ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಸ್ವಾಮಿ ಮಾರ್ಲಬಂಡಿ ಕವಿತೆ- ಜಂಜಾಟದ ಮನಸು…

ರಂಗಸ್ವಾಮಿ ಮಾರ್ಲಬಂಡಿ

ಬೀಜದೋಳ್ ಅಡಗಿರ್ಧ ಮರಕ್ಕೆ
ತಾನುಂಟ ಅಸ್ಥಿತ್ವ ಗೊತ್ತಿರುವುದೇ..
ಸಾಗರದೋಳ್ ತೇಲಾಡುವ ತೆಪ್ಪೆಗೆ
ತಾನ್ ಸಾಗರದ ಫಲ ಎಂದು ಗೊತ್ತಿಹುದೇ…?

ನಾ ತಂದೆ ತಾಯಿಯ ಫಲವೇನೊ…!
ಆದರೆ ಕಳೆದುಹೋದ ಅದೆಷ್ಟೊ ಶುಕ್ರಕಣಗಳಲಿ ನಾ ಎಷ್ಟೆನೆಯವನು…?
ಬಲವಂತದ ಜನ್ಮದಲ್ಲಿ
ನೆನಪುಗಳ ಪಯಣದಲ್ಲಿ
ಕನಸುಗಳ ಭೇಟೆಯಲಿ
ಹೆಸರಿಡದ ಆಸೆ ಮಾತ್ರ ಸುಳ್ಳಲ್ಲ…!

ನೀ ಜೀವ…!
ನೀನೆ ಜೀವನ…!
ಎಂಬ ನರ್ತನೆಯ ಮಾತು ಬೇಡ….!
ಕಂಡ ಕನಸಲ್ಲಿ,
ಕಾಡಿದ ನೆನಪಿನಲಿ,
ನಿನ್ನ ತಕ್ಕಡಿ ಮಾತ್ರ ಕೆಳಗಿಲ್ಲ…!

ಸಮಾನವಲ್ಲ…
ಸಮಾಜದಲ್ಲ….!
ನೀ ಬಣ್ಣಿಸುವ ನೆಪ ಮನದಲಿಲ್ಲ…..!
ನಿನ್ನ ಮನದಲ್ಲಿ ಹರಿದಾಡುತ್ತಿರುವ ಆ ನನ್ನ ಪ್ರತಿಬಿಂಬವೇ ನಿನ್ನ ಜೀವಂತಿಕೆಯ ಸಾಕ್ಷಿ …..!
ಮರೆತಿದ್ದೇನೆ ಎಂದು ನೆಪ ಹೇಳಿ ಮರವಾಗುವ ಮುಂಚೆಯೇ ಮರಣದಲ್ಲಿ ಮಾರ್ಧ್ವನಿಸಬೇಡ ಗೆಳತಿ….

‍ಲೇಖಕರು Admin

9 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading