ವಸುಂಧರಾ ಕದಲೂರು
ಎಷ್ಟು ಚಿಂತೆಗೆ ದೂಡಿದೆ
ನೀನು! ಯೋಚಿಸಲು
ಕಷ್ಟವಾಗಿ ಸುಮ್ಮನಾದೆವು.
ನಿನ್ನ ಮಾರ್ಗ ಅನುಸರಿಸಲು
ಬಲು ಕಠಿಣ, ಅಸ್ವಸ್ಥ ನಾವು
ದಾರಿ ಬದಲಿಸಿ ಬದುಕಿದೆವು.
ಹಲವು ಉತ್ತರಗಳು ನೀನು
ನಮ್ಮ ಶೂನ್ಯ ಮನದಿ
ಪ್ರಶ್ನೆಗಳೇ ಮೂಡಲಿಲ್ಲ.

ಹಲವು ದಾರಿಗಳಲಿ ದಿಟ್ಟ
ಹೆಜ್ಜೆ ನಿನ್ನದು, ನಡೆಯಲು
ನಮಗೆ ಕಾಲೇ ಬರುವುದಿಲ್ಲ.
ನಾಲಗೆ ಮರುಗಟ್ಟಿದೆ, ನಿನ್ನ
ಆದರ್ಶಗಳ ಸಮಾಧಿಯ
ಮುಂದೆ, ನಾವು ಜೀವಚ್ಛವ.
ಆದರೂ….,
ಈ ದಿನ ನೆನಯುತ್ತೇವೆ
ನೀನೊಬ್ಬ ಇದ್ದೆ ಎಂದು.
ನಾಳೆಗೆ ಅಖಂಡ ಮರೆವು.






0 Comments