
–ಅಣೇಕಟ್ಟೆ ವಿಶ್ವನಾಥ್
“ಸತ್ತು ಹೋಗಿಬಿಡಬೇಕು”!! ಎಂದು ಅನೇಕರಿಗೆ ಅನಿಸಿರುತ್ತದೆ. ಸಾಯುವ ನಿರ್ಧಾರವನ್ನೇ ಮಾಡಿರಬಹುದು. ಆಗ ಐದು ನಿಮಿಷ ಬಿಡುವು ಮಾಡಿಕೊಂಡು ನಿಮ್ಮ ಜೀವನವನ್ನು ಒಮ್ಮೆ ರಿಪ್ಲೇ ಮಾಡಿ ನೋಡಿರಿ. ಹುಟ್ಟಿದ ದಿನದಿಂದ ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೆಲ್ಲಾ ಒಮ್ಮೆ ಮೆಲುವಕು ಹಾಕಿ ನೋಡಿ, ನೀವು ಹುಟ್ಟಿದಾಗ ಬಾಲ್ಯದಲ್ಲಿ ನಿಮಗೆ ಪ್ರಮುಖವಾಗಿ ನೆನಪಿರುವ ಯಾವ ಖುಷಿಯ ಘಟನೆಗಳಿವೆ, ನೀವು ತುಂಟಾಟ ಮಾಡುತ್ತಿದ್ದ ಸಮಯ. ಶಾಲೆಗೆ ಹೋಗುತ್ತಿದ್ದಾಗ ಗೆಳೆಯ/ಗೆಳತಿಯರ ಜೊತೆಗೆ ಆಟ ಆಡಿದ್ದು, ನಲಿದದ್ದು. ಕಾಲೇಜು ದಿನಗಳಲ್ಲಿ ಆದ ಮೊದಲ ಕ್ರಶ್, ಕಾಲೇಜು ಮುಗಿಸಿದ ದಿನಗಳಲ್ಲಿ ಯಾರೆಲ್ಲಾ ಹೊಸ ವ್ಯಕ್ತಿಗಳು ಬಂದರು, ಏನೆಲ್ಲಾ ನಡೆಯಿತು. ನಿಮ್ಮ ಬದುಕು ಇಲ್ಲಿಯ ವರೆಗೆ ಬಂದು ಸೇರಲು ಅದೆಷ್ಟೊಂದು ಘಟನೆಗಳನ್ನು ಮುಖಾಮುಖಿಯಾಗಿ ಬಂದಿದೆ. ಆಗ ನಡೆದ ಯಾವುದೇ ಸಂದರ್ಭದ ಭಾವನಗೆಗಳು ಬದಲಾಗಿವೆ ಅಲ್ಲವೆ. ಈ ಸಮಯ ಕೂಡ ಕಳೆದು ಹೋಗುತ್ತದೆ. ನಿಧಾನಿಸಿ… ನಿಧಾನಿಸಿ.. this movement will also pass.

ಇ೦ದು ಯುವಜನರಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಯುವಜನರಲ್ಲಿ ಅರಿವು ಮೂಡಿಸಲೆಂದು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿನ ಪದವಿ ಓದುತ್ತಿರುವ ಮಕ್ಕಳು ಅಭಿನಯಿಸಿದ ನಾಟಕ ಹ್ಯಾಂಗ್ ಆನ್. ಕ್ಲ್ಯಾನ್ವಿನ್ ಫರ್ನಾಂಡಿಸ್ ನಿರ್ದೇಶಿಸಿರುವ ಈ ನಾಟಕವು ನನಗೆ ತುಂಬಾ ಇಷ್ಟ ಆಯ್ತು. ಅರಿವು ಮನೆಯು ಕುಕ್ಕೆ ಸುಬ್ರಮಣ್ಯ ಹತ್ತಿರದ ಬಿಳಿನೆಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಚ್ಚೆಪರ್ಬ ಬೇಸಿಗೆ ಶಿಬಿರದಲ್ಲಿ ಈ ನಾಟಕ ನೋಡಿದೆನು. ಇದನ್ನು ಮತ್ತೆ ಮತ್ತೆ ನೋಡಬೇಕೆನಿಸುವ ನಾಟಕ ಇದು. ಎಲ್ಲಿಯೂ ಒಂದರ್ಧ ನಿಮಿಷವೂ ಆಚೀಚೆ ನೋಡಬೇಕೆನಿಸುವುದಿಲ್ಲ. ಕಲಾವಿದನೊಬ್ಬ ಜೀವನದ ಅವಮಾನಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಕ್ಷಣ, ಅವನು ತನ್ನ ಜೀವನವನ್ನು ಹಿಂದಿರುಗಿ ನೋಡಿಕೊಳ್ಳುವುದೇ ನಾಟಕ. ಆ ಮಕ್ಕಳ ಅಭಿನಯವಂತೂ ತುಂಬಾ ಇಷ್ಟ ಆಯ್ತು. ಪ್ರೇಕ್ಷಕರನ್ನು ಒಳಗೊಳಿಸಿಕೊಳ್ಳುವುದು ತುಂಬಾ ಇಷ್ಟ ಆಯ್ತು. (ಆ ಗುಂಪಿನ ಯಾರಾದರೂ ಗೊತ್ತಿದ್ದರೆ ಇದನ್ನು ಅವರಿಗೆ ಟ್ಯಾಗ್ ಮಾಡಿರಿ)






0 Comments