ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಯಣ ಸಾಗುತ್ತದೆ ಹಿತವಾಗಿ..

-ಎಂ.ವಿ. ಶಶಿಭೂಷಣ ರಾಜು

ಎಲ್ಲರೂ ಹೊರಡುತ್ತಾರೆ

ಎಲ್ಲರೂ ಹೊರಡುತ್ತಾರೆ,
ಕೆಲವರು ಮೌನವಾಗಿ,
ಕೆಲವರು ಶಬ್ದ ಮಾಡುತ್ತಾ,
ಮತ್ತೆ ಕೆಲವರು ಯಾರಿಗೂ ತಿಳಿಯದೆ,
ಸುಳಿವೇ ನೀಡದೆ.

ಆದರೂ ವೇದ್ಯವಾಗುತ್ತದೆ
ಅವರ ಇಲ್ಲದಿರುವಿಕೆ.

ಸಮಯ ಮುನ್ಸೂಚನೆ ನೀಡುವುದಿಲ್ಲ,
ಸಮಯದ ಅರಿವು ಎಲ್ಲರಿಗೂ ಇದೆ;
ಆದರೂ, ನಾವೇ ನಿರಂತರ ಎಂದು ಬೀಗುತ್ತೇವೆ.

ಹೊರಡುವವರ ನೆನಪು ಕಾಡುತ್ತದೆ,
ಆದರೆ, ಹೊರಡಲು ತಯಾರಾಗುತ್ತಿರುವವರೊಂದಿಗೆ
ಕಳೆಯುವ ಒಂದು ಕ್ಷಣ
ಎದೆ ತುಂಬುತ್ತದೆ ಸದಾ.

ಸರದಿಯಲ್ಲಿ ಎಲ್ಲರೂ ನಿಲ್ಲಲೇಬೇಕು,
ಆ ಸರದಿ ಮುಗಿಯುವುದೇ ಇಲ್ಲ.
ಆದರೆ ಆ ಸರದಿಯಲ್ಲಿ ಜೊತೆಗಿರುವವರಿಗೆ
ಒಂದು ಮಂದಹಾಸ ಬೀರಿದರೆ ಸಾಕು,
ಪಯಣ ಸಾಗುತ್ತದೆ ಹಿತವಾಗಿ.

‍ಲೇಖಕರು Admin

8 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading