ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಕ್ಕಿ ಬಿಕ್ಕಿ ಅಳುವ ನನ್ನ

-ತಿರುಪತಿ ಭಂಗಿ

ಬದುಕಿನ ವಿಶ್ವವಿದ್ಯಾಲಯ

ಬಿಕ್ಕಿ ಬಿಕ್ಕಿ ಅಳುವ ನನ್ನ
ತೊಡೆಯ ತೊಟ್ಟಿಲಲ್ಲಿ ಹಾಕಿ
ಲಾಲಿಹಾಡ ಹಾಡಿದವಳು
ಸೀರೆ ಸೆರಗನು ಮರೆಮಾಡಿ
ಅವಡುಗಚ್ಚಿ ಎದೆಯ
ಅಮೃತ ಉಣಿಸಿದವಳು

ಅಂಗಳದಲಿ ಆಡುವಾಗ
ಜಾರಿಬಿದ್ದು “ಅಮ್ಮಾ” ಅಂದಾಗ
ಹಿಟ್ಟುಮುಣಗಿದ ಕೈಯಲ್ಲೇ
ರೊಟ್ಟೆಬಡೆಯುವುದನ್ನು ಬಿಟ್ಟು
ಚಂಗನೇ ಅಂಗಳಕ್ಕೆ ಹಾರಿ
ಎಳೆ ಮೊಳಕಾಲಿನಲ್ಲಿ
ಜಿಣಗುವ ರಕ್ತ ಕಂಡು
ಒಳಗೊಳಗೆ ಸಂಕಟಪಟ್ಟವಳು

ಪಾಠಿಯ ಮೇಲೆ ಬರೆದ
“ಅ” ಅಕ್ಷರವನ್ನು
ನೂರೊಂದು ಬಾರಿ ತಿದ್ದಿ ತೀಡಿಸಿ
ಅಕ್ಷರದ ಅರಿವು ಮೂಡಿಸಿದವಳು

ಮೊದಲಾಡಿದ ತೊದಲು ಮಾತು ಕೇಳಿ
ಹಿರಿ ಹಿರಿ ಹಿಗ್ಗಿ ನಲಿದವಳು

ಕುಡಿದು ಬಂದ ಅಪ್ಪ
ಹೊಡೆದು ಮೈ ಬಾಸುಂಡೆ ಮಾಡಿದರೂ
ಆ ಗಾಯ ತೋರಿಗೊಡದೇ
ನೋವಲ್ಲೂ ನಗೆ ಸೂಸಿದವಳು

ಕೂಲಿ ಕೆಲಸಕ್ಕೆ ಹೋಗುವಾಗ
ಬೆನ್ನ ಹಿಂದೆ ಕೂಸುಮರಿ ಮಾಡಿಕೊಂಡು
ಎಳೆ ನೆತ್ತಿ ಒಣಗದಂತೆ
ಸರಗನ್ನೇ ಛತ್ರಿಮಾಡಿ ತಂಪೆರೆದವಳು

ಜೋಳದ ಸುಗ್ಗಿಯಲಿ
ಮೆದೆಗಟ್ಟಲೇ ತೆನೆ ಸೋಸಿ
ಆರು ಸೇರು ಜೋಳಕ್ಕೆ
ಕಣ್ಣಿಗೆ ನಿದ್ದಗಕಟ್ಟಿ
ಹಗಲಿರಳು ದುಡಿದವಳು

ಹೆಗಲಿಗೆ ಬ್ಯಾಗು ಹಾಕಿ
ಸರಕಾರಿ ಸಾಲಿಗೆ ಹೋಗುವಾಗ
ನಾನು ಮರೆಯಾಗುವರೆಗೂ
ನಿಂತು ನೋಡುತ
ತನ್ನ ಚಿಂದಿ ಸೆರಗಲಿ
ನೂರಾರು ಕನಸಳನ್ನು ಉಡಿ ತುಂಬಿದವಳು

ಇಂಥ ನನ್ನವಳೇ
ನನ್ನ ಮೊದಲ ಗುರು
ಅವಳೇ ನನ್ನ ಬದುಕಿನ
ವಿಶ್ವವಿದ್ಯಾಲಯ..!
ಯಾವತ್ತೂ.


‍ಲೇಖಕರು Admin

8 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading