ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೋಧಿ ವೃಕ್ಷದ ಗೆಳತಿ..

-ಡಾ.ಪ್ರಹ್ಲಾದ ಡಿ.ಎಂ

ಬುದ್ಧನೆಂಬ ಮಿಥಿಲೆ ಪಕ್ಷಿ

ಶವಗಳು ಅಳುತ್ತಿವೆ
ಸ್ಮಶಾನಗಳು ನಗುತ್ತಿವೆ
ಕಫನ್ ಬಟ್ಟೆ ಬೀದಿಯಲ್ಲಿ ಬಿದ್ದು ನರಳಾಡುತ್ತಿದೆ
ಮನುಷ್ಯನ ಅಟ್ಟಹಾಸಕ್ಕೆ ಇನ್ನೇಷ್ಟು ಜೀವಗಳು ಬಲಿಯೆಂದು.

ಯುದ್ಧವೆAಬುದು ಆಫಿಮೋ
ಶಸ್ತçಗಳ ಪ್ರದರ್ಶನವೋ ತಿಳಿಯದೆ
ಬುದ್ಧನು ಗೋರಿ, ಸ್ಮಶಾನ, ದರ್ಗಾ ಕಾಯುತ್ತಿದ್ದಾನೆ
ಜಗತ್ತಿನ ಯುದ್ಧವೆಂಬ ಪೆಡಂ ಭೂತಕ್ಕೆ ವಿರಾಮ ನೀಡಲು.

ಬೀದಿ ನಾಯಿಗಳು ಜೇರಸುಲೇಮಿನಾ ಯಾತ್ರೆಮಾಡಿ
ಮೆಕ್ಕಾ ಮದಿರ ಸುತ್ತಿದರೂ ಸ್ವಾರ್ಥ ತಿಳಿಯಾಗದೆ
ಮತ್ತೇ ಕಾಶಿಯಾತ್ರೆ ಹೊರಟು ನಿಂತು
ನಾಳೆಗಳ ದುಬಾರಿ ಪ್ರಯಾಣ ನಿಲ್ಲಿಸೆಂದು ಸಂದೇಶ ಸಾರಿವೆ.

ಯುದ್ಧ ಮಾನವನ ಆಗ್ನಿ ಪರೀಕ್ಷೆಯೋ?
ಇಲ್ಲವೇ ಜಗತ್ತಿನ ಮನುಕುಲದ ನಾಶವೋ?
ತಿಳಿಯದೇ…ಬುದ್ಧನೇ ತಲೆದೂಗಿ, ಮುಂದಿನ ಜನ್ಮವಿದ್ದರೇ
ಮಿಥಿಲೆಯ ಪಕ್ಷಿಯಾಗಿ ಜನ್ಮ ನೀಡೆಂದು ನಸುನಕ್ಕನು,
ಸೂರ್ಯ ತಣ್ಣಗೆ ಕಪ್ಪಾಗಿ ಕಣ್ಣ್ ತೆರೆದು
ಬೆಳ್ಳಕ್ಕಿ ಹಿಂಡುಗಳ ಮೇಲೆ ಬೆಳಕು ಸೂಸಿದ.

ಭೋಧಿ ವೃಕ್ಷದ ಗೆಳತಿ

ಗೆಳತಿ ಹೆಸರಿರುವ ಊರು ನನಗಿರಲಿ
ಹೆಸರಿಲ್ಲದ ಊರಿಗೆ ನಿನ್ನ ಹೆಸರಿಟ್ಟು
ಸಾಮ್ರಾಜ್ಯ ಕಟ್ಟುವೆ…
ಶತಕಾಲವು ಉಳಿವುದು ಇಬ್ಬರ ಪ್ರೀತಿಯ ನಾಮ ಫಲಕ.

ಬಾಡಿದ ಹೂವುಗಳು ನನಗಿರಲಿ
ಅರಳುವ ಹೂವು ನಿನ್ನದಾಗಿರಲಿ
ಗೊತ್ತಿಲ್ಲದ ಹೂವುಗಳಿಗೆ ನಿನ್ನ ಹೆಸರಿಡುವೆ
ಸದಾಕಾಲವೂ ನಿನ್ನ ಉಸಿರಿನ ಜೊತೆ
ಕ್ಯಾದಿಗೆಯಂತೆ ಘಮಿಸಲಿ ಗೆಳತಿ ನಿನ್ನ ಹೆಸರು.

ವಿಳಾಸ ಇರುವ ಊರು ನನ್ನದಾಗಿರಲಿ
ವಿಳಾಸ ಇಲ್ಲದ ನಿನ್ನ ಊರಿಗೆ
ನಾ…ಹುಡುಕುತ್ತ ಬರುವೆ…
ಪ್ರೇಮದ ಫಕೀರ ಜಂಗಮನಾಗಿ ನಿನ್ನ ಪಾದದೆಡೆಗೆ.
ನಾವಿಬ್ಬರು ಕೂಡಿದ ಆ ಊರೇ..
ಪ್ರೇಮಿಗಳಿಗೆ ವಿಳಾಸವಾಗಲಿ ಗೆಳತಿ.

ಕಠಾರಿ, ಕೋವಿ ಇರುವ ಊರು ನನ್ನದಾಗಿರಲಿ
ಹೂವುಗಳ ಭಿತ್ತಿ ಪ್ರೀತಿಯ ಬೆಳೆಯುವ
ಊರು ನಿನ್ನದಾಗಿರಲಿ.
ನಾ…ಕಠಾರಿಗೆ ವಿದಾಯ ಹೇಳಿ ಗುಲಾಬಿಗೆ
ರಕ್ಷಣೆಯಾಗಿ ನಿಂತ ಮುಳ್ಳು ನಾನಾಗುವೇ ಗೆಳತಿ.

ಅಲ್ಲಮನ ಊರು ನನ್ನದು
ಬುದ್ಧನ ಊರು ನಿನ್ನದು
ನಾವಿಬ್ಬರು ಸೇರಿದ ಊರೇ…
ಬುದ್ಧ, ಬಸವ, ಅಂಬೇಡ್ಕರ್ ಬಿತ್ತಿದ
ಜಾತ್ಯತೀತವೆಂಬ ಭೋಧಿವೃಕ್ಷ ಮಂಟಪ ಗೆಳತಿ.

ಶರಣರ ಊರು ನನ್ನದು
ದಾರ್ಶನಿಕರ ಊರು ನಿನ್ನದು
ನಾ…ಹರಳಯ್ಯನ ಮಗ
ನೀ…ಮಿಥಿಲೆಯ ಮಗಳು
ನಾವಿಬ್ಬರು ಕೂಡಿ ಶಾಂತಿಯ ಮದುವೆ
ಆಗಿದ್ದು ಬುದ್ಧನ ಬೆಳಕಿನ ಬೋಧಿ ವೃಕ್ಷದಡಿ ಗೆಳತಿ.

ಕಫನ್ ಹೊದೆಸಿ ಗೋರಿ ಕಟ್ಟುವ ಊರು ನನ್ನದು
ಹೂವುಗಳ ಮುಡುಸಿ ಸಮಾಧಿ ಕಟ್ಟುವ ಊರು ನಿನ್ನದು
ಹಜ್ ಯಾತ್ರೆ ನನ್ನದು, ತೀರ್ಥಯಾತ್ರೆ ನಿನ್ನದು
ನಾವಿಬ್ಬರೂ ಕೂಡಿ ಪ್ರೀತಿಸಿದ್ದು ಬುದ್ಧನ ಬೋಧಿ ವೃಕ್ಷದಡಿ ಗೆಳತಿ.
ಸದಾಕಾಲವೂ ನಮ್ಮಿಬ್ಬರ ಮಧ್ಯೆ ಬುದ್ಧನೆಂಬ ಬೆಳಕಿನ ನಗುವಿರಲಿ.

‍ಲೇಖಕರು Admin

9 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading