ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಹೊಸ ಕವಿತೆ- ಇರಲಿ ಗುಪ್ತಗಾಮಿನಿಯಾಗಿ…

ಸರೋಜಿನಿ ಪಡಸಲಗಿ

ಬೇಡ ಹೆಸರಿನ ಹಂಗು ಬಂಧ
ಕರಗಿ ಜಾರಿ ಹೋದೀತು ಸಿಗದೆ
ಜೀವ ತಂತಿಯ ಮೀಟುತಿರಲಿ
ಯಾರಿಗೂ ಎಟುಕದೆ ಗುಪ್ತಗಾಮಿನಿಯಾಗಿ

ಕಾರ್ಗತ್ತಲ ಗರ್ಭದಿಂದ ಥಟ್ಟನೆ
ಬೆಳಕಿನ ಹೊಳೆ ಹರಿದ ಹಾಗೆ
ಬಿಸಿಲ ಬೇಗೆ ಧಗೆಯ ನಡುವೆ
ಸುಳಿವ ತಂಪಿನ ಅಲೆಯ ಹಾಗೆ
ಇರಲಿ ಎಟುಕದೆ ಗುಪ್ತಗಾಮಿನಿಯಾಗಿ

ಎದೆ ತುಂಬಿದ ಹಾಡಿನಿಂಪಿನಂತೆ
ಕಣ್ಣ ತುಂಬಿದ ಕನಸು ಚಿತ್ರದಂತೆ
ಉಸಿರ ತುಂಬಿದ ಸೌಗಂಧದಂತೆ
ಆ ಅಂಚಿನ ಮುರಳಿ ನಾದದಂತೆ
ಇರಲಿ ಎಟುಕದೆ ಗುಪ್ತಗಾಮಿನಿಯಾಗಿ

ಮೌನದಲಿ ತುಂಬಿರುವ ನಾದವಾಗಿ
ಪ್ರತಿ ಮಿಡಿತದಿ ಹರಿವ ತುಡಿತವಾಗಿ
ಬಿಂಬ ಬಿಟ್ಟಗಲದ ಪ್ರತಿಬಿಂಬವಾಗಿ
ಹೆಸರಿನ ಹಂಗಿಲ್ಲದೆ ಜೀವದ ಜೀವವಾಗಿ
ಇರಲಿ ಎಟುಕದೆ ಗುಪ್ತಗಾಮಿನಿಯಾಗಿ

‍ಲೇಖಕರು Admin

5 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading