-ಮಹಾದೇವ ಎಸ್ ಪಾಟೀಲ
ಆ ದೇವರ ದೃಷ್ಟಿಯಲ್ಲಿ…
ಜಾತಿ, ಧರ್ಮಗಳು
ಮಂದಿರ, ಮಸೀದಿಗಳು
ಇವು ನಾವು ಕಟ್ಟಿಕೊಂಡಿದ್ದೇವೆ
ಅಲ್ಹಾ, ಶಿವ,ಯೇಸು, ಬುದ್ದ
ಬೇರೆ ಬೇರೆ ನಾಮಗಳು
ನಾವು ಇಟ್ಟುಕೊಂಡಿದ್ದೇವೆ
ಬಡವ, ಸಿರಿವಂತ
ಸೋಮಾರಿ, ಸಾಧಕ
ಇದನ್ನು ನಾವು ಮಾಡಿಕೊಂಡಿದ್ದೇವೆ
ಗುಡಿಸಲು, ಮನೆ
ಮಹಲು, ಅರಮನೆ
ನಾವು ನಿರ್ಮಾಣ ಮಾಡಿದ್ದೇವೆ
ಕಳ್ಳತನ, ಸುಳ್ಳತನ
ದರೋಡೆ, ಕೊಲೆ
ಇದನ್ನು ನಾವು ಸೃಷ್ಟಿಸಿಕೊಂಡಿದ್ದೇವೆ
ನೋವು, ನಲಿವು
ವೇದನೆ, ರೋಧನೆ
ಇದನ್ನು ನಾವು ಹುಟ್ಟಿಸಿಕೊಂಡಿದ್ದೇವೆ
ದುವಾ ಮಾಡಿ ದಿನವೂ
ಬೇಡಿಕೊಳ್ಳುತ್ತೆವೆ
ದೇವರ ಹೆಗಲಿಗೆ ಬಾ(ಹಾ)ರವ ಹಾಕಿ
ಇದೆಲ್ಲವೂ ನಾವೇ
ಸೃಷ್ಟಿಸಿಕೊಂಡಿದ್ದು
ನಾವೇ ಹುಟ್ಟಿಸಿಕೊಂಡಿದ್ದು
ಇಲ್ಲಿ ಮಾಡಿದ ಪಾಪ, ಪುಣ್ಯ
ನಾವೇ ಅನುಭವಿಸಬೇಕು
ಆ ದೇವರ ದೃಷ್ಟಿಯಲ್ಲಿ ಎಲ್ಲವೂ ಸಮ.






0 Comments