-ಸಂತೆಬೆನ್ನೂರು ಫೈಜ್ನಟ್ರಾಜ್
ನನ್ನ ಕಣ್ಣೀರ ಹನಿಯಲಿ ನೀ ಮುತ್ತಾಗಿ ನೆನಪಾಗುವೆ
ಮೌನದ ವಿರಹ ಕಾಡಲಿ ನೀ ಹಾಡಾಗಿ ನೆನಪಾಗುವೆ
ಚಂದಿರನ ಬೆಳಕಿನಲಿ ನಿನ್ನ ಮುಖವ ಹುಡುಕುವೆ ಒಬ್ಬನೇ
ಕತ್ತಲ ಹೃದಯದೊಳಗೆ ನೀನು ದೀಪವಾಗಿ ನೆನಪಾಗುವೆ
ಕೈ ಹಿಡಿದು ನಡೆದ ದಾರಿಯ ಹೂ ಗಂಧ ಇನ್ನೂ ಎದೆಯಲಿದೆ
ಕಾಲವಿದು ಅಳಿಸಿದ ಹೆಜ್ಜೆಗಳಲಿ ನೀ ಗುರುತಾಗಿ ನೆನಪಾಗುವೆ
ನೀ ಸಿಗದ ದೂರದ ತೀರವಾದೆ, ನಾ ಅಲೆಯಾಗಿ ಅಲೆದೆ ಅಷ್ಟೇ
ವಿರಹದ ಈ ಸಾಗರದಲಿ ಒಲವೇ ನೀನು ದಡವಾಗಿ ನೆನಪಾಗುವೆ
ಮರೆತುಬಿಡುವೆನೆಂದು ನಾ ಮನಸಿಗೆ ಹೇಳಿಕೊಂಡರೂ ಛೆ..
ಫೈಜ್ ಉಸಿರಿನ ಉಸಿರಲಿ ನೀ ಕಣ ಕಣವಾಗಿ ನೆನಪಾಗುವೆ






0 Comments