ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ
ಕೃತಿಗಳ ಆಹ್ವಾನ

ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ದಿ. 23. 06. 2024 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.

(2023 ರ ಜನವರಿಯಿಂದ 2023ರ ಡಿಸೆಂಬರ್ ವರೆಗೆ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು.)

  1. ಕಾಕೋಳು ಸರೋಜಮ್ಮ(ಕಾದಂಬರಿ) – 1000 ರೂ.
    1. ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ,) – 5000 ರೂ
    2. ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) – 5000 ರೂ
    3. ಜಿ.ವಿ. ನಿರ್ಮಲ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ) – 5000 ರೂ.
  2. ತ್ರಿವೇಣಿ ಸಾಹಿತ್ಯ ಪುರಸ್ಕಾರ
    ( ಪ್ರಾಯೋಜಕರು – ಸುಧಾಮೂರ್ತಿ- ಸಣ್ಣಕಥೆ/ ಕಾದಂಬರಿ) -2000 ರೂ.
  3. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) -1500 ರೂ
  4. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) – 1000 ರೂ.
  5. ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ.) -2000 ರೂ.
  6. ಇಂದಿರಾ ವಾಣಿರಾವ್ (ನಾಟಕ) -1000 ರೂ.
  7. ಜಯಮ್ಮ ಕರಿಯಣ್ಣ (ಸಂಶೋಧನೆ) -1000 ರೂ.
  8. ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) –
    ಪ್ರಥಮ- 3000
    ದ್ವಿತೀಯ ಬಹುಮಾನ- 2000, ತೃತೀಯ – 1000 ರೂ
  9. ಉಷಾ. ಪಿ. ರೈ ( ಕವನ ಸಂಕಲನ )- (2020- 2021- 2022 ಈ ಮೂರು ವರ್ಷಗಳಲ್ಲಿ ಪ್ರಕಟಗೊಂಡ ಕವನ ಸಂಕಲನ ) – 5000 ರೂ.
  10. ನಿರುಪಮಾ
  11. ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು- 2500 ರೂ
  12. ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು- 2500 ರೂ ನಿಯಮಗಳು :
  • ದತ್ತಿ ಬಹುಮಾನಕ್ಕಾಗಿ ಲೇಖಕಿಯರು, ಸಾಹಿತ್ಯಾಸಕ್ತರು ಮೇಲೆ ಸೂಚಿಸಿರುವ ಯಾವುದೇ ಪ್ರಕಾರಗಳಿಗೆ ಕೃತಿಗಳನ್ನು ಕಳುಹಿಸಬಹುದು. ಬಹುಮಾನಕ್ಕಾಗಿ ಕಳುಹಿಸುವ ಕೃತಿಗಳೊಂದಿಗೆ ಈ ಕೆಳಕಂಡ ವಿವರಗಳನ್ನುಳ್ಳ ಪತ್ರವನ್ನು ಕಳುಹಿಸಬೇಕು.
  • ಲೇಖಕಿಯರ ಹೆಸರು, ಅಂಚೆವಿಳಾಸ, ಫೋನ್ ನಂ. ಇಮೇಲ್ ವಿಳಾಸ, ಕೃತಿ ಶೀರ್ಷಿಕೆ, ಪ್ರಕಟಣೆ ವರ್ಷ ಬರೆಯಬೇಕು.
    • ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.
  • ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು.
  • ಈಗಾಗಲೇ ಎರಡು ಪುಸ್ತಕ ಬಹುಮಾನ ಪಡೆದ ಲೇಖಕರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
  • ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್.ಡಿ. ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.
  • ಬಹುಮಾನಕ್ಕೆ ಲೇಖಕಿಯರ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.
  • ಪ್ರತಿ ಪುಸ್ತಕ ಬಹುಮಾನ ಆಯ್ಕೆ ಸಮಿತಿಯಲ್ಲಿ ಮೂವರು ಖ್ಯಾತ ಸಾಹಿತಿಗಳು ಇರುತ್ತಾರೆ. ಅವರು ನೀಡಿದ ತೀರ್ಪಿನ ಪ್ರಕಾರ ಕೃತಿಯನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದು.
  • ಕರ್ನಾಟಕ ಲೇಖಕಿಯರ ಸಂಘ ದತ್ತಿನಿಧಿ ಪುಸ್ತಕ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನ ಪಡೆದ ಕೃತಿಗಳ ಲೇಖಕಿಯರನ್ನು ಗೌರವಿಸಿ ಬಹುಮಾನ ನೀಡಲಾಗುವುದು.
  • ದಯವಿಟ್ಟು ಕೃತಿಗಳನ್ನು ದಿ. 23.05.2024 (ಮೇ 23) ರ ಒಳಗೆ ನಮಗೆ ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಕೃತಿಗಳು ತಲುಪಬೇಕಾದ ವಿಳಾಸ: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು, 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು -560018

‍ಲೇಖಕರು avadhi

May 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: