ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಜಮಾನಿ ಮತ್ತು ಸೇವಕಿ

ಅಕ್ಷಯ ಕಾಂತಬೈಲು

ಮೂರನೆ ಅಂತಸ್ತಿನ
ಅಪಾರ್ಟುಮೆಂಟಿನ
ಒಳಗೆ

ನಿದ್ದೆಯ ಕಣ್ಣು ಹಿಡಿದು
ತೇಲುತ್ತಾ
ಕಿಟಕಿಯ ಕರ್ಟನ್ನ
ಮೆತ್ತಗೆ ಸರಿಸಿ
ಚೈರ್ ಮೇಲೆ
ನಿಧಾನವಾಗಿ
ಕೂತಳು

ಕಾಫಿ ಕಪ್ಪನ್ನು
ತನ್ನ ಉಗುರುಗಳಿಂದ
ತಾಳ ಹಾಕಿ
ಯಾವತ್ತಿನ ಹಾಡಿಗೆ
ಅನುವಾದಳು

ಮೊದಲಿಗೆ ಒಂದು
ಗುಟುಕು ಹೀರಿ
ನಾಜೂಕಾಗಿ ಕೆಮ್ಮಿ
ಗಂಟಲು ಸರಿಪಡಸಿದಳು

‘ಸ್ವಚ್ಛಂದವಾಗಿ
ಬೆಳೆದಿರುವ
ರಮೆಗೆ
ಯಾವದಾರೂ
ಯಾತನೆ ವೇದನೆ
ಕರುಣಿಸು ತಂದೆ
ಮಥುರ ನಗರಪತಿ’
ರಾಗ ಒಂದು ಹಂತ
ತಲುಪಿ ಮುಂದುವರಿಕೆ
ಇನ್ನೂ ಇತ್ತು

ಕಸಗುಡಿಸಿ ನೆಲವೊರೆಸಿ
ಕೆಲಸದವಳು ಬಂದಳು
ಅವಳೆದುರು ನಿಂತಳು
‘ಅಕ್ಕವ್ರೆ ಅವರೆ
ಕಾಳಿನ‌ ಸುಖಕ್ಕಾದರೂ
ಇವತ್ತು ನಾಲ್ಕು ಕಾಸು
ಜಾಸ್ತಿ ಕೊಡಿ’
ಎಂದಳು

‍ಲೇಖಕರು Avadhi

31 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading