ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಡಿಯಾದಲ್ಲಿ ಕನ್ನಡ ವ್ಯಂಗ್ಯಚಿತ್ರೋತ್ಸವ ಸಂಭ್ರಮ

ಬೆಂಗಳೂರಿನ ಬಸವನಗುಡಿಯಲ್ಲಿನ ಬಿ ಪಿ ವಾಡಿಯ ರಸ್ತೆಯ ವಾಡಿಯಾ ಕಲಾ ಗ್ಯಾಲರಿಯಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಹಭಾಗಿತ್ವದಲ್ಲಿ ಕನ್ನಡ ವ್ಯಂಗ್ಯಚಿತ್ರೋತ್ಸವ ಆಯೋಜಿಸಿದ್ದಾರೆ.

ನವೆಂಬರ್ 20 ರಂದು ನಾಡಿನ ಹೆಸರಾಂತ ಹಿರಿಯ ಕಲಾವಿದರಾದ ಭಾಸ್ಕರ ರಾವ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರಿಗೆ ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರರಾದ ಗುಜ್ಜಾರಪ್ಪ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರಾದ ವೈ ಎಸ್ ನಂಜುಂಡಸ್ವಾಮಿ, ಉಪಾಧ್ಯಕ್ಷರಾದ ಬಾಬು ಜತ್ತಕರ್, ಕಾರ್ಯದರ್ಶಿಗಳಾದ ಜಿ ಎಸ್ ನಾಗನಾಥ್, ಸಂಘದ ಖಜಾಂಚಿ ಎಚ್ಚೆಸ್ ವಿಶ್ವನಾಥ್, ಹಿರಿಯ ವ್ಯಂಗ್ಯಚಿತ್ರಕಾರರಾದ ರಘುಪತಿ ಶೃಂಗೇರಿ, ಶ್ರೀಧರ್ ಕೋಮರವಳ್ಳಿ, ದಯಾನಂದ ಕೊರ್ಲಕುಂಟೆ, ವಿನೋದ್ ಆಚಾರ್ಯ, ಕಲಾವಿದ ರಾ ಸೂರಿ ಹಾಗೂ ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ ಅವರು ಜೊತೆಯಾದರು. ನಂತರದಲ್ಲಿ ನಾಡಗೀತೆ ಹಾಡಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರೂ, ಚಿತ್ರಕಲಾವಿದರೂ, ಸಂಗೀತಗಾರರೂ, ಸಾಹಿತಿಗಳೂ ಹಾಗೂ ವ್ಯಂಗ್ಯಚಿತ್ರಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದು ಕನ್ನಡ ನಾಡಿನ ಸಾಂಸ್ಕೃತಿಕ ಸಮಾಗಮದಂತೆ ಕಾಣುತಿತ್ತು.

ಕನ್ನಡದ ವೈವಿಧ್ಯಮಯವಾದ ವ್ಯಂಗ್ಯಚಿತ್ರಗಳನ್ನು ನೋಡಲು ಬನ್ನಿ. ಕನ್ನಡದಲ್ಲೇ ನಗಲು ಇಚ್ಛಿಸುವವರು ದಯಮಾಡಿ ಬನ್ನಿ.

ನವೆಂಬರ್ 22 ರ ಭಾನುವಾರ ಸಂಜೆ 6.00 ರವರೆಗೆ ನೋಡುಗರ ವೀಕ್ಷಣೆ ತೆರೆದಿರುತ್ತದೆ.

‍ಲೇಖಕರು Admin

22 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading