ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಹೆಚ್ ಭಾಗ್ಯ ಅನುವಾದಿತ ಕವಿತೆ- ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ…

ಮೂಲ: ಈಯ ಕಿವಾ

ಕನ್ನಡಕ್ಕೆ :ಸಿ ಹೆಚ್ ಭಾಗ್ಯ

ಉಕ್ರೇನಿನ ಯುವ ಕವಿ, ಅನುವಾದಕಿ ಹಾಗೂ ಪತ್ರಕರ್ತೆ ಈಯ ಕಿವಾ ಅವರ ಒಂದು ಕವಿತೆಯ ಅನುವಾದ


ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ.

ಈ ಶವದ ಪೆಟ್ಟಿಗೆ ನಿನಗಾಗಿ, ಪುಟ್ಟ ಹುಡುಗ.
ಹೆದರಬೇಡ, ಮಲಗು.
ಬದುಕೆನ್ನುವ ತುಪಾಕಿ ನಿನ್ನ ಮುಷ್ಟಿಯಲ್ಲಿ
ಬಿಗಿಯಾಗಿ ಸಿಕ್ಕಿಕೊಂಡಿದೆ.

ನಮಗೆ ಸಾವಿನಲ್ಲಿ ನಂಬಿಕೆ ಇರಲಿಲ್ಲ,
ನೋಡು-ತಗಡಿನ ಹಾಳೆಯ ಶಿಲಬೆಯನು.
ನಿನಗೆ ಕೇಳುವುದೆ?
ಎಲ್ಲಾ ಗಂಟಾ ಗೋಪುರಗಳೂ ಸ್ತಬ್ಧವಾಗಿದೆ.

ನಾವು ನಿನ್ನನ್ನು ಮರೆಯುವುದಿಲ್ಲ, ನಂಬು,
ನಂಬು, ನಂ…..
ನಂಬಿಕೆಯು ನಿನ್ನ ತೋಳ ಹೊಲಿಗೆಯಿಂದ
ರಕ್ತ ಒಸರುತ್ತಿದೆ.

ಮಂತ್ರ, ಪ್ರಾರ್ಥನೆ, ಸ್ತೋತ್ರ
ನಿನ್ನ ಗಂಟಲಿನಲ್ಲಿ ಸಿಕ್ಕಿಊದಿಕೊಂಡಿದೆ
ಈ ಕೆಟ್ಟ ಚಳಿಗಾಲದಲ್ಲಿ
ಎಲ್ಲರೂ ಖಾಕಿ ಧರಿಸಿದ್ದಾರೆ.

ಶಾಯಿಯನ್ನು ಪಡೆಯುತ್ತಿರುವ
ಫೆಬ್ರವರಿ ಬಿಕ್ಕುತ್ತಿದೆ.
ಮತ್ತು ಮೇಜಿನ ಮೇಲಿರುವ ಮೇಣದಬತ್ತಿ
ಉರಿಯುತ್ತಾ..ಉರಿಯುತ್ತಾ.. ಕಣ್ಣೀರಿಡುತ್ತಿದೆ.

‍ಲೇಖಕರು Admin

2 March, 2022

2 Comments

  1. T S SHRAVANA KUMARI

    ಮನ ಮಿಡಿಯುವಂತಿದೆ

  2. prathibha nandakumar

    ಚೆನ್ನಾಗಿದೆ ಭಾಗ್ಯ . Timely.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading