ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ಧ ಮಾತ್ರ ಪವಿತ್ರ ಹೇಗೆ?

ಮೂಲ : ಅಭಿನಂದನ್ ಗುಪ್ತಾ
ಕನ್ನಡಕ್ಕೆ : ಸಿಕಂದರ್ ಅಲಿ ತೋರಣಗಲ್ಲು

​”ನಾನು ಅಪರಾಧಿಯಾಗುವೆನೆ ?
ನನ್ನ ಮೇಲೆ ಯಾವ ಆರೋಪ ಹೊರಿಸಬಹುದು ?

ಹಸಿರು ಬಣ್ಣದಿಂದ ‘ಹಿಂದೂ’ ಬರೆದು, ಕೇಸರಿಯಲಿ ‘ಇಸ್ಲಾಂ’ ಎಂದು ಬರೆದರೆ ?
​ಅಥವಾ ಎಲ್ಲರೂ ಒಂದೇ ಎಂದು ಹೇಳಿದರೆ ?

ಅವತಾರ, ದೇವದೂತ, ಪ್ರವಾದಿ
ಮುಂಜಾವು, ಮಧ್ಯಾಹ್ನ ಮತ್ತು ಸಂಜೆ—ಎಲ್ಲವೂ ಒಂದೇ
ವಿಷ, ಜೇನು ಮತ್ತು ಮದ್ಯ—ಎಲ್ಲವೂ ಒಂದೇ
​ಸೂರ್ಯ, ಚಂದ್ರ ಮತ್ತು ರಾತ್ರಿ ಒಂದೇ,
ಮೋಡ ಮತ್ತು ಮಳೆ ಹನಿಗಳು ಒಂದೇ,
ನೀರು ಒಂದೇ, ಗಾಳಿ ಒಂದೇ,
ಕಾಯಿಲೆ ಬಂದರೆ… ಗುಣಪಡಿಸುವ ಔಷಧಿ ಒಂದೇ.

​ಆದರೆ ಎಲ್ಲರ ರಕ್ತ ಬೇರೆ ಬೇರೆಯೇನೋ? ಅಲ್ಲವೇ?
ಹನಿ ಹನಿಯಲ್ಲೂ ವ್ಯತ್ಯಾಸವಿದೆ ಬಹುಶಃ ?
ಒಬ್ಬರದ್ದು ಬಿಸಿ, ಇನ್ನೊಬ್ಬರದ್ದು ತಂಪು,
ಒಬ್ಬರದ್ದು ಶ್ರೇಷ್ಠ, ಇನ್ನೊಬ್ಬರದ್ದು ಕನಿಷ್ಟ?
​ಒಬ್ಬರದ್ದು ದುಬಾರಿ, ಇನ್ನೊಬ್ಬರದ್ದು ಅಗ್ಗ‌?
ಒಬ್ಬರದ್ದು ರೇಷ್ಮೆಯಂತೆ, ಇನ್ನೊಬ್ಬರದ್ದು ಒರಟು ?
ಬೇರೆಯೇ ಆಗಿದ್ದರೆ ಅದಕ್ಕೊಂದು ಬೇರೆ ಬಣ್ಣ ನೀಡಿಬಿಡಿ,
ಎಲ್ಲರ ರಕ್ತ ಕೆಂಪಗಿರುವಾಗ, ‘ಬೇರೆ’ ಎನಿಸುವುದು ಹೇಗೆ?
​ರಕ್ತ ಹರಿಯುವುದು ಕೆಟ್ಟ ವಿಷಯ,
ಯುದ್ಧ ಮಾತ್ರ ಪವಿತ್ರ ಹೇಗೆ?

ನಾನು ​ಒಂದು ವೇಳೆ ‘ಅವನು’ (ದೇವರು) ಇಲ್ಲವೇ ಇಲ್ಲ ಎಂದುಬಿಟ್ಟರೇ?
ಅವನು ಇರಲಿಲ್ಲ, ಮುಂದೆಯೂ ಇರುವುದಿಲ್ಲ ಎಂದು ಸಾರಿ‌-ಸಾರಿ ಹೇಳಿಬಿಟ್ಟರೇ?
ಆಗ ಧರ್ಮದ ಹೆಸರಲ್ಲಿ ಈ ಯುದ್ಧಗಳಿರುವುದಿಲ್ಲ
ಇದಕ್ಕೆ ಕಾರಣವಾಗುವ ಬಣ್ಣಗಳೂ ಇರುವುದಿಲ್ಲ.

​ಹೌದು,
ಆಗ ಚರ್ಚೆಗಳು ನಡೆಯುವುದು ಪರಿಸ್ಥಿತಿಗಳ ಮೇಲೆ,
ಎಲ್ಲರೂ ಗಮನ ಹರಿಸುವುದು ಕೇವಲ ವಿಚಾರಗಳ ಮೇಲೆ.
ಆಮೇಲೆ ಏನೇನಾಗುತ್ತದೋ ತಿಳಿಯದು,
ಆದರೆ ಖಂಡಿತವಾಗಿಯೂ ಹೊಸದೊಂದು ಸಂಭ್ರಮವಿರುತ್ತದೆ.

​ಪ್ರತಿ ಗಡಿಯೂ ದಾಹದಿಂದ ಬತ್ತಿ ಸತ್ತು ಹೋಗುತ್ತದೆ,
ಎಲ್ಲಾ ತಾಯಂದಿರು ತಮ್ಮ ಮಕ್ಕಳ ಜೊತೆ ನೆಮ್ಮದಿಯಿಂದ ಇರುತ್ತಾರೆ.”

‍ಲೇಖಕರು Admin

7 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading