ಯುದ್ಧ ಆರದ ನೆಲದಲ್ಲಿ ಬುದ್ಧಬೇಕು
ಮಲ್ಲಮ್ಮ ಯಾಟಗಲ್
*
ಎಲ್ಲೋ ಬೀಳುವ ಬಾಂಬುಗಳಿಗೆ
ಎಲ್ಲೊಂದರಲ್ಲಿ ಸಿಡಿಸುವ ಮಿಸೈಲ್ಸಿಗೆ
ನಮ್ಮ ಮನೆಯ ಅಡುಗೆ ಮನೆಯ ನಿಶಬ್ದವಾಯಿತು
ಹುಚ್ಚು ರಾಜರಿಗೆ ಇದೆಂತಹ ತೆವಲು
ಇನ್ನೊಬ್ಬರ ಮನೆಯೊಳಗೆ ಮೂಗು ತೂರಿಸಿ
ರಕ್ತದ ಮುಸಿ ನೋಡುವ ಚಪಲವೇಕೆ
ಯುದ್ಧ ನೆಲದಲೀಗ ಬುದ್ಧ ಬೇಕು
ಓದುವ ಪಾಠಶಾಲೆಯಲ್ಲಿ ಕಂದಮ್ಮಗಳ
ಕನಸು ಅರಳುವ ಮುನ್ನ
ಸಾಲು ಮಸಣಗಳು ಸಾಲದಾಯಿತು
ಯುದ್ಧ ನೆಲದಲ್ಲಿ ಬುದ್ಧ ಬೇಕು
ನನ್ನದಲ್ಲ, ನಿನ್ನದಲ್ಲದ, ಹಣೆಬರಹಕ್ಕೆ
ಇಲ್ಲಿ ರಾಜನೇ ಹೊಣೆಗಾರ
ಅವನ ಹಣೆಬರವನ್ನೆ ಅಳಿಸಬೇಕು ..
ಯುದ್ಧ ನೆಲದಲ್ಲಿ ಬುದ್ಧ ಬೇಕು
ನಮ್ಮ ಅಂಗಳದಲ್ಲಿ ಆಟಿಕೆಗಳು ಅನಾಥವಾಗಿವೆ
ಆಟವಾಡಬೇಕಾದ ಕಂದ ಸಾವಿನ ದಿನ ಎಣಿಸುತ್ತದೆ
ಈಗ ರಾಜನ ಕೊರಳಿಗೆ ಫತ್ವಾ ಹೊರಡಿಸಬೇಕಾದ ಹೊತ್ತು
ಯುದ್ಧ ನೆಲದಲ್ಲಿ ಮೊತ್ತೊಬ್ಬ ಬುದ್ದನೇಬೇಕು






0 Comments