ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮರುಳ’ನ ಮನದಿಂದ..

-ಮರುಳಸಿದ್ದಪ್ಪ ದೊಡ್ಡಮನಿ

ಗಜಲ್

ನಿಮ್ಮ ನೋವು ನಮ್ಮೊಂದಿಗೆ ಹೇಳಲಿಲ್ಲ ನೀವು
ಎಂದಿಗೂ ಒಡಲ ತಾಪವನು ತಿಳಿಸಲಿಲ್ಲ ನೀವು

ಸುಡುವ ಬೆಂಕಿ ನುಂಗಿಯೂ ಭರವಸೆ ಬಿತ್ತಿದೀರಿ
ಕಾಯಕ ಮಾಡುವದನು ಬೇಗುದಿಯಲಿ ಬಿಡಲಿಲ್ಲ ನೀವು

ಎಲ್ಲರೋಳು ಹೊಸ ಚೈತನ್ಯ ತುಂಬಿ ಬರೆಸಿದಿರಿ ಬರೆವವರನೆಲ್ಲ
ಅವರೆದೆಗೆ ಅಕ್ಷರದ ಮುದ್ರೆ ಒತ್ತುವುದ ಮರೆಯಲಿಲ್ಲ ನೀವು

ಗಟ್ಟಿತನದಿ ಮೆಟ್ಟಿ ನಿಂತು ಏಕಾಂಗಿ ಹೋರಾಡಿದಿರಿ
ಹಮ್ಮು ಬಿಮ್ಮುಗಳ ನಿಮ್ಮ ಬಳಿ ಸುಳಿಯಗೊಡಲಿಲ್ಲ ನೀವು

ಹೊಸ ಆಲೋಚನೆ ಚಿಂತನ ಮಂಥನ ಮಾಡುತ್ತಲೆ ನಡೆದಿರಿ
ಮಾತೃತ್ವದ ಹೆಗ್ಗುರುತುಗಳಿವೆ “ಮರುಳ”ನ ಮನದಿಂದ ಕದಲುವದಿಲ್ಲ ನೀವು.

‍ಲೇಖಕರು Admin

18 July, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading