಸಿದೆ.

ಉದಯೋನ್ಮುಖ ಕತೆಗಾರರು ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಪಡೆದ ‘ನಮ್ಮ ಕಾಲೇಜಿನ ವಿದ್ಯಾರ್ಥಿ/ನಿ’ ಎಂಬ ದೃಢೀಕೃತ ಪ್ರಮಾಣ ಪತ್ರದೊಂದಿಗೆ ತಮ್ಮ ಅಪ್ರಕಟಿತ ಸ್ವರಚಿತ ಕಥೆಯೊಂದನ್ನು ಕಳುಹಿಸಬೇಕು.

ವಿ.ಸೂ : ಕತೆಗಳನ್ನು ಕಾಗದದ ಒಂದೇ ಮಗ್ಗುಲಿಗೆ ಕಾಗುಣಿತ ತಪ್ಪಿಲ್ಲದೇ ಶುದ್ಧವಾಗಿ ಬರೆದು ಕಳಿಸಿ ಅಥವಾ ಟೈಪ್ ಮಾಡಿ ಕಳಿಸಿ. ಮೇಲ್ ಮೂಲಕವೂ ಕತೆಯನ್ನು ಸ್ವೀಕರಿಸುತ್ತೇವೆ. ಮೇಲ್ ಜೊತೆಯಲ್ಲೂ ದೃಢೀಕೃತ ಪ್ರಮಾಣ ಪತ್ರದ ಲಗತ್ತಿರಲಿ.
ಕಥೆ ಕಳುಹಿಸಲು ಕೊನೆಯ ದಿನಾಂಕ : ೧೫ ಮೇ ೨೦೨೬

ಕಥೆ ಕಳುಹಿಸಬೇಕಾದ ವಿಳಾಸ :

ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ ಕಥಾಸ್ಪರ್ಧೆ-೨೦೨೬, ಅಕ್ಷರ ಸಾಹಿತ್ಯ ವೇದಿಕೆ, c/o ಸುನಂದಾ ಪ್ರಕಾಶ ಕಡಮೆ, #90, ‘ನಾಗಸುಧೆ’ ೬/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- ೫೮೦೦೩೧, ದೂರವಾಣಿ : 9845779387 ಮೇಲ್ ವಿಳಾಸ: sunandakadame@gmail.com

‍ಲೇಖಕರು Admin

7 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading