ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿದಿನದ ಹಾಡು ಪಾಡು..

ಅಕ್ಬರ್ ಸಿ ಕಾಲಿಮಿರ್ಚಿ

ನೋವು

ಅಂದರೇನೆಂದು ಪ್ರತಿಪಾದಿಸುವುದಲ್ಲವದು ಆಂತರಿಕ ಆಳದಲಿ ನೆಟ್ಟ ಮೊನಚು ಕಾಣುವುದಲ್ಲಚಿಗುರುವುದಲ್ಲಕತ್ತಲೆಯಕೂಪಮುಖದಿಬೆಳಕುಬಿದ್ದಾಗಲೇ ಮರೆಯು

ಯಾರಿಗೂ ಬಿಟ್ಟಿಲ್ಲವದು ಭೇದವರಿಯದು ನಾನು ನೀನು ಅವನು  ಅವಳೊಳಗೂಇದೆ ಶಬ್ದಕೂ ವ್ಯಾಖ್ಯಾನಿಸುವ ಪದವಲ್ಲ ಚನ್ನಮಲ್ಲಿಕಾರ್ಜುನ ನಿವೇದಿಸಿದ ಅಕ್ಕನಿಗೂ

ಗೂಡಲ್ಲಗೋಪುರವಲ್ಲನಿಷ್ಕರ್ಷವದು
ಮಾಮೂಲು ಜನಕ್ಕೂ ನುಗ್ಗುವ  ಮಾಂತ್ರಿಕ ಎದೆಭಾರ ಚೀರಲಾಗದ ವೇದನೆ
ಗಡಿಯಿರದ  ದೂರಕೂ ಚಲನೆ

ಅಪ್ಪ ಅವ್ವ ವಯಸ್ಸಾದರೂ ಮುಗಿದಿರದ ಮಕ್ಕಳು ಸೊಸೆಯಾದಿಯಾಗಿ ತಬ್ಬಿದ
ದಯಾದಿ ಕಲಹದ ಚಹರೆ
ಬಿಡದೆಂದಿಗೂ ಯಾರನು….

ಚಲನಶೀಲತೆಯಲ್ಲೂ ಮೆತ್ತನೆ  ಹೆಜ್ಜೆ
ಹೆಣ್ಣು ಗಂಡು ಪ್ರಾಣಿ ಪಕ್ಷಿಯ ತಟ್ಟಿ
ತೂಗುವ ಗಾಳಿ ಜೋಗುಳಗುಂಟ
ಪ್ರತಿದಿನದ ಹಾಡು ಪಾಡು

‍ಲೇಖಕರು Admin

22 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading