ಅರುಣಕುಮಾರ ಹಬ್ಬು ಅವರ ಕಾದಂಬರಿ ‘ಮಹಮ್ಮೂದ್ ಗವಾನ್’
ಪ್ರಿಸಮ್ ಬುಕ್ಸ್ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಅವರ ಬರಹ ಇಲ್ಲಿದೆ.
-ಉದಯಕುಮಾರ ಹಬ್ಬು
ನಮ್ಮ ಅಣ್ಣ ಅರುಣಕುಮಾರ ಹಬ್ಬು ಇವರು ಪ್ರಜಾವಾಣಿ ವರದಿಗಾರಾಗಿದ್ದಾಗ ಅವರನ್ನು ಬೀದರಿಗೆ ಪತ್ರಿಕೆ ವರ್ಗಾವಣೆ ಮಾಡಿತು. ಅವರು ಒಂದು ಪ್ರಸಿದ್ಧ ಐತಿಹಾಸಿಕ. ಪ್ರದೇಶಕ್ಕೆ ವರ್ಗಾವಣೆಗೊಂಡಿದ್ದ. ಬಹಮನಿ ಸಾಮ್ರಾಜ್ಯ ಅಲ್ಲಿ ಬಹು ವೈಭಯುತವಾಗಿ ಆಳಿತ್ತು. ಅಲ್ಲಿ ಪರ್ಷಿಯಾದಿಂದ ಕುದುರೆ ಮತ್ತು ಮುತ್ತು ರತ್ನಗಳ ವ್ಯಾಪಾರ ಮಾಡಲು ಗವಾನ್ ಪ್ರದೇಶದಿಂದ ಮಹಮ್ಮೂದ್ ಬೀದರಿಗೆ ಬರುತ್ತಾನೆ. ಅಲ್ಲಿ ವ್ಯಾಪಾರ ಮಾಡುತ್ತ ಬಹುಮನಿ ಸಾಮ್ರಾಜ್ಯಕ್ಕೆ ಅಪಾರ ಸಂಪತ್ತು ತರುತ್ತಾನೆ. ಅಂದಿನ ಬಹಮನಿ ಸಾಮ್ರಾಟ ಹುಮಾಯುನ್ ಮಹಮ್ಮೂದ್ ನಿಗೆ ವ್ಯಾಪಾರಿಗಳ ರಾಜಕುಮಾರ ಎಂಬ ಬಿರುದು ಕೊಡುತ್ತಾನೆ. ಸಾಮ್ರಾಟನ ಪ್ರೀತಿ ಮತ್ತು ವಿಶ್ವಾಸ ಗಳಿಸುವಲ್ಲಿ ಮಹಮ್ಮೂದ್ ಯಶಸ್ವಿಯಾಗುತ್ತಾನೆ ಸಾಮ್ರಾಟ ಅವನನ್ನು ತನ್ನ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಅವನನ್ನು ವಜೀರ್ ಅಂದರೆ ಪ್ರಧಾನ ಮಂತ್ರಿತ್ರಿಯನ್ನಾಗಿ ನೇಮಿಸುತ್ತಾನೆ.
ಮಹಮ್ಮೂದ್ ಬಹುನಿಷಗಠೆಯಿಂದ ಬಹಮನಿ ಸಾಮ್ರಾಟರ ಮತ್ತು ಸಾಮ್ರಾಜ್ಯದ ಸೇವೆ ಸಲ್ಲಿಸುತ್ತಾನೆ
ಮಹಮ್ಮೂದ್ ಗವಾನ್ ಮೂಲತಃ ಪರ್ಷಿಯಾದ ಗಿಲಾನಿ ಸಾಮ್ರಾಜ್ಯದ ವಜೀರ್ ನ ಹಮ್ಮೂದ್ ನ ಮಗ ಅಪ್ಪ ಕೂಡ ಸಾಮ್ರಾಜ್ಯವನ್ನು ಬಹುನುಚಯಿಂದ ಸೇವೆ ಸಲ್ಲಿಸಿದ್ದ. ಅವನ ಜನಪ್ರಿಯತೆಗೆ ಅಧಿಕಾರಿಗಳು ಕರುಬುತ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ಮಗ ಮಹಮ್ಮೂದ್ ನಿಗರ ಈ ತಾಜಕೀಯ ಸಂಚು, ಷಡ್ಯಂತ್ರ ವಂಚನೆ ದ್ರೋಹ ಇವಗಳಿಂದ ಬೇಸತ್ತು ರಾಜಕೀಯವನ್ನು ಮಾತ್ರವಲ್ಲ, ತನ್ನ ಹುಟ್ಟೂರಾದ ಗಿಲಾನಿಯನ್ನೇ ತ್ಯಜಿಸಿ ವ್ಯಾಪಾರಕ್ಕೆಂದು ತನ್ನೂರನ್ನು ತ್ಯಜಿಸಿ ಅಫ್ಘಾನಿಸ್ತಾನ, ಇರಾನ್, ಖುರಸ್ತಾನ್ ಇರಾಕ್ ಈಜಿಪ್ತಿನ ಕಾಯರೋ ನಗರಗಳನ್ನೆಲ್ಲಾ ಸುತ್ತಿ ಭಾರತದ ದಾಬೋಲ್ ಬಂದರಿಗೆ ಬಂದು ವಿಧಿ ಅವನನ್ನು ಬೀದರಿನತ್ತ ಕರೆದೊಯ್ಯುತ್ತದೆ .
ಹೀಗೆ ಈ ಕಾದಂಬರಿ ಬಹಮನಿ ಸಾಮ್ರಾಜ್ಯದ ವೈಭವಗಳನ್ನೂ ಸಾನ್ರಾಹೀಗೆ ಈ ಕಾದಂಬರಿ ಬೀದರನ್ನು ಆಳಿದ ಬಹಮನಿ ಸುಲ್ತಾನರ ಆಳ್ವಿಕೆಯ ಬಗ್ಗೆ ಸುಲ್ತಾನರ ಬಗ್ಗೆ ಆ ಸಾಮ್ರಾಜ್ಯದ ವೈಭವದ ಕುರಿತಾಗಿ ಅತ್ಯಂತ ಆಕರ್ಷಕ ನಿರೂಪಣೆಯಿಂದ ನಮ್ಮ ಮುಂದಿಡುತ್ತದೆ.
ರಾಜಕೀಯ ಅಂದರೆ ಅಧಿಕಾರ ವ್ಯಾಮೋಹ, ಅಧಿಕಾರವನ್ನು ಪಡೆಯಲು ಕುತ್ಸಿತ ವ್ಯಕ್ತಿಗಳು ಹೂಡುವ ಷಡ್ಯಂತ್ರ, ನಂಬಿಕೆ ದ್ರೋಹ ವಿಶ್ವಾಸಘಾತುಕತನ, ಇವೆಲ್ಲವೂ ಇದ್ದು ಮಹಮ್ಮೂದ್ ನಿಗೆ ಗಿಲಾನಿಯ ಸಾಮ್ರಾಟರು ವಜೀರ್ ಆಗಲು ಹೇಳಿದರೂ ಒಪ್ಪದೆ, ಮಹಮ್ಮೂದ್ ತಂದೆಯ ಬೋಧನೆಗೂ ಒಪ್ಪದೆ ಮನೆ ಅಮ್ಮ-ಅಪ್ಪ ಮಡದಿ ಮಕ್ಕಳು ಸಹೋದರಿ ಇವರನ್ನೆಲ್ಲ ಬಿಟ್ಟು ಬೀದರಿಗೆ ಬಂದು ಬಹಮನಿ ಸಾಮ್ರಾಟರ ಕೃಪೆಯಿಂದ ಬಹಮನಿ ಸಾಮ್ರಾಜ್ಯದ ವಜೀರ್ ಆಗುತ್ತಾನೆ ಅವನಿಗೆ ರಾಜಾಶ್ರಯ ನೀಡಿದ ಹುಮಾಯುನ್ ಅಷ್ಟೊಂದು ಒಳ್ಳೆಯ ವ್ಯಕ್ತಿಯಲ್ಲದಿದ್ದರೂ ಮಹಮ್ಮೂದ್ ನಿಷ್ಠೆಯಿಂದಲೇ ಸೇವೆ ಸಲ್ಲಿಸುತ್ತಾನೆ ಹುಮಾಯುನ್ ನ ಆಡಳಿತದಿಂದ. ರೋಸಿ ಹೋದ ಪ್ರಜೆಗಳು ಅವನು ಸತ್ತಾಗ ಸಂಭ್ರಮಪಡುತ್ತಾರೆ. ಹುಮಾಯುನ್ ನ ಮಗ ಪಟ್ಟಕ್ಕೆ ಬರುತ್ತಾನೆ. ಆಗ ಪಟ್ಟಾಭಿಷಕ್ತ ರಾಜ ಕೇವಲ ಒಂಬತ್ತು ವರ್ಷದ ಬಾಲಕ ಆಡಳಿತದ ಜವಾಬ್ದಾರಿಯೆಲ್ಲ ಮಹಮ್ಮೂದ್ ನ ಮೇಲೆ ಬೀಳುತ್ತದೆ.ಬಾಲಕ ರಾಜನಾದ್ದರಿಂದ ಇತರ ರಾಜರು ಗರಿಗೆದರಿ ಯುದ್ಧಕ್ಕೆ ಸನ್ನದ್ಧರಾಗುತ್ತಾರೆ ಮಹಮ್ಮೂದ್ ಈ ಶತ್ರುಗಳಿಗೆಲ್ಲ ಚಳ್ಳೆ ಹಣ್ಣು ತಿನ್ನಿಸುತ್ತಾನೆ.
ಬಹಮನಿ ಸಾಮ್ರಾಜ್ಯದ ವಿಸ್ತಾರಕ್ಕೆ ಮಹಮ್ಮೂದ್ ಪರಾಕ್ರಮದಿಂದ ಯುದ್ಧ ರಂಗದಲ್ಲಿ ಹೋರಾಡಿ ಸೋಲಿಸುತ್ತಾನೆ
ಹೀಗೆ ಅನೇಕ ದಿಗ್ವಿಜಯಗಳನ್ನು ಸಾಧಿಸಿ ಬಹಮನಿ ಸುಲ್ತಾನರ ಖಜಾನೆಯನ್ನು ಅಪಾರ ಸಂಪತ್ತಿನಿಂದ ತುಂಬಿಸುತ್ತಾನೆ ಇದು ಸುಲ್ತಾನನಿಗೆ ಅತೀವ ಸಂತೋಷವನ್ನು ಕೊಡುತ್ತದೆ
ಎಲ್ಲ ದಿಗ್ವಿಜಯಗಳ ನಂತರ ಯುದ್ಧವನ್ನು ನಿಲ್ಲಿಸಿ ಆಡಳಿತಾತ್ಮಕವಾಗಿ ಅನೇಕ ಬದಲಾವಣೆಗಳನ್ನು ತರುತ್ತಾನೆ. ಇದರಿಂದ ಅಧಿಕಾರಿಗಳ ಅಧಿಕಾರ ಮೊಟಕುಗೊಳ್ಳುತ್ತದೆ ಅಧಿಕಾರುಗಳು ಈವರೆಗೆ ಜನರ ಹಣವನ್ನು ದೋಚಿ ಭ್ರಷ್ಟಾಚಾರಿಗಳಾಗಿ ಐಷಾರಾಮ ಬದುಕನ್ನು ನಡೆಸುತ್ತಿದ್ದವರಿಗೆ ಮಹಮ್ಮೂದ್ ನ ಈ ಬದಲಾವಣೆ ಅವರ ಹೊಟ್ಟೆಯುರಿಗೆ ಕಾರಣವಾಯಿತು ಅವರೆಲ್ಲ ಒಟ್ಟು ಸೇರಿ ಮಹಮ್ಮೂದ್ ನ ವಿರುದ್ಧ ಷಡ್ಯಂತ್ರ ವಂಚನೆ ಮಾಡುತ್ತಾರೆ. ಸುಲ್ತಾನನಿಹೆ ಮಹಮ್ಮೂದ್ ನ ಬಗ್ಗೆ ಇಲ್ಲ ಸಲ್ಕದ ಚಾಡಿ ಮಾತುಗಳನ್ನು ಹೇಳುತ್ತಾರೆ ಮಹಮ್ಮೂದ್ ನ ಮುದ್ರೆಯನ್ನು ಅಪಹರಿಸಿ ಅದನ್ನು ನಕಲಿ ಪತ್ರಕ್ಕೆ ಒತ್ತಿ ಮಹಮ್ಮೂದ್ ನ ರಾಜದ್ರೋಹವನ್ನು ಸಾಬೀತುಪಡಿಸುತ್ತಾರೆ
ಸುಲ್ತಾನ್ ಈ ನಯವಂಚಕರ ಮಾತುಗಳನ್ನು ಕೇಳಿ ಅದರಂತೆ ನಡೆಯುತ್ತಾನೆ.
ರಾಜದ್ರೋಹಿಗೆ ಇರುವ ಒಂದೇ ಒಂದು ಶಿಕ್ಷೆ ಮರಣ ದಂಡನೆ
ಸುಲ್ತಾನ್ ಈ ಆಜ್ಞೆಯನ್ನು ಜಾರಿಗೊಳಿಸುತ್ತಾನೆ ಹೀಗೆ ಮತ್ಸರಿಗಳ, ಅಧಿಕಾರ ವಂಚಿತರ ಷಡ್ಯಂತ್ರ ಮಹಮ್ಮೂದ್ ನ ಜೀವ ಬಲಿ ತೆಗೆದುಕೊಆತ್
ತನ್ನ ತಪ್ಪು ನಡೆಯಿಂದ ಪ್ರಾಮಾಣಿಕ ನಿಷ್ಠಾವಂತ ವಜೀರನಿಗೆ ಮರಣ ದಂಡನೆ ವಿಧಿಸಿದ ಸುಲ್ತಾನನೂ ಪಶ್ಚಾತ್ರಾಪದ ದಳ್ಳುರಿಯಲ್ಲಿ ನಲುಗಿ ಸಾಯುತ್ತಾನೆ.
ಆ ನಂತರ ಬಹಮನಿ ಸಾಮ್ರಾಜ್ಯ ಪತನಗೊಳ್ಳುತ್ತದೆ
ಹೀಗೆ ಮಹಮ್ಮೂದ್ ಗವಾನ್ ಎಂಬ ಮುತ್ಸದ್ದಿ ಪ್ರಾಮಾಣಿಕ, ನಿಷ್ಠಾವಂತನ ದುರಂತ ಅಂತ್ಯವಾಗುತ್ತದೆ
ಬೀದರಿನ ಬಹಮನಿ ಸಾಮ್ರಾಜ್ಯದ ಇತಿಹಾಸವನ್ನು ಅರಿಯಲು ಈ ಕಾದಂಬರಿ ಉಪಯುಕ್ತವಾದ ಆಕರ ಗ್ರಂಥವೆನ್ನಬಹುದು
ಐತಿಹಾಸಿಕ ಕಾದಂಬರಿ ಬರೆಯುವುದು ಅಷ್ಟೊಂದು ಸುಲಭವಲ್ಲ; ಆದರೆ ಅರುಣಕುಮಾರ್ ಹಬ್ಬು ಅವರು ಮೊದಲ ಪ್ರಯತ್ನದಲ್ಲೇ ಹ್ಯಾಟ್ರಿಕ್ ಸಾಧಿಸಿದ್ದಾರೆ
ನಿರೂಒಣೆ ಆಕರ್ಷಕವಾಗಿದೆ ಕುತೂಹಲಕಾರಿ ಆಗಿದೆ.
ಈ ಕಾದಂಬರಿ ಕೇವಲ ಸಾಮ್ರಾಜ್ಯಗಳ ಏಳು ಬೀಳಿನ ಉಚ್ಛ್ರಾಯ ಸ್ಥಿತಿ ಮತ್ತು ಅವಸಾನದ ಕತೆಯಷ್ಟೆ ಅಲ್ಲ; ಅಪ್ಪ-ಅಮ್ನ, ಹೆಂಡತಿ- ಮಕ್ಕಳು ಇಂತಹ ಆತ್ಮೀಯ ಸಂಬಂಧಗಳ ಕಥಾನಕವೂ ಹೌದು. ಎಲ್ಲಿಯೂ ಕತೆ ಬೋರೆನಿಸುವುದಿಲ್ಲ: ರೋಚಕವಾಗಿದೆ.
ಬೀದರಿನ ಭೌಗೋಲಿಕ ಚಿತ್ರಣಗಳು ಕೂಡ ಇವೆ ಅಲ್ಲಿನಜನರ ನಡೆ ನುಡಿ, ಅವರ ಒಳ್ಳೆಯತನ ಇವೆಲ್ಲ ಬಹು ಸೊಗಸಾಗಿ ಚಿತ್ರಣಗೊಂಡಿವೆ
ಅನೇಕ ಆಕರ ಗ್ರಂಥಗಳ ವ ಪಟ್ಟಿಯನ್ನು ಕೊಟ್ಟಿದ್ದಾರೆ
ಮೊದಲ ಪ್ರಯತ್ನದಲ್ಲೇ ಅರುಣಕುಮಾರ ಹಬ್ಬು ಅವರು ಸಿಕ್ಸರ್ ಬಾರಿಸಿದ್ದಾರೆ
ಓದಿ ಆನಂದಿಸಿ






0 Comments