ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬಿಕ್ಕುಗಳೇ ಹೀಗೆ…

-ಮಾಲತಿ ಭಟ್

ಬಿಕ್ಕುಗಳೇ ಹೀಗೆ…

ನನ್ನ ಬಿಕ್ಕುಗಳೇ ಹೀಗೆ…
ನೆರಳಿಲ್ಲದ ಜಾಲಿಯಡಿ
ಹಾಸಿ ಹೊದ್ದ ಹೊದಿಕೆ…
ಕುದಿಗಳೆಲ್ಲ, ದಾವಾಗ್ನಿಯಲಿ
ಉರಿಯದೇ ಕಪ್ಪಿಟ್ಟ ಕಮಟು..

ಕಾಡು ಮಲ್ಲಿಯ ಘಮ,
ಬೆಟ್ಟದ ಸುಮ,ಹಸಿರ ರಾಶಿಯ ಮಿರುಗು
ಸಾಲಿನಂಚಲಿ ಒಣಗಿ
ಹೇಳ ಹೆಸರಿಲ್ಲದೇ
ತಳವನಪ್ಪಿದ ತರಗೆಲೆ..

ಊರ ತೇರಿನ ಗದ್ದಲದ
ಬೀದಿಯಲಿ ಹಾರಿಬಿಟ್ಟ ಹರಕೆ,
ಪೀಪೀ,ಮ್ಯಾಜಿಕ್ ಸೋಗಿನಲಿ
ಮಾಯಾ ಮಂತ್ರದ ಚಟಾಕು..

ತೊಟ್ಟಿಕ್ಕುವ ಕಣ್ಣ ಹನಿ
ಜಾರದಂತೆ,ಪಸೆ ಒಸರದೇ
ನಗುವ ಹುಚ್ಚು ಖಯಾಲಿ..
ಅಂಟಿಕೊಂಡ ,ಬೆನ್ನು ಹೊಟ್ಟೆ.
ಅನ್ನವ ಉಣಿಸದೇ
ಒಪ್ಪತ್ತಿನ ನೆಪ. ಹೇಳುವ
ಸ್ವಾಭಿಮಾನಿ…

ಭೋರ್ಗರೆದು ಧುಮ್ಮಿಕ್ಕಿ,
ಸೊಕ್ಕಿ ಹರಿವ ಧಾರೆಯಲಿ
ಕೊಚ್ಚಿ‌ಹೋದ ನುಣುಪು ಗಲ್ಲು…
ಹಿಮ ವೃಷ್ಟಿಯಲಿ ಗುಡುಗಿ
ನಡುಕವ ಮೆಟ್ಟಿದ ಬೆಚ್ಚನೆ ಹಚ್ಚಡದ
ಹರುಕು ಚೂರು..

ನನ್ನ ಬಿಕ್ಕುಗಳೇ ಹೀಗೆ
ರಹ ದೂರದ ಧೂಳಿನಲಿ
ಮಬ್ಬಾಗಿಸಿದ
ಮರುಭೂಮಿಯ ಒಬ್ಬಂಟಿ
ಯಾತ್ರಿಗನ ಸ್ವಗತ…..

‍ಲೇಖಕರು Admin

21 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading