ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈಶಾಲಿ ಹೆಗಡೆಯವರ ಎರಡು ಕವನಗಳು

ವೈಶಾಲಿ ಹೆಗಡೆ

ಮಾತು
 
ನೋವಾಗಲು ಹರಿತ ಆಯುಧವೇ ಬೇಕೆಂದಿಲ್ಲ
ನುರಿತ ನಾಲಿಗೆಯೂ ಸಾಕು
ನುಡಿಯಲೇಬೇಕೆಂದಿಲ್ಲ.
ಕೊರೆದು ಹರಿದ ರುಧಿರದ ಬಣ್ಣ ಮಾತ್ರವೇ ಕೆಂಪಲ್ಲ
ಕಣ್ಣೋಟ ಹಿಂಡಿತೆಗೆದ ನೋವಿಗೂ ಬಣ್ಣವಿದ್ದೀತು ನೋಡು
ಹುಡುಕುತ್ತಿದ್ದೇನೆ
ಲಕ್ಷ ನಾಲಗೆಗಳ ಲೋಕದಲ್ಲಿ
ಅಕ್ಷರ ಅಲಕ್ಷವಾಗಿ ಮೊರೆವ ಮೇಳದಲ್ಲಿ
ಒಂದು ಮಾತು
ಮಾತೆನಿಸಿಕೊಳ್ಳಲು ಅರ್ಹವಿರುವ ಒಂದೇ ಒಂದು ಮಾತು

ಶಿಲಾಮುಖಿ*
 
ಕೆಂಗಣ್ಣ ಉರಿ ಶಾಪಕ್ಕೆ ಶಿಲೆಯಾಗಿಬಿಡಲು ನಾನೇನು
ಅಹಲ್ಯೆಯಲ್ಲ
ಮುದದ ಮಡದಿಯ ಮನವ ಶಿಲೆಯಾಗಿಸುವ ರಾಮನ
ಕಾಯುವ ಕರ್ಮವೂ ಬೇಕಿಲ್ಲ
ಅರಳುವ ಮುಂಚೆ ಹೇಳಿಬಿಡುವೆ ಕೇಳು
ಗುರುತು ಸಿಗದೇ ಹೋದೀತು
ಬಿರುಬಿಸಿಲಲಿ ಭರದಿ ಬೆಳೆವ ಶಿಲಾಮುಖಿ ನಾನು
 
* ಶಿಲಾಮುಖಿ ಅಥವಾ ಲಿತೊಪ್ಸ್ ಎನ್ನುವುದು ದಕ್ಷಿಣ ಆಫ್ರಿಕಾದ ಅತ್ಯಂತ ಒಣಹವೆ ಹಾಗೂ ಬಿಸಿಲಲ್ಲಿ ಬೆಳೆವ ಸಸ್ಯ. ಕಲ್ಲಿನಂತೆ ಕಾಣುವ ಈ ಪುಟ್ಟ ಗಿಡದಲ್ಲಿ ಅಂದದ ಬಿಳಿಹೂಗಳು ಬಿಡುತ್ತವೆ.
 

‍ಲೇಖಕರು G

15 May, 2014

9 Comments

  1. mmshaik

    wonderfull…!!!!!!!!!!!!!!!

  2. HARSHINI

    superb ..mam ..keep going.

  3. Shreepad Hegde

    ಎರಡೂ ಕವನಗಳು ಚನ್ನಾಗಿವೆ.

  4. bhavi

    chandada salugali

  5. Shwetha Hosabale

    ಎರಡೂ ಕವನಗಳೂ ತುಂಬಾ ಹಿಡಿಸಿದವು 🙂

  6. Krishnamurthy Kunjoor

    ಕವನಗಳೆರಡೂ ಚೆನ್ನಾಗಿವೆ.ಅಭಿನಂದನೆಗಳು.

  7. hema

    very beautiful poems

  8. ಪ್ರಕಾಶ ಬಿ. ಜಾಲಹಳ್ಳಿ

    ನಿಮ್ಮ ಕವಿತೆಯ ಸಾಲುಗಳು ತುಂಬಾ ಚೆನ್ನಾಗಿವೆ. ಅದರಲ್ಲೂ ಈ ಸಾಲು ತುಂಬಾ ಶಕ್ತವಾಗಿದೆ ಅನಿಸತು.
    “ಕೊರೆದು ಹರಿದ ರುಧಿರದ ಬಣ್ಣ ಮಾತ್ರವೇ ಕೆಂಪಲ್ಲ
    ಕಣ್ಣೋಟ ಹಿಂಡಿತೆಗೆದ ನೋವಿಗೂ ಬಣ್ಣವಿದ್ದೀತು ನೋಡು”

  9. shantahegde

    ತುಂಬಾ ಚೆನ್ನಾಗಿವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading