ರಾಜೇಶ್ವರಿ ಕವಿತೆಗಳು ಸತ್ಯದ ಮುಖ ಕಾಣಿಸಲು ತವಕಿಸುತ್ತವೆ..

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’

ಹೊಸ ಬನಿಯ ಕವಿತೆಗಳನ್ನು ಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.

ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.

ಕಳೆದ ವಾರದ  POET OF THE WEEK ನಲ್ಲಿ  ರಾಜೇಶ್ವರಿ ಚನ್ನಂಗೋಡು ಅವರ  ಕವಿತೆಗಳನ್ನು ಪ್ರಕಟಿಸಿದ್ದೆವು ಅದು ಇಲ್ಲಿದೆ

ಅದಕ್ಕೆ ವಿಮರ್ಶಕಿ, ಚಿಂತಕಿ  ಡಾ ಎಸ್ ಡಿ ಶಶಿಕಲಾ ಚೊಕ್ಕಾಡಿ  ಅವರು ಬರೆದ ಮೊದಲ ನೋಟ ಇಲ್ಲಿದೆ-

ಡಾ ಎಸ್ ಡಿ ಶಶಿಕಲಾ ಚೊಕ್ಕಾಡಿ ಮಲೆನಾಡ ಹೆಬ್ಬಾಗಿಲಾದ ಶಿವಮೊಗ್ಗದವರು. ಕಥೆ ಕಾದಂಬರಿಗಳನ್ನು ಓದುತ್ತಲೇ ಬೆಳೆದವರು, ಓದಿನ ಮೋಹದಿಂದ ದೂರವಿರಲಾರರು. ಸ್ತ್ರೀವಾದಿ ಚಿಂತನೆಯ ಒಡನಾಡಿ.

ಅದೇ ಮೋಹದಿಂದಲೇ ಮೈಸೂರಿನ ಕುವೆಂಪು ಅಧ್ಯಯನ ಸಂಸ್ಥೆಗೆ ‘ಆರ್ ಕಲ್ಯಾಣಮ್ಮ ಅವರ ಬದುಕು ಬರಹ’ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮೈಸೂರು ವಿ.ವಿ ಡಾಕ್ಟರೇಟ್ ನೀಡಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗುರುಗಳ ಮೇಲಿನ ಪ್ರೀತಿಯಿಂದ ‘ವಿಜಯಾನ್ವೇಷಣೆ’ ಕೃತಿಯನ್ನು ಸಂಪಾದಿಸಿದ್ದಲ್ಲದೆ, ವಿಜಯಾ ದಬ್ಬೆ ಅವರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿ ವಿಜಯಾ ದಬ್ಬೆ ಅವರನ್ನು ಇನ್ನಷ್ಟು ಹತ್ತಿರ ಮಾಡಿದ್ದಾರೆ. ಪಗಡಿಯ ಕೌದಿಯಲ್ಲಿ ದೀಪಗಳು ಬೆಳಗಿ, ನೆಲದ ಮರೆಯ ನಿಧಾನ, ಸಾಂದರ್ಭಿಕ ಇವರ ಮಹತ್ವದ ಕೃತಿಗಳು.

‘ಅವಧಿ’ಯಲ್ಲಿ ರಾಜೇಶ್ವರಿಯವರ ಕವಿತೆಗಳನ್ನು ಓದಿದೆ. ಹೊಸದಾಗಿ ಬರೆಯುತ್ತಿರುವವರಲ್ಲಿ ರಾಜೇಶ್ವರಿ ಭರವಸೆಯ ಯುವ ಕವಿಯತ್ರಿ.

ಇವರ  ಮೊದಲನೆ ಕವಿತೆ ಮನುಷ್ಯ ತನ್ನಲ್ಲಿರುವ ರಾಗದ್ವೇಷಗಳನ್ನು ಹೊರದೂಡಿ ನಿಶ್ಚಿಂತೆಯಿಂದ ಬದುಕಬೇಕಾದ ಅನಿವಾರ್ಯತೆಯನ್ನು ಜಿರಳೆಯ ಪ್ರತೀಕದ ಮೂಲಕ ನಿವೇದಿಸುತ್ತದೆ.

ಎರಡನೇ ಕವಿತೆ ಯಾರಾದರೂ ಜಗತ್ತಿನ ಬಗ್ಗೆ ಕುತೂಹಲ ಕೆರಳಿಸಿದ ಮೇಲೆ ಜಗತ್ತನ್ನು ನಾವೇ ಅರಿಯಲು ಮುಂದಾಗಬೇಕು, ನಮ್ಮಲ್ಲಿ ಹುಟ್ಟಿಕೊಳ್ಳುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವೇ ಮುಂದಡಿಯಿಡಬೇಕಾದ ಅಗತ್ಯವನ್ನು ಹೇಳುತ್ತದೆ.

ಮೂರನೆಯ ಕವಿತೆಯು ಮನುಷ್ಯ ಬದುಕಿನಲ್ಲಿ ಅನಂತವಾದ ಇಚ್ಚೆಗಳೆಂಬ ಬೆಟ್ಟಗಳನ್ನು ಹತ್ತಿ ಸಾಗುತ್ತಾನೆ, ಆ ಇಚ್ಚೆಗಳ ಸಾಕಾರಕ್ಕಾಗಿ ಪಡುವ ಕಷ್ಟಗಳು ಅನಂತ ಎಂಬ ಸತ್ಯವನ್ನು ಅನಾವರಣಗೊಳೊಸತ್ತದೆ.

ನಾಲ್ಕನೆಯ ಕವಿತೆಯು ಮನುಷ್ಯ ಸಂಬಂಧಗಳಲ್ಲಿ ಉಂಟಾಗುವ ಬಿರುಕನ್ನು ಹೋಗಲಾಡಿಸಿಕೊಳ್ಳುತ್ತಾ ಆ ಸಂಬಂಧಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕೆಂಬ ಅತೀವವಾದ ಕಾಳಜಿಯನ್ನು ವ್ಯಕ್ತಪಡಿಸುತ್ತದೆ.

ಐದನೆ ಕವಿತೆ ಕಾಟುಮಾವಿನ ಸುತ್ತ ಹೆಣೆಯಲಾಗಿದ್ದು ಮಣ್ಣಿನೊಂದಿಗಿನ ಸಂಬಂಧವನ್ನು ಸಾಧಿಸುತ್ತ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಆಶಯವನ್ನು ಹೊಂದಿದೆ.

ಆರನೆಯ ಕವಿತೆ ಮಳೆಗೆ ಮನೆ ಮುಳುಗಿದಂತೆ ತನ್ನ ಬದುಕು ಮುಳುಗಬಾರದೆಂಬ ಬಯಕೆಯನ್ನು ಹೊತ್ತು ನಿಂತಿದೆ.

ಏಳನೆಯ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಹಲವು ಮುಖಗಳಲ್ಲಿ ಮುಖವಾಡಗಳು ಮುಚ್ಚಿ ಸತ್ಯದ ಮುಖವನ್ನಷ್ಟೇ ಕಾಣಿಸುವ ತವಕವಿದೆ.

ರಾಜೇಶ್ವರಿಯವರ ಕಾವ್ಯ ಜೀವನ್ಮುಖಿಯಾಗಿದೆ. ಅದು ವರ್ತಮಾನದ ತುರ್ತೂ ಹೌದು. ಅವರಿಗೆ ನನ್ನ ಶುಭಾಶಯಗಳು

‍ಲೇಖಕರು Avadhi Admin

March 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: