-ಸುಕುಮಾರ್
ಪುನರ್ವಸು ನಕ್ಷತ್ರ
ರಾಮನಾಗಿ ಹುಟ್ಟಿದ್ದು ಬಯಸಿದ್ದಲ್ಲ
ಸೌಮಿತ್ರಿ ಬರಲಿಲ್ಲ
ಜಾನಕಿಯು ಜೊತೆಗಿಲ್ಲ
ಮಾತೃ ದೇವೋಭವ
ಪಿತೃ ದೇವೋಭವ
ಆಚಾರ್ಯ ದೇವೋಭವ
ಓಂಕಾರ ಝೇಂಕಾರಗಳ ನಡವೆ
ನನ್ನ ಅಸ್ತಿತ್ವವೇ ಮುರುಟಿ ಹೋಗಿದ್ದು
ಅರಿವಾಗಲೇ ಇಲ್ಲ
ಮೇಣದಂತೆ ಕರಗಿ
ಕೊರಗಿ ಬೆಳಗಿದ್ದು
ದೀಪವಾಗಿ
ಚಿತೆಯ ಕೆಂಡವಾಗಿ
ಬೂದಿಯಾಗಿ, ಭಸ್ಮವಾಗಿ
ಬದುಕೆಲ್ಲ ನಿಮಗಾಗಿ
ಸಾಯುವುದು ನನಗಾಗಿ
ಸಾವಿನಾಚೆಯ ಯುಗದ
ದಂತಕತೆಯಾಗಿ
ಕಪ್ಪು ಕಲ್ಲಿನ ಮೂರ್ತಿ
ಶ್ರೀರಾಮನಾಗಿ
ಒಂಟಿಯಾಗಿ
ಮತ್ತೊಮ್ಮೆ ಹುಟ್ಟಿದರೆ ಒಂದೆ ಆಸೆ
ರಾವಣನ ನಕ್ಷತ್ರ ಚಿತ್ತೆಯಂತೆ






0 Comments