ನಾನು ಕಾಯುತ್ತೇನೆ..  

ಇಡೀ ರಾತ್ರಿ ಸುರಿದ ಮಳೆ

ತಾಪಮಾನವನ್ನು ತಗ್ಗಿಸಿ ಊರನ್ನು ತಂಪಾಗಿಸಿತ್ತು.

ಬಾಲ್ಕನಿಗೆ ಬಂದು ನಿಂತೆ.
ಬೀದಿಯಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದರು.  

ಪಕ್ಕದ ಮನೆ ಹುಡುಗಿ ನನ್ನನ್ನು ನೋಡಿ ಕೂಗಿ ಹೇಳಿದಳು.
‘ಸಾಯಂಕಾಲ ರೂಮಿಗೆ ಬನ್ನಿ ಅಂಕಲ್.’
‘ಯಾಕಮ್ಮ? ಏನು ವಿಶೇಷ?’
‘ನನ್ನ ಬಾಯ್ ಫ್ರೆಂಡನ್ನು ಪರಿಚಯ ಮಾಡಿಕೊಡ್ತೀನಿ.’
‘ಆಯಿತಮ್ಮ ಬರ್ತೀನಿ,’ ಎಂದು ಮನೆಯೊಳಗೆ ಬಂದೆ.

ಹೋದ ತಿಂಗಳೂ ಹೀಗೇ ಒಂದು ಸಂಜೆ ರೂಮಿಗೆ ಆಹ್ವಾನಿಸಿದ್ದಳು.
ಪಿಜ್ಜಾ ಐಸ್ ಕ್ರೀಮ್ ಕೊಟ್ಟು ಬಾಯ್ ಫ್ರೆಂಡನ್ನು ಪರಿಚಯಿಸಿದ್ದಳು.
ಹುಡುಗ ಚೆನ್ನಾಗೇ ಇದ್ದನಲ್ಲ!
**


ಇಬ್ಬರ ಕಣ್ಣಲ್ಲೂ ಹರಿದ ನೀರು. 
‘ಚೆನ್ನಾಗಿ ಯೋಚಿಸು.’

‘ಯೋಚಿಸುವ ಕಾಲ ಮಿಂಚಿ ಹೋಗಿದೆ. ನಾನು ನಿನ್ನನ್ನು ಮದುವೆಯಾದರೆ ಅಮ್ಮ ನೇಣು ಬಿಗಿದುಕೊಂಡು ಸಾಯುತ್ತಾಳಂತೆ. ಅವನು ಹೇಳಿದವನನ್ನು ನಾನು ಮದುವೆಯಾಗದಿದ್ದರೆ ಅಪ್ಪ ಅಮ್ಮನನ್ನು ಗುಂಡಿಕ್ಕಿ ಕೊಲ್ಲುತ್ತಾನಂತೆ. ಅಯ್ಯೋ, ನಾನೇನು ಮಾಡಲಿ? ನಿನ್ನನು ಅಗಲಿ ನಾನು ಬದುಕಲಾರೆ.’

‘ನಾನೂ ಅಷ್ಟೇ. ನಿನ್ನ ಬಿಟ್ಟು ನಾನಿರಲಾರೆ. ಈ ಜನುಮದಲ್ಲಂತೂ ನಾವು ಒಂದಾಗಲಿಲ್ಲ. ಮುಂದಿನ ಜನುಮದಲ್ಲಿ …’ ಎನ್ನುತ್ತಾ ಜೇಬಿನಿಂದ ಎರಡು ಪೊಟ್ಟಣಗಳನ್ನು ಹೊರತೆಗೆಯುತ್ತಾನೆ.
ಕಣ್ಣೀರು ಸುರಿಸುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ.
ಬಾಗಿಲು ಮುರಿದು ಅಪ್ಪ ಒಳಗೆ ನುಗ್ಗಿ ಬರುತ್ತಾನೆ.
ಕೈಯಲ್ಲಿ ಪಿಸ್ತೂಲು. ಕಣ್ಣಲ್ಲಿ ಬೆಂಕಿ.

‘ಕಟ್’ ಎಂದು ನಿರ್ದೇಶಕ ಕೂಗುತ್ತಾನೆ.
‘ಶಾಟ್ ವಾಸ್ ಪರ್ಫೆಕ್ಟ್,’ ಅನ್ನುತ್ತಾ ನಟರ ಬೆನ್ನು ತಟ್ಟುತ್ತಾನೆ.

**

ಪ್ರತಿ ಮಂಗಳವಾರ ಬೆಳಿಗ್ಗೆ
ಅಂಚೆಯವನು ಒಂದು ಪೋಸ್ಟ್ ಕಾರ್ಡ್ ಕೊಟ್ಟು ಹೋಗುತ್ತಾನೆ.  
ಕಾರ್ಡಿನ ಅಂಚಿನಲ್ಲಿ ಎರಡು ಪದಗಳು. ‘ನಿನ್ನನ್ನು ನೋಡಬೇಕೆನಿಸುತ್ತಿದೆ.’
ಆರು ತಿಂಗಳಿನ ವಾಡಿಕೆ. ಅದೇ ಕಾರ್ಡು ಅದೇ ವಾಕ್ಯ ಅದೇ ಪದಗಳು. ಐದು ವರ್ಷಗಳ ಹಿಂದೆ ಬಿಟ್ಟುಹೋದವನ ಸಂದೇಶ ಇದು ಎಂದು ನನಗೆ ತಿಳಿಯದೇ?

ಅವನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಒಂದೂ ಗೊತ್ತಿಲ್ಲ. ಉತ್ತರಿಸಲು ಅವನ ವಿಳಾಸ ಬೇಕಲ್ಲ? ಅಷ್ಟಕ್ಕೂ ನಾನೇಕೆ ಉತ್ತರಿಸಬೇಕು? ಕಾರಣವಿಲ್ಲದೆ ತೊರೆದು ಹೋದವನು ಅವನು. ಎಷ್ಟು ನೋವನ್ನು ಅನುಭವಿಸಿದ್ದೇನೆ ಅವನಿಂದ.

ಇಂದು ಮತ್ತೊಂದು ಮಂಗಳವಾರ. ಬೆಳಿಗ್ಗೆ ಹತ್ತು ಗಂಟೆ. ಗೇಟಿನ ಬಳಿ ಬಂದು ನಿಲ್ಲುತ್ತೇನೆ. ರಸ್ತೆಯ ತಿರುವಿನಲ್ಲಿ ಪೋಸ್ಟ್ ಮ್ಯಾನ್ ಬರುವುದು ಕಾಣಿಸುತ್ತದೆ. ಕಾಯುತ್ತೇನೆ. ಯುಗಗಳೇ ಜಾರಿ ಉರುಳಿದ ಹಾಗನಿಸುತ್ತದೆ. ನಾನು ಕಾಯುತ್ತೇನೆ.  

**

‍ಲೇಖಕರು avadhi

May 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: