ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯ…

ಡಾ ನಾ ಮೊಗಸಾಲೆ

ಭರಪೂರ್ತಿ ಒಣಗಿ ಹೋದಂತಿರುವ ಆ ಮರವು
ಯಾರನ್ನೊ ಕರೆಯುವಂತೆರಡು ಗೆಲ್ಲಿನಲ್ಲಿ
ಉಳಿಸಿಕೊಂಡಿದೆ ಜೀವ ಚಿಗುರು ಮನಸಿನ ಒಳಗೆ
ಅವಿತಿದ್ದ ಕಿಸಿರಿರುವಂತೆ ಕಣ್ಣಿನಲ್ಲಿ

ಬಂತೊಂದು ಕಾಗೆ ಆ ಸಂಜೆ, ದಾರಿತಪ್ಪಿದ ಹುಡುಗ
ಮನೆಯ ಹುಡುಕುವ ಹಾಗೆ ಒಬ್ಬಂಟಿಯಾಗಿ
ಕುಳಿತು ರೆಂಬೆಯ ಮೇಲೆ ಕೂಗಿ ಕರೆಯಿತು ಬಳಗ
ಬಂದು ಗೆಲ್ಲುಗಳರಲಿ ಬರಲಿ ನೂರಾಗಿ

ಎಷ್ಟು ಕರೆದರು ಇಲ್ಲ ಕಾಗೆಗಳ ಹಿಂಡು, ಕ್ಷಣ
ಬಿಟ್ಟು ಬಂದುವು ಎರಡು ನಾವಿರುವೆವೆನುತ
ಒಟ್ಟಾಗಿ ಕೂಗಿದವು ಬನ್ನಿರೆಲ್ಲರು ಎನುವಂತೆ
ಬಾರದುಳಿದಾಗ ಹಾರಿದುವು ಅರಸಿ ಉಳಿದವರ

ಎರಡು ದಿನಗಳ ಮೇಲೆ ಆ ಮರದ ಕೊಂಬೆಗಳ
ಮೇಲೆ ಅಲ್ಲಲ್ಲಿ ಕಂಡಿತು ಚಿಗುರು ಆಕಾಶಕೆ
ಜೀವ ಇದ್ದೂ ಒಣಗಿ ನಿಂತಂತೆ ಏಕಿತ್ತುಮರ
ವೆಂದು ತಿಳಿಯದು ನನಗೆ! ತಿಳಿದಿತ್ತೆ ಕಾಗೆಗಳಿಗೆ?

‍ಲೇಖಕರು Admin

18 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading