ಬದುಕ ಅವಿಸ್ಮರಣೀಯ ಘಳಿಗೆ…

ಸುಧಾರಾಣಿ ನಾಯ್ಕ

ಕವನಗಳ ಬಗ್ಗೆ ಅಭಿಮಾನವಿದ್ದರೂ ಸಂಕಲನ ತರುವಾಗ ಸಾವಿರ ಗೊಂದಲ, ಅಳಕು, ಕಾಡಿದ್ದು ಸುಳ್ಳಲ್ಲ. ಆಗ ಬೆನ್ನಿಗೆ ಹರಸಿ ನಿಂತವರೇ ಸಹೋದರಿ ಕಾತ್ಯಾಯಿನಿ ಕುಂಜುಬೆಟ್ಟು ಮತ್ತು ಗುರುಗಳಾದ ಸುಬ್ರಾಯ ಮತ್ತಿಹಳ್ಳಿ ಸರ್. ಅಡಿಗಡಿಗೂ ಮೃದು ಮಾತಿನಲ್ಲೇ ಭರವಸೆ ಬಿತ್ತಿದರು. ತಿದ್ದಿದರು.

ಹೊತ್ತಿಗೆ ಕೈ ಸೇರಿದಾಗಲೂ ನನ್ನಲ್ಲಿ ಹಿಂಜರಿಕೆ. ಆಗ ತೀರಾ ಅಭಿಮಾನದಿಂದ ಬಿಡುಗಡೆಯಾಗಲೇಬೇಕೆಂಬ ಪಟ್ಟು ಹಿಡಿದವರು ಸಹ ಇವರೇ. ಕಾರ್ಯಕ್ರಮದ ದಿನ ನಿಗದಿಯಾದ ಮೇಲೆ ತೀವ್ರ ಅನಾರೋಗ್ಯ ಕಾಡಿದಾಗಲೂ ಎಲ್ಲೂ ತಪ್ಪಿಸಿಕೊಳ್ಳುವ ಕಾರಣಕೊಡದೆ ಕಾತ್ಯಾಯಿನಿ ಅಕ್ಕ ಪ್ರೀತಿಯಿಂದ ಬಂದ ಪರಿ ನಾನೆಂದೂ ಮರೆಯಲಾರೆ.

ಕಾರ್ಯಕ್ರಮಕ್ಕೆ ನಮ್ಮೊಂದಿಗೆ ನೀವಿರಬೇಕೆಂದು ಕೇಳಿದಾಗ ಯಾವ ಕಾರಣವೂ ಕೊಡದೆ ಅಭಿಮಾನದಿಂದ ಒಪ್ಪಿಕೊಂಡವರು ಸುಮುಖಾನಂದ ಜಲವಳ್ಳಿ ಹಿರಿಯ ಸಾಹಿತಿಗಳು, ಪ್ರೀತಿಯ ಹಿರಿಯಣ್ಣರಾದ- ಕೆ ಶ್ರೀಧರ ವೈದ್ಯ ಸರ್, ಗಂಗಾಧರ ಕೊಳಗಿ ಸರ್, ಗೋಪಾಲ ಸರ್. ನಾಗರಾಜ ಮಾಲ್ಕೋಡ್, ಭಾವ ನಾಗರಾಜ ಹನೇಹಳ್ಳಿ, ಅಡಿಗಡಿಗೂ ಸಾಥ್ ಕೊಟ್ಟ ಸಂಗಾತಿ ರಾಫವೇಂದ್ರ ನಾಯ್ಕ.

ಎಲ್ಲ ಹಿರಿಯರ ಸಮ್ಮುಖದಲ್ಲಿ ಈ ಕಿರಿಯಳ ಮನದ ರಿಂಗಣ ರಿಂಗಣಿಸಿತು. ಕವನ ಸಂಕಲನ ಬಿಡುಗಡೆ ಆಯಿತು. ಕಾರ್ಯಕ್ರಮಕ್ಕೆ ಸಾರಥಿಯಾದವರು ಉಷಾ ನಾಯ್ಕ ಮತ್ತು ವೆಂಕಟೇಶ ಮಡಿವಾಳ. ಆಗಾಗ ಕವನ ಗಾಯನ ಮಾಡಿದ ಸುಮಾ ಹೆಗಡೆ, ಸುಮಿತ್ರಾ ಶೇಟ್. ಕವನಕ್ಕೊಂದು ಹೊಸ ಮೆರಗನ್ನೇ ಕೊಟ್ಟದ್ದು ಸತ್ಯ. ಇದಿಷ್ಟು ವೇದಿಕೆಯದ್ದಾದರೇ…ಮಂಭಾಗದಲ್ಲಿ ಸಾಲು ಸಾಲು ಹಿರಿಯರು, ಆತ್ಮೀಯರು, ತವರಿನವರು…ಧನ್ಯೋಸ್ಮಿ ಎನ್ನಿಸಿದ ಕ್ಷಣವಿದು…

ಮತ್ತೇ ಬರಲಿ….

‍ಲೇಖಕರು Admin

March 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: