ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ ಪಾಟೀಲ ಕವಿತೆ – ಮಿಥುನಕ್ಕೆ ಮೈದೆರೆದರೆ…

ಮಹಾಂತೇಶ ಪಾಟೀಲ

1.
ನಿನ್ನೆಯಷ್ಟೇ ಅವನ
ಮದುವೆಯಾಯಿತು.

ಉಳಿದ್ದ ಬಿತ್ತಿದ್ದ
ಪಾದ ಸ್ಪರ್ಶಿಸುತ್ತಲೆ
ಹೊಲವನೆಲ್ಲ ಸುತ್ತಿದ್ದ.

ಮಳೆ ಬಾರದ ಕಾಲಕೆ
ಗಿಡಗಿಡಕ್ಕೆ ಕೂತು ಕಣ್ಣೀರ ಮಳೆಗರೆದು
ಮೈಯೆಲ್ಲ ಮೂಡಿ ಹಸಿರಾಗಿದ್ದ.

ನನ್ನ ರೆಂಬೆಕೊಂಬೆಗಳಲಿ
ಸುಳಿದಾಡುತ್ತ; ಹೂ ಬಿರಿವ ಕಾಲಕ್ಕೆ
ಹಣ್ಣಿನ ಲೆಕ್ಕಹಾಕಿದ್ದ.

2.

ಈ ಹುಡುಗರೇ ಹೀಗೆ
ಮೈಯೆಲ್ಲ ಹಸಿರು ಮೂಡಿಸಿ
ಹೊರಟು ಬಿಡವರು.

ತಾನೇ ಬೆಳೆದ ಹೂವನು
ತಾವೇ ಸವಿಯಬೇಕೆಂದ ಹಣ್ಣನ್ನು
ಯಾರದೋ ಕೈಗಿರಿಸಿ.

ತ್ಯಾಗದ ತೊಟ್ಟಿಲಲ್ಲಿ
ಪ್ರೀತಿಯ ಹೆಣವನ್ನಿಟ್ಟು ತಿರುಗುವುದು
ಈ ಹುಡುಗರಿಗೊಂದು ಖಯಾಲೆ.

3.

ಅದೇನು ಮಧುಮಗನೋ…?
ಮಿಥುನಕ್ಕೆ ಮೈದೆರೆದರೆ
ಐಟಂ ಸಾಂಗ್ ಕೇಳುತ್ತ ನಿದ್ದೆಯಲಿ ಒದ್ದೆಯಾಗುವ.

ನೂರಂಕದ ಹುಡುಗನಂತೆ
ಸೊನ್ನೆ ಸುತ್ತಿರುವನು
ಶಯ್ಯಾಗ್ರಹದ ಸುರತ ಸೋಪಾನದಲಿ

‍ಲೇಖಕರು Admin

26 November, 2022

1 Comment

  1. dr .maitryini G

    ಶ್ರೀದೇವಿ ಯವರ ಗಜಲ್ ಅರ್ಥಪೂರ್ಣವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading