-ಚನ್ನಪ್ಪ ಅಂಗಡಿ
ಮುಕ್ಕಾಲು ಭಾಗ ನೀರಂತೆ ಅದರ ಕಲಕುವಾಟ ಬಲು ಜೋರಂತೆ! ಸಾಗರದಾಟದ ಕೈಯುದ್ಧ, ಓಗರದವನ ಬಾಧ್ಯತೆಗೆ ಬಾಯುದ್ಧ. ಗೆಳೆತನ ಬಡತನ ಬಾಳ್ತನದ ಕಣ್ಣಾಗಿ, ಗೆಳೆಯನ ಹುಡುಕುತ ಹಸಗೆಟ್ಟು ಬಂದವನು, ಸಖಿಯೊಡಗೂಡಿ ಗೂಡ ಕಟ್ಟಿಕೊಂಡು ಕಸಿವಿಸಿ ಬಾಳಿನ ಕಷಾಯ ಕುಡಿದವನು. ಹಸುಗೂಸಿನಂಗ ಗುಂಪಿನೊಳಗಾಡಿ ಗಳಿಬಿಳಿಯಿಂದಲೇ ಸುಳಿದೆಗೆದ ಬೆಳಸು. ನಾನು ನೀನು ತೀರದ ಹುಡುಕಾಟದಿ ಅವರು ಇವರು ತೆರೆಗಳಾಟದಿ, ಹಕ್ಕೀಯ ಹಾರಿಸುತ ಹಕ್ಕಿಪಕ್ಕಿ ತೆರೆೆಗಳ ನಾಡೀ ಹಿಡಿದು ಮೋಡಿ ಸಮ್ಮೋಡಿ. ಉಪ್ಪಿನ ನೀರು ಗಟ್ಟಾö್ಯಗಿ ಕುಡಿದು ಉಂಡಬೇ೦ಕೀಲೆ ಭಟ್ಟೀಯಿಳಿಸಿ; ಗಪ್ಪೀಲೆ ಸಾಗರಬಿದ್ದು ಉಪ್ಪಿನ ನೀರನು ಹಾಲಕೆರೆಯಲಿ ಸುರಿದೂ .. ಸುರಿದು……. ಸಾಗರದ ಮಟ್ಟ ಸರಿದೂ ಸರಿದು ……! ಓಗರವು ಮೇಲೋಗರವಾಗಿ ಸಾಗರದಾಟದ ಮಾತು ಕಾಮನಕಟ್ಟಿ ಕಲರ್-ಅವ. ಕಾಮಣ್ಣನ ಸುಟ್ಟಬೂದಿ, ಕಂಡವರೊ೦ದೀಗಿನ ಕಾದಾಟದ ಗೂದಿ…. ಮತ್ತ ಮಾತಿನ ವ್ಯಾಧಿ. ಸಂತ ಕುಂತ ಸಮಾಧಿ. ಕಂಡಕ೦ಡವರ ನಡುವೆ ಮರೆಯಾಗಿ, ಕಂಡವರಿಗಷ್ಟೇ ತೆರೆಯಾಗಿ, ಹಂಗ ತೆರೆತೆರೆಯಾಗಿ ಸುತ್ತಿ ಬಂದ ಏರಿಕೇರಿ; ಎಲ್ಲಾ ಒಂದ ಸಾಧನಕೇರಿ. ಅಂಗ ಮರೆದು, ರಂಗ ತೆರೆದು ಸಾಗರದಾಟ ಶುರುವಾತು. ಹಾಲಕೆರೆ ತುಂಬಿ ಬಂತು. ಮಸರು ಗಡಿಗೇಲಿ ಮಜ್ಜಿಗೆ ಕಡಿದು, ಬೆಣ್ಣೆಯುಂಡಿ ಚೆಂಡ್ ಮಾಡಿ ಆಟ ಆಡಿದ ದತ್ತ ಕೊಡೆ ಹಿಡಿದ ಗತ್ತ. ಹಾಯಿದೋಣಿ, ಹಾರುದೋಣಿ ಹಂಗಿಲ್ಲದವಗ ಯಾವ ಗೇಣಿ? ಸಾಗರದಾಟ ನಿಲ್ಲದ ಹೂಟ, ಜಡಿದು ಕುಂತ ಇಲ್ಲೇ ಗೂಟ. ಇದ್ದೆರಡು ಕಣ್ಣಲಿ, ನಿದ್ದೆಯನು ಮರೆತು ನೋಡೇಬಿಟ್ಟ ಈ ‘ಜಗ’ದ ಮಾಟ. ತಪ್ಪಿಸಿಕೊಂಡ ‘ಯುಗ’ದ ಕಾಟ






0 Comments