ಬಸವರಾಜ ಕೋಡಗುಂಟಿ ಅಂಕಣ – ಚಿಕ್ಕಮಗಳೂರು ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

11

ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಶ್ಟ ಮೂವತ್ತಯ್ದು ಬಾಶೆಗಳು ದಾಕಲಾಗಿವೆ ಮತ್ತು ಕನಿಶ್ಟು ಅರ‍್ವತ್ತೊಂದು ತಾಯ್ಮಾತುಗಳು ಇವೆ. ಹೆಸರಿಸಿಲ್ಲದ ಬಾಶೆಗಳ ಇತರ ಎಂಬ ಗುಂಪಿನಲ್ಲಿ ದೊಡ್ಡ ಸಂಕೆಯ ಮಾತುಗರು ಇಲ್ಲಿ ದಾಕಲಾಗಿದ್ದಾರೆ. ಜಿಲ್ಲೆಯಲ್ಲಿ ಕನ್ನಡ ಬಾಶೆ ಸುಮಾರು 73%ದಶ್ಟು ಇದೆ. ಇದರ ನಂತರ ಇಲ್ಲಿ ಉರ‍್ದು, ತುಳು ಮತ್ತು ತಮಿಳು ಮಹತ್ವದ ಬಾಶೆಗಳಾಗಿವೆ. ಲಂಬಾಣಿಗೆ ಪರಿಗಣಿಸುವಶ್ಟು ಸಂಕೆಯ ಮಾತುಗರು ಇಲ್ಲಿ ಕಾಣಿಸುತ್ತಾರೆ.

***

ಚಿಕ್ಕಮಗಳೂರು ಜಿಲ್ಲೆಯ ಜನಗಣತಿ ಕೊಡುವ ಮಾಹಿತಿ ಆದರಿಸಿದ ಬಾಶೆಗಳ ಮಾಹಿತಿಯನ್ನು ಕೆಳಗೆ ಪಟ್ಟಿಸಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ40382
ಆಸ್ಸಾಮಿ37352
ಇತರ330
ಬೆಂಗಾಲಿ1108129
ಬೆಂಗಾಲಿ1108129
ಡೋಗ್ರಿ321
ಡೋಗ್ರಿ321
ಗುಜರಾತಿ296157139
ಗುಜರಾತಿ254135119
ಇತರ422220
ಹಿಂದಿ273301408313247
ಬಗೇಲಿ/ಬಗೇಲ್‍ಕಂಡಿ110
ಬಂಜಾರಿ488210278
ಬದ್ರಾವತಿ532
ಬರ‍್ಮವುರಿ/ಗಡ್ಡಿ110
ಬೋಜ್ಪುರಿ27270
ಬುಂದೇಲಿ/ಬುಂದೇಲ್ ಕಂಡಿ110
ಹಿಂದಿ367820901588
ಲಮಾಣಿ/ಲಂಬಾಡಿ223741134211032
ಮಾರ‍್ವಾರಿ374198176
ಪಹರಿ110
ರಾಜಸ್ತಾನಿ327182145
ಇತರ532726
ಕನ್ನಡ827796412592415204
ಬಡಗ312
ಕನ್ನಡ827693412543415150
ಕುರುಬ/ಕುರುಂಬ945
ಇತರ914447
ಕಾಶ್ಮೀರಿ541
ಕಾಶ್ಮೀರಿ541
ಕೊಂಕಣಿ1474473857359
ಕೊಂಕಣಿ1458473087276
ಕುಡುಬಿ/ಕುಡುಂಬಿ502525
ನವಾಯಿತಿ592930
ಇತರ512328
ಮಯ್ತಿಲಿ110
ಮಯ್ತಿಲಿ110
ಮಲಯಾಳಂ281701390414266
ಮಲಯಾಳಂ281611389914262
ಯರವ954
ಮರಾಟಿ987949474932
ಮರಾಟಿ981749204897
ಇತರ622735
ನೇಪಾಲಿ1206852
ನೇಪಾಲಿ1206852
ಓಡಿಯಾ20811890
ಓಡಿಯಾ19711384
ಇತರ1156
ಪಂಜಾಬಿ651
ಪಂಜಾಬಿ651
ಸಂಸ್ಕ್ರುತ251510
ಸಂಸ್ಕ್ರುತ251510
ಸಂತಾಲಿ110
ಸಂತಾಲಿ110
ಸಿಂದಿ202
ಸಿಂದಿ202
ತಮಿಳು426342118121453
ತಮಿಳು426322117921453
ಇತರ220
ತೆಲುಗು317001578515915
ತೆಲುಗು316981578515913
ಇತರ202
ಉರ‍್ದು841384220541933
ಉರ‍್ದು841314220141930
ಇತರ743
ಆದಿ523
ತಲ್ಗಾಲೊ523
ಅರಾಬಿಕ್/ಅರ‍್ಬಿ1165363
ಅರಾಬಿಕ್/ಅರ‍್ಬಿ1165363
ಬಿಲಿ/ಬಿಲೊಡಿ874245
ಚೊದಾರಿ281414
ಇತರ592831
ಬೊಟಿಯ522626
ಇತರ522626
ಕೂರ‍್ಗಿ/ಕೊಡಗು557286271
ಕೂರ‍್ಗಿ/ಕೊಡಗು1899099
ಕೊಡವ368196172
ಇಂಗ್ಲೀಶುಇಂಗ್ಲೀಶು593623
593623
ಕೊಮ್
ಕೊಮ್211
211
ಕುರುಕ್/ಓರಆನ್101
ಕುರುಕ್/ಓರಆನ್101
ಮಾವೊ110
ಮಾವೊ110
ಮುಂಡ110
ಮುಂಡ110
ಟಿಬೆಟನ್211
ಟಿಬೆಟನ್211
ತುಳು628293007832751
ತುಳು628273007732750
ಇತರ211
ಇತರ704135233518

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಗಣತಿಯು ಮೂವತ್ಮೂರು ಬಾಶೆಗಳನ್ನು ಪಟ್ಟಿ ಮಾಡಿದೆ. ಇದರೊಟ್ಟಿಗೆ ಇತರ ಎಂಬ ಪರಿಗಣಿಸುವಶ್ಟು ಸಂಕೆಯ ಅಂದರೆ 7,041 ಮಂದಿ ಮಾತುಗರನ್ನು ಹೊಂದಿರುವ ಗುಂಪು ಇದೆ. ಇದು ತುಸು ದೊಡ್ಡ ಸಂಕೆಯಾಗಿರುವುದರಿಂದ ಇದರಲ್ಲಿ ಕನಿಶ್ಟ 5,000 ಮಂದಿ ಮಾತುಗರು ಒಂದು ಬಾಶೆಗೆ ಇರಬಹುದು ಎಂದು ಅಂದಾಜಿಸಿ ಎರಡು ಬಾಶೆಗಳೆಂದು ಲೆಕ್ಕ ಮಾಡಬಹುದು. ಹಾಗಾದರೆ ಚಿಕ್ಕಮಗಳೂರಲ್ಲಿ ಒಟ್ಟು ಮೂವತ್ತಯ್ದು ಬಾಶೆಗಳು ಎಂದಾಗುತ್ತದೆ. ವಾಸ್ತವದಲ್ಲಿ ಇತರ ಗುಂಪಿನಲ್ಲಿ ಇರುವ ಬಾಶೆಗಳಲ್ಲಿ 5,000 ಮಂದಿ ಇರಲಿಕ್ಕಿಲ್ಲ, ಕಂಡಿತವಾಗಿಯೂ ಇನ್ನೂ ಕಡಿಮೆ ಮಂದಿ ಮಾತುಗರು ದಾಕಲಾಗಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ಜನಗಣತಿ ಪಟ್ಟಿ ಮಾಡಿದೆ. ಇದರಲ್ಲಿ ಇತರ ಎಂಬ ಗುಂಪಿನಲ್ಲಿ ಎರಡು ಬಾಶೆಗಳು ಎಂದು ಮೇಲೆ ಲೆಕ್ಕಿಸಿದಂತೆ ಅದರಲ್ಲಿ ತಾಯ್ಮಾತುಗಳು ಕೂಡ ಎರಡು ಎಂದು ಎಣಿಸಿದರೆ ಜಿಲ್ಲೆಯ ತಾಯ್ಮಾತುಗಳ ಸಂಕೆ ಅರ‍್ವತ್ತೊಂದು ಆಗುತ್ತದೆ. ಜಿಲ್ಲೆಯ ಹದಿಮೂರು ಬಾಶೆಗಳ ಒಳಗೆ ಇತರ ಎಂಬ ಗುಂಪನ್ನು ಕಾಣಬಹುದು. ಈ ಹದಿಮೂರನ್ನು ಕಳೆದರೆ ನಲ್ವತ್ತಾರು ತಾಯ್ಮಾತುಗಳನ್ನು ಹೆಸರಿಸಿದೆ ಎಂದಾಗುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಜನಸಂಕೆ 11,37,961. ಇದರಲ್ಲಿ ಕನ್ನಡ ಮಾತಾಡುವರು 8,27,796. ಅಂದರೆ 72.743% ಆಗುತ್ತದೆ. ಜಿಲ್ಲೆಯಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಕನ್ನಡ ಆಗಿದೆ. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಏಳು ಬಾಶೆಗಳು ಇವೆ. ಉರ‍್ದು – 84,138 (7.393%), ತುಳು – 62,829 (5.521%), ತಮಿಳು – 42,634 (3.746%), ತೆಲುಗು – 31,700 (2.785%), ಮಲಯಾಳಂ – 28,170 (2.475%), ಹಿಂದಿ – 27,330 (2.401%) ಮತ್ತು ಕೊಂಕಣಿ – 14,744 (1.295%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಒಂದೆ ಬಾಶೆ ಮರಾಟಿ ಇದೆ. ಮರಾಟಿ ಮಾತಾಡುವವರು 9,879 (0.868%) ಇದ್ದಾರೆ. ಆನಂತರ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುವ ಆರು ಬಾಶೆಗಳು ಇವೆ. ಅವುಗಳೆಂದರೆ ಕೂರ‍್ಗಿ/ಕೊಡಗು, ಗುಜರಾತಿ, ಓಡಿಯಾ, ನೇಪಾಲಿ, ಅರಾಬಿಕ್/ಅರ‍್ಬಿ ಮತ್ತು ಬೆಂಗಾಲಿ. ಆನಂತರ ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿರುವ ಹದಿನೇಳು ಬಾಶೆಗಳು ಪಟ್ಟಿಯಲ್ಲಿ ಇವೆ. ಈಗ ಈ ಬಾಶೆಗಳನ್ನು ಕೆಳಗಿನಂತೆ ಗುಂಪಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ8,27,79672.743%
’’ಉರ‍್ದು84,138 7.393%
’’ತುಳು62,8295.521%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು42,634 3.746%
’’ತೆಲುಗು31,700 2.785%
’’ಮಲಯಾಳಂ28,1702.475%
’’ಹಿಂದಿ27,330 2.401%
’’ಕೊಂಕಣಿ14,744 1.295%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ9,879 0.868%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಕೂರ‍್ಗಿ/ಕೊಡಗು, ಗುಜರಾತಿ, ಓಡಿಯಾ, ನೇಪಾಲಿ, ಅರಾಬಿಕ್/ಅರ‍್ಬಿ, ಬೆಂಗಾಲಿ1,4070.123%
ನೂರಕ್ಕಿಂತ ಕಡಿಮೆಮೂವತ್ಮೂರು ಬಾಶೆಗಳು2930.025%
ಒಟ್ಟು ಮಾತುಗರು11,37,961100%

ಚಿಕ್ಕಮಗಳೂರು ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ತುಸು ಬದಲಾವಣೆ ಆಗುತ್ತದೆ. ಹಿಂದಿಯಲ್ಲಿ ದಾಕಲಾದ ಒಟ್ಟು ಮಾತುಗರು 27,330. ಆದರೆ ಅದರೊಳಗೆ ಹಿಂದಿ ಮಾತಾಡುವ 3,678 ಇದ್ದಾರೆ. ಇದು ಚಿಕ್ಕಮಗಳೂರು ಜಿಲ್ಲೆಯ ಹಿಂದಿಯ 13.457% ಮತ್ತು ಜಿಲ್ಲೆಯ 0.323% ಆಗುತ್ತದೆ. ಲಮಾಣಿ ಹೆಸರಿನಲ್ಲಿ 22,374 ಮಂದಿ ಮತ್ತು ಬಂಜಾರಿ ಹೆಸರಿನಲ್ಲಿ 488 ಮಂದಿ ಇದ್ದು ಇವೆರಡನ್ನು ಸೇರಿಸಿದರೆ ಲಂಬಾಣಿ ಮಾತಾಡುವ 22,862 ಆಗುತ್ತಾರೆ. ಇದು ಜಿಲ್ಲೆಯ ಹಿಂದಿಯ 83.651% ಮತ್ತು ಜಿಲ್ಲೆಯ 2.009% ಆಗುತ್ತದೆ. 

ಈ ಬದಲಾವಣೆಯನ್ನು ಮತ್ತು ತಾಯ್ಮಾತುಗಳ ಸಂಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮೇಲೆ ಕೊಟ್ಟಿರುವ ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುರೂಪಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚಕನ್ನಡ8,27,69372.734%
’’ಉರ‍್ದು84,1317.393%
’’ತುಳು62,8275.521%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು42,6323.746%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತೆಲುಗು31,6982.785%
’’ಮಲಯಾಳಂ28,1612.474%
’’ಲಂಬಾಣಿ22,8622.009%
’’ಕೊಂಕಣಿ14,5841.281%
ಮರಾಟಿ 9,8170.862%
ಇತರ7,0410.618%
ಹಿಂದಿ3,6780.323%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಚಿಕ್ಕಮಗಳೂರು11,37,961ಕನ್ನಡ8,27,69372.734%1
ಉರ‍್ದು84,1317.393%2
ತುಳು62,8275.521%3
ತಮಿಳು42,6323.746%4
ತೆಲುಗು31,6982.785%5
ಮಲಯಾಳಂ28,1612.474%6
ಲಂಬಾಣಿ22,8622.009%7
ಕೊಂಕಣಿ14,5841.281%8
ಮರಾಟಿ 9,8170.862%9
ಇತರ7,0410.618%10

‍ಲೇಖಕರು Admin

May 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: