ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆಯಾಳದ ಸ್ತ್ರೀ ಸಾಹಿತ್ಯ ಸಂವೇದನೆ

ಡಾ.ಪಾರ್ವತಿ ಜಿ‌ ಐತಾಳ್ ಅವರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’

ಆದಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಸಾವಿತ್ರಿ ಶ್ಯಾನುಭಾಗ ಅವರ ಬರಹ ಇಲ್ಲಿದೆ.

-ಸಾವಿತ್ರಿ ಶ್ಯಾನುಭಾಗ

ಕಾಲೇಜಿಗೆ ಹೋಗುವಾಗ ಅಲ್ಲಿ ದೊರೆಯುತ್ತಿದ್ದ ಏಕೈಕ ಮಲೆಯಾಳಿ ಪತ್ರಿಕೆಯನ್ನು ಅನಿವಾರ್ಯವಾಗಿ ಓದಬೇಕಾಗಿ,ಇಷ್ಟಪಟ್ಟು,ಸ್ವಂತ ಪರಿಶ್ವಮದಿಂದ ಮಲೆಯಾಳಿ ಭಾಷೆಯನ್ನು ಕಲಿತು ಕನ್ನಡ ಭಾಷೆಗೆ ಮಲೆಯಾಳದಿಂದ ಅನೇಕ ಕೃತಿಗಳನ್ನು ಅನುವಾದದ ಮೂಲಕ ಕೊಡುಗೆಯಾಗಿ ನೀಡಿರುವ ಲೇಖಕಿ ಡಾ.ಪಾರ್ವತಿ ಜಿ ಐತಾಳ್‌ ರವರು ʼಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳುʼ ಕೃತಿಯ ಮೂಲಕ ಮಲೆಯಾಳದಲ್ಲಿ ೧೯೩೦ ರಿಂದಲೇ ಮಹಿಳೆಯರು ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿದ್ದರ ಉಲ್ಲೇಖಗಳನ್ನು ತಿಳಿಸುವ ಮೂಲಕ ಮಹಿಳಾ ಸಾಹಿತಿಗಳ ಪರಿಚಯ,ಅವರ ಲೇಖನಗಳ ವಿಶ್ಲೇಷಣೆ,ವಿಭಿನ್ನತೆ,ವಿಶಿಷ್ಟತೆಯನ್ನು ಓದುಗರಿಗೆ ತಿಳಿಸುತ್ತಿದ್ದಾರೆ.

ಈ ಮುಂಚೆ ಅಡುಗೆಮನೆಯ ಕತ್ತಲೆಕೋಣೆಗೆ ಸೀಮಿತವಾಗಿ ಮನೆಯವರ ಪರಿಚಾರಿಕೆಯಾಗಿ ಬಾಳು ಸವೆಸಿದ್ದ ಮಹಿಳಾಮಣಿಗಳು ತಮ್ಮಲ್ಲಿರುವ ಸಾಹಿತ್ಯಭಾವವನ್ನು ಬರವಣಿಗೆಯಲ್ಲಿ ಅಳವಡಿಸಲುತೊಡಗಿದಾಗ ಅವರು ಎದುರಿಸಬೇಕಾದ ಸವಾಲುಗಳು,ಅವನ್ನು ಮೆಟ್ಟಿನಿಂತು,ಸಮಾಜಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಹಸ, ಮೂಡನಂಬಿಕೆಗಳ ವಿರುದ್ಧ ಧ್ವನಿಯೆತ್ತುವ ಧೈರ್ಯ,ಕಥೆಯ ಮೂಲಕ,ಕಾವ್ಯದ ಮೂಲಕ ಅವರು ತೋಡಿಕೊಂಡ ಅಳಲು,ಸ್ತ್ರೀಸ್ವಾತಂತ್ರ್ಯಕ್ಕಾಗಿ ದುಡಿದ ಮಹಿಳೆಯರ ಸಾಧನೆ, ಇವನ್ನೆಲ್ಲ ಬರೆಯುವಾಗ ಅವರು ಎದುರಿಸಬೇಕಾದ ಅಪಮಾನ ಹೀಗೆ ಇವುಗಳತ್ತ ಬೆಳಕುಹರಿಸಿದ್ದಾರೆ.

೪೦ಕ್ಕೂ ಹೆಚ್ಚು ಮಹಿಳಾ ಸಾಹಿತಿಗಳ ಬದುಕಿನ ಚಿತ್ರಣ ನೀಡಿರುವ ಲೇಖಕಿ,ಆ ಲೇಖಕಿಯರ ಪರಿಚಯ,ಅವರ ಲೇಖನಗಳ ವಿಮರ್ಶೆ,ಶ್ರೇಷ್ಠತೆ ಇವುಗಳತ್ತ ಬೆಳಕು ಹರಿಸಿ,ನಾವೊಮ್ಮೆ ಆ ಕಥೆ,ಕವನಗಳನ್ನು ಓದಬೇಕು ಎಂಬ ಆಸೆಯನ್ನು ಮೂಡಿಸುತ್ತಾರೆ.ಆ ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿದ್ದರೆ ಆ ಕೃತಿಯ ,ಅನುವಾದಕರ ಉಲ್ಲೇಖ ಮಾಡುವ ಲೇಖಕಿ,ಅವರೇ ಅನುವಾದ ಮಾಡಿರುವ ಹತ್ತಾರು ಕೃತಿಯ ಪರಿಚಯವನ್ನು ಮಾಡುತ್ತಾರೆ.

೩೧ ಕಾದಂಬರಿ ಬರೆದರೂ ಪ್ರತಿ ಕಾದಂಬರಿಯ ಕಥಾವಸ್ತು ವಿಭಿನ್ನವಾಗಿದ್ದೂ ಎಲ್ಲೂ ಪುನರಾವರ್ತನೆಯಾಗದಿರುವ ಕಾದಂಬರಿಗಳ ಲೇಖಕಿ ಆರ್.ಶ್ಯಾಮಳ,ತಮ್ಮ ಕಲ್ಪನಾ ಜಗತ್ತಿನಲ್ಲಿ ಪ್ರೀತಿಗೆ ಜಾಸ್ತಿ ಪ್ರಾಧಾನ್ಯತೆ ನೀಡಿ ಕಥೆಗಳನ್ನು ಹೊಸೆದ ಲೇಖಕಿ ಮಾಧವಿ ಕುಟ್ಟಿಗೆ ಅಂದಿನ ಜನತೆ ನೀಡಿದ ಕಿರುಕುಳ,”ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಹೇಳುತ್ತಾ ಸ್ತ್ರೀಸ್ವಾತಂತ್ರ್ಯ ನೀತಿಯನ್ನು ಎತ್ತಿಹಿಡಿಯುತ್ತಾ ಕೃತಿ ರಚನೆ ಮಾಡಿದ ಸಾರಾ ಜೋಸೆಫ್‌ ರವರು,ಇಂಗ್ಲೀಷ್‌ ಪ್ರೊಫೆಸರ್‌ ಆಗಿದ್ದರೂ ಮಲಯಾಳಿ ಹೃದಯದ ಭಾಷೆಯೆಂದು ಹೇಳುತ್ತಾ ಕೃತಿಗಳನ್ನು ಬರೆದ ಚಂದ್ರಮತಿಯವರು,ಪೌರಾಣಿಕ ಪಾತ್ರಗಳ ಮನೋವಿಶ್ಲೇಷಣೆ ಮಾಡುತ್ತಾ ಹೆಣೆದ ಕವನಗಳು ಕವಯಿತ್ರಿ ವಿ.ಎಂ.ಗಿರಿಜಾ ರವರು ಹೀಗೆ ವಿವಿಧ ಲೇಖಕಿಯರ ವಿಭಿನ್ನತೆಯನ್ನು ಗಮನಿಸಿ ಲೇಖಕಿ ನಮಗೆ  ಅವರ ಧ್ವನಿಗಳ ಪರಿಚಯ ಮಾಡಿಸಿದ್ದಾರೆ.

ಮಲೆಯಾಳ ಸಾಹಿತ್ಯದಲ್ಲಿ ಕೊಡುಗೆ ನೀಡಿರುವ ಇನ್ನಷ್ಟೂ ಲೇಖಕಿಯರ ಪಟ್ಟಿಯನ್ನೂ ಪುಸ್ತಕದ ಕೊನೆಯಲ್ಲಿ ಲೇಖಕಿ ಉಲ್ಲೇಖಿಸಿರುವುದು ವಿಶೇಷ.

‍ಲೇಖಕರು Admin

21 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading