ಅಮೃತ ವಿಷವಾದರೆ, ವಿಷ ಅಮೃತವೇ?
-ಶ್ರೀವಿಭಾವನ
ಅಕಾಲದಲ್ಲಿ
ಅವೇಳೆಯಲ್ಲಿ
ಅಮೃತವೂ ವಿಷವೇ!
ಹಾಗದರೆ ವಿಷ, ಅಮೃತವೇ?
ಗೊತ್ತಿಲ್ಲ
ಕುಡಿದು ಬದುಕಿದವರಿದ್ದರೆ ಕೇಳಬೇಕಿದೆ.
ಏಕೆ
ರಜೆ ಹಾಕಬಾರದು ?
ಬರೆಯುವುದಕ್ಕೆ ಒಂದಿಷ್ಟು ದಿನ
ಶಬ್ದಳಿಗೂ ಯಾರ ಗೋಳಿನ ಕತೆಯೂ ಬೇಕಿಲ್ಲ
ಭಾರ ತಡೆಯುವ ಶಕ್ತಿ ಎಂದೋ ಕುಂದಿದೆ.
ಅದೇ ಶಬ್ದಾಡಂಬರಗಳು
ಏಕ ಮುಖ ಪ್ರವಾಹದ ಭಾರದ ಹೇರಿಕೆಯಿಂದ
ನಲುಗಿದ ಪದಗಳು
ಬತ್ತಳಿಕೆಯಲ್ಲಿ ಹೆಚ್ಚಿನ ಬಾಣಗಳಿಲ್ಲ
ಇರುವ ಬಾಣಗಳಿಗೋ ಅಕಾಲ ವೃದ್ದಾಪ್ಯ
ಕೈಗೆ ಸಿಗದ ದ್ರಾಕ್ಷಿ ಖಂಡಿತಾ ಹುಳಿ
ಹುಡುಕಾಟ
ಧ್ಯಾನ
ಕೊನೆಗೆ ಮಾಯಾ ಜಿಂಕೆಯಂತಾದ ಪ್ರೀತಿಯ ಮೇಲೆ
ಹುಸಿ ಮುನಿಸು
ಆದರೆ
ಬೆಳಕು ಕರಗುತ್ತಿದ್ದಂತೆ ಜೋರು ಕೋಪ
ಮತ್ತೆ
ಆಧ್ಯಾತ್ಮದ ಸೆರಗಿನ ನಡುವೆ
ದಿನವನ್ನು ಕಳೆಯುವ ಕಸರತ್ತು
ಅದಕ್ಕೆ
ತಪಸ್ಸು ಅನ್ನುವ ಮಣಭಾರದ ಶೃಂಗಾರ
ಹೆಣಕ್ಕೆ ಗುಲಾಬಿಯ
ಹಂಗನ್ನು ತಾಕಿಸಿದಂತೆ
ಇವೆಲ್ಲದರ ನಡುವೆ
ನಗು
ನೋವು
ಎಲ್ಲವನ್ನು ತೊಳೆದು ಹಾಕುವ
ಕಣ್ಣೀರಿನ
ಕಣ್ಣೀರಿಗೆ ಲೆಕ್ಕವಿಟ್ಟವರಾರು
ಮತ್ತೆ ಹೊಸ ದಿನ
ಆದರೆ ಫೋಟೋ ಮಾತ್ರ ಬ್ಲಾಕ್ ಅಂಡ್ ವೈಟ್






0 Comments