ಡಾ ಬಿ ಜನಾರ್ದನ ಭಟ್ ಸಂಪಾದನೆಯ ಹಟ್ಟಿಯಂಗಡಿ ನಾರಾಯಣ ರಾಯರ ಬದುಕು-ಬರಹ ಮತ್ತು ‘ಆಂಗ್ಲ ಕವಿತಾವಳಿ’
ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ.
-ಉದಯಕುಮಾರ ಹಬ್ಬು
ಮತ್ತು ಆಂಗ್ಲ ಕವಿತಾವಳಿ” ಈ ವಿದ್ವತ್ಪೂರ್ಣ ಸಂಪಾದಿತ ಕೃತಿ ಹನಾರಾ ಜೀವನ ಚರಿತ್ರೆ, ಆಂಗ್ಲ ಕವಿತಾವಳಿಯ ಪ್ರಕಟನೆಯ ಸನ್ನಿವೇಶ ಮತ್ತು ಕನ್ನಡ ಕಾವ್ಯ ಹೊಸ ನಡೆಯ ಕಡೆಗೆ ಹೊರಳಬೇಕೆಂಬ ಹನಾರಾರ ತುಡಿತ, ಅದಕ್ಕಾಗಿ ಅವರು ಕೈಕೊಂಡ ಆಂಗ್ಲ ಕವಿತೆಗಳ ಅನುವಾದ, ಮತ್ತು ಹನಾರಾರು ಓದುಗರ ಕೈಯಲ್ಲಿ ಸಿಗದೆ ಅನಾಮಧೇಯರಾಗಿಯೆ ಉಳಿದ ವಿಷಾದ ಇವೆಲ್ಲ ಈ ಗ್ರಂಥದಲ್ಲಿ ವ್ಯಕ್ತವಾಗಿವೆ.
ಹನಾರಾರ ಆಂಗ್ಲಕವಿತೆಗಳು ತಲುಪಬೇಕಾದ ಬರಹಗಾರರಿಗೆ ತಲುಪಲಿಲ್ಲ. ಈ ಕೃತಿಯು ಮಾರಾಟಕ್ಕೆ ಲಭ್ಯವಿರಲಿಲ್ಲ. ಕೇವಲ ಕೆಲವರಲ್ಲಿ ಖಾಸಗಿಯಾಗಿ ಮಾತ್ರ ಹಂಚಲ್ಪಟ್ಟಿದ್ದವು ಹಾಗಾಗಿ ಹೊಸ ಹೆಜ್ಜೆಯನ್ನು ಕವಿತಾ ರಚನೆಯಲ್ಲಿ, ಅವರು ಪರಿಚಯಿಸಿದ ಶಿಥಿಲ ರಗಳೆಯಲ್ಲಿ ಮುಂದುವರಿಯ ಬಯಸುವ ಕವಿಗಳಿಗೆ ಲಭ್ಯವಾಗಿರಲಿಲ್ಲ. ಹಾಗಾಗಿ ಹನಾರಾರ ಸದುದ್ದೇಶಗಳಾದಹೊಸ ಕವಿರಾಜ ಮಾರ್ಗವಾಗಬಹುದಾದ ಎಲ್ಲ ಅರ್ಹತೆಗಳಿದ್ದರೂ ಕೃತಿ ಅಲಭ್ಯವಾದುದರಿಂದ ಕವಿಗಳ ಮೇಲೆ “ಅಂಗ್ಲ ಕವಿತಾವಳಿ” ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ ಎಂದು ಈ ಕೃತಿ ಪ್ರತಿಪಾದಿಸುತ್ತದೆ.ಜನಾರ್ದನ ಭಟ್ ಅವರ ಈ ಸಂಪಾದಿತ ಕೃತಿ ಆಂಗ್ಲ ಕವಿತಾವಳಿ ಸಂಪಾದನೆಯ ಎರಡನೆಯ ಪ್ರಯತ್ನ
ಈಗಾಗಲೆ ಶ್ರೀ ಎಂ. ಎನ್. ವಿ. ಪಂಡಿತಾರಾಧ್ಯರಿಂದ ಈ ಕವಿತಾ ಸಂಕಲನವು ಮೂಲದೊಂದಿಗೆ ೧೮೮೫ ರಲ್ಲಿ ಸಂಪಾದಿತವಾಗಿ ಪ್ರಕಟವಾಗಿದೆ. ವಾಸ್ತವವಾಗಿ ಈ ಕೃತಿಯ ಶೀರ್ಷಿಕೆಯನ್ನು “ಆಂಗ್ಲ ಕವಿತಾ ಸಾರ” ಎಂದೇ ಹಲವರು ನಿರ್ದೇಶಿಸಿರುವುದು ಉಂಟು.
ಹಟ್ಟಿಯಂಗಡಿ ನಾರಾಯಣ ರಾಯರು “ಆಂಗ್ಲ ಕವಿತಾವಳಿ” ಪ್ರಕಟಿಸಿದರೂ, ಅದು ಮಾರಾಟಕ್ಕಿಂತ ಮಿತ್ರರಲ್ಲಿ ಹಂಚಿಕೆಯಾದದ್ದು, ದುರಂತದ ಕಾರಣವಾಗಿ ಜೀವನದ ಕೊನೆಗೆ ಅವರು ಮುಂಬಯಿಯಲ್ಲಿ ನೆಲಸಬೇಕಾಗಿ ಬಂದುದು ದುರ್ದೈವದ ಸಂಕನ್ನಡಂಜೆ ಮಂಗೇಶ ರಾಯರು ಈ ಪುಸ್ತಕ ಪರಮ ದುರ್ಲಭವಾಗಿದ್ದು ಎಂದು ದಾಖಲಿಸಿದ್ದಾರೆ ಅವರಿಗೆ ಈ ಪುಸ್ತಕದ ಮುಖಪುಟ ಹರಿದು ಹೋದ ಪ್ರತಿಯೊಂದು ಓದಲು ಸಿಕ್ಕಿತಂತೆ.ಆದರೆ ಅವರು ಹ. ನಾ.ರಾ.ಅವರ ಅನುವಾದಗಳನ್ನು ಪತ್ರಿಕೆಗಳಲ್ಲಿ ಮೊದಲೇ ಓದಿದ್ದರು. ಅವರ ಅನುವಾದಗಳನ್ನು ತಾವು ಸಿದ್ಧಪಡಿಸಿದ ಪಠ್ಯಪುಸ್ತಕಗಳಲ್ಲಿ ಬಳಸಿಕೊಂಡೂ ಇದ್ದರು. ಹ.ನಾ. ರಾ. ಅವರ ಕವಿತೆಗಳು ಪುಸ್ತಕ ರೂಪದಲ್ಲಿ ಬರುವುದಕ್ಕಿಂತ ಮೊದಲು ಬಿಡಿಬಿಡಿಯಾಗಿ ಧಾರವಾಡದ “ವಾಗ್ಭೂಷಣ” ಪತ್ರಿಕೆಯಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿದ್ದವು”ಪುಟ ಸಂಖ್ಯೆ ೧೬
ಬಿ. ಎಂ. ಶ್ರೀ ಅವರು “ಇಂಗ್ಲಿಷ್ ಗೀತೆಗಳು” ಬರೆದದ್ದು 1921 ರಲ್ಲಿ. ಬಿ, ಎಂ. ಶ್ರೀ ಅವರಿಗಿಂತ ಮೊದಲೇ ಹನಾರಾ ಅವರು 1919 ರಲ್ಲಿಯೇ ಆಂಗ್ಲ ಕವಿತಾವಳಿ” ಆಂಗ್ಲ ಭಾಷಾ ಪ್ರಸಿದ್ಧ ಕವಿಗಳ ಅನುವಾದ ಮಾಡಿದ್ದರು. ಆದರೂ ಬಿ.ಎಂ. ಶ್ರೀ ಅವದನ್ನು”ಬಿ ಎಂ ಶ್ರೀಯವರು ಉತ್ತಮ ಪಂಡಿತರು,ಸ್ಪೂರ್ತಿದಾಯಕ ಆಚಾರ್ಯರು , ಉತ್ಕೃಷ್ಟ ವಾಗ್ಮಿಗಳು, ಕನ್ನಡದ ರಕ್ಷಾಮಣಿಗಳು ಇದೆಲ್ಲಕ್ಕಿಂತ ಮಿಗಿಲಾಗಿ ಅವರು ಹೊಸಗನ್ನಡದ ಕುಲಪತಿಗಳು, ಅವರ ಪ್ರಭಾವದಿಂದ ಕನ್ನಡದಲ್ಲಿ ಹೊಸ ಕವಿತೆ ಸೊಂಪಾಗಿ ಚಿಗುರಿ ಫಲಿಸಿದ್ದನ್ನು ನೆನೆದರೆ ಆಧುನಿಕ “ಕರ್ಣಾಟ ಕವಿಚೂತವನ ಚೈತ್ರ” ಎಂದೆಲ್ಲಾ ನಿರ್ದೇಶಿಸಲಾಯಿತು
ಹನಾರ “ಆಂಗ್ಲ ಕವಿತಾವಳಿ” ಇಂದು ಸರಕಾರಿ ಗ್ರಂಥಾಲಯದ ಸಗಟು ಖರೀದಿಯ ಪುಸ್ತಕಗಳಂತೆ ಹೆಚ್ಚಿನ ಉಪಯೋಗಕ್ಕೆ ಬರದೆ ಹೋಯಿತು
ಬಿ. ಎಂ. ಶ್ರೀ ಅವರ ಕನ್ನಡ ಕಾವ್ಯಕ್ಕೆ ಕೊಟ್ಡ ಕೊಡುಗೆಗಳು ದೊಡ್ಡದೆ ಆದರೆ ಹನಾರಾ ಇವರೂ ಕೂಡ ಅನುವಾದ ಪ್ರತಿಭೆಯಲ್ಲಿ ಬಿ. ಎಂ. ಶ್ರೀಗೇನೂ ಕಡಿಮೆ ಇಲ್ಲ. ಬಿ ಎಂ ಶ್ರೀ ಅವರಿಗಿಂತ ತೀರ ಭಿನ್ನವಾಗಿ ಹನಾರಾ ಅವರ ಅನುವಾದ ಪ್ರಕ್ರಿಯೆಯಲ್ಲಿ ಸ್ವೋಪ್ರಜ್ಞೆಯು ಉತ್ಕೃಷ್ಟ ಮಟ್ಟದ್ದಾಗಿತ್ತು
ಹನಾರಾ ಅವರ ಅನುವಾದಿತ ಕವಿತೆಗಳು ಕವಿಗಳ ಕೈಯಲ್ಲಿ ಸಿಗದೆ ಇದ್ದುದು ಕನ್ನಡದ ಸಾಹಿತ್ಯದ ದುರಂತ.
ಹನಾರಾ ಅವರು ಅನುವಾದಿಸಿದ Thomas Grayಯ Elegy written in a country Church Yard ಕವಿತೆಯಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ.
Full many a gem purest ray serene
The dark unfathomed cave of ocean bear
Full many a flower is born to blush unseen
And waste its sweetness on the desert air
ಹನಾರಾ ಅವರ ಈ ಪ್ರಯತ್ನ ನಿರೀಕ್ಷೆ ಮಾಡಿದಷ್ಟು ಪ್ರಭಾವ ಬೀರಲಿಲ್ಲ
“ಹ.ನಾ. ರಾ. ಅವರು ಕಾರ್ನಾಡ್ ಸದಾಶಿವ ರಾವ್, ಮತ್ತು ಕುದ್ಮುಲ್ ರಂಗರಾವ್ ಅವರ ಸಮಾಜ ಸುಧಾರಣೆಯ ಕಾರ್ಯಗಳಿಗೆ ಬೆಂಬಲವಾಗಿದ್ದರು. ಅವರ ” ಕೊಂಕಣಿ ಚೊ ಮೂಲಾದರ್ಶು” ಪುಸ್ತಕದ ಮಾರಾಟದಿಂದ ಬರುವ ಹಣವನ್ನು ಹೀಗೆ ವಿನಿಯೋಗಿಸಬೇಕೆಂದು ನಿಯಮಿಸಿದ್ದರು.”ಇದರ ಮಾರಾಟದಿಂದ ಹುಟ್ಟಿ ಬರುವ ಹಣವನ್ನು ಮಂಗಳೂರಿನ ನಿರಾಶ್ರಿತ ಜನಸಹಾಯಕ ಸಂಘಕ್ಕೆ ದಾನವಾಗಿ ಕೊಟ್ಟಿರುವರು ಆ ಸಂಘದ ಸೆಕ್ರೆಡರಿಗಳಾದ ಮ|ರಾ|ಕಾರ್ನಾಡ್ ಸದಾಶಿವರಾವ್, ಕುದ್ಮುಲ್ ರಂಗರಾವ್ ಮಂಗಳೂರು ಕೋರ್ಟ್ ಗುಡ್ಡೆಯ ಪಂಚಮ ಶಾಲೆಯ ಮೆನೇಜರ್ ಕೆ ಮಾಧವರು -ಇವರಿಂದ ಪುಸ್ತಕವನ್ನು ಕೊಳ್ಳಬಹುದು.” ಪುಟ ಸಂಖ್ಯೆ ೧೯
ಈ ಮೇಲಿನ ನಂಬಿಕೆಗಳು ಹುಸಿ ಮತ್ತು ತಪ್ಪು ಎಂದು ಡಾ ಜನಾರ್ದನ ಭಟ್ ಸಾಬೀತುಪಡಿಸಲು ಈ ಹನಾರಾರ ಆಂಗ್ಲ ಕವಿತಾವಳಿ” ಯನ್ನು ಹೊಸ ಒಳನೋಟಗಳಿಂದ ಮತ್ತೊಮ್ಮೆ ಸಂಪಾದಿಸಿದ್ದಾರೆ
ಹನಾರಾ ಕವಿತಾ ರಚನೆಯಲ್ಲಿ ಪ್ರಾಸವನ್ನು ಬಿಟ್ಟು ಬಿಟ್ಟರು ಎಂದೆನಿಸಿದರೂ ಅಲ್ಲಲ್ಲಿ ಅಂತ್ಯಪ್ರಾಸಗಳಿವೆ ಲಯವೂ ಬಿಗಿಯಾಗಿದೆ
ಇವರ ಅನುವಾದ ಸಂಕ್ಷಿಪ್ತ ಅನುವಾದ. ಕವಿತೆಯ ಸಾರವನ್ನು ಹೀರಿ ಕವಿತೆಯ ಆಶಯಕ್ಕೆ ಚ್ಯುತಿ ಬರದಂತೆ ಅನುವಾದದ ಸಂಕ್ಷಪ್ತೀಕರಣವಿದೆ
೯೦ ಸಾಲುಗಳ ಇಂಗ್ಲಿಷ್ ಕವಿತೆಯನ್ನು ೧೮ ಸಾಲುಗಳಲ್ಲಿ ಅನುವಾದಿಸಿದ್ದಾರೆ
ಈ ಸಂಕ್ಷಿಪ್ತೀಕರಣ ಬಿ ಎಂ. ಶ್ರೀ ಅವರ ಇಂಗ್ಲಿಷ್ ಕವಿತೆಗಳಲ್ಲಿ ಕಾಣಸಿಗದು
ಬಿ ಎಂ ಶ್ರೀ ಮೂಲ ಪಠ್ಯಕ್ಕೆ ನಿಷ್ಠರು. ಆದರೆ ಹನಾರಾ ಅವರಿಗೆ literal ಅನುವಾದದಲ್ಲಿ ಆಸಕ್ತಿಯಿಲ್ಲ. ಮೂಲ ಕವಿಯ ಆಶಯಕ್ಕೆ ಚ್ಯುತಿ ಬರದಂತೆ ಸಂಕ್ಷಪ್ತೀಕರಣ ಹನಾರಾ ಅವರ ವಿಶಿಷ್ಟತೆ
ಬಿ ಎಂ ಶ್ರೀ ಅವರದು ಮೂಲಕ್ಕೆ ನಿಷ್ಢವಾದ ಅನುವಾದ. ಆದರೆ ಹನಾರಾ ಅವರದು ಸಾರಾಂಶೀಕರಣ ಅನುವಾದ ತಂತ್ರ.
ಬಿ. ಎಂ. ಶ್ರೀ ಮತ್ತು ಹನಾರಾ ಅವರ ಕಾವ್ಯಗಳ ತುಲನಾತ್ಮಕ ಅಧ್ಯಯನ ಹನಾರಾ ಅವರಿಗೆ ಸಾಹಿತ್ಯ ಚರಿತ್ರೆಯಲ್ಲಿ ಅನ್ಯಾಯವಾಗಿದೆ
ಆನುಷಂಗಿಕವಾಗಿ ಜನಾರ್ದನ ಭಟ್ ಅವರು ಉಲ್ಲೇಖಿಸಿದ ಘಟನೆ ಪಂಜೆ ಮತ್ತು ಮುದ್ದಣ ಕನ್ನಡ ಪಂಡಿತ ಹುದ್ದೆಗೆ ಸ್ಪರ್ಧಾಳುಗಳಾಗಿ ಹೋದಾಗ ಪಂಜೆ ಮಂಗೇಶ ರಾಯರು ಆಯ್ಕೆಗೊಂಡರು.
ಈ ಘಟನೆ ಇವರಿಬ್ಬರ ಕಾವ್ಯದ ಮೇಲೆ ಅಪಾರ ಪ್ರಭಾವ ಬೀರಿತು ಪಂಜೆಯವರು ಆಧುನಿಕ ಕವಿತೆಗಳನ್ನು ಬರೆದರೆ ಕನ್ನಡದ ಮುಂಗೋಳಿ ಮುದ್ದಣ ಹಳೆಗನ್ನಡದಲ್ಲಿ ಬರೆದರು.
ಇವರಿಬ್ಬರ ಸ್ಥಿತಿ ಬಿ ಎಂ ಶ್ರೀ ಮತ್ತು ಹನಾರಾ ಅವರ ಅನುವಾದಿತ ಕವಿತೆಗಳಿಗೆ ಸಾದೃಶ್ಯವಾಗಿದೆ
ಹಟ್ಟಿಯಂಗಡಿ ನಾರಾಯಣ ರಾಯರ “ಆಂಗ್ಲ ಕವಿತಾವಳಿ”ಯ ಪ್ರಕಟನೆ (1919)ಐತಿಹಾಸಿಕವಾಗಿ ಮಹತ್ವದ ಸಂಗತಿ. ಅದು” ಆಂಗ್ಲ ಕವಿತಾ ಸಾರ” ಎಂಬ ಮಾಲೆಯಲ್ಲಿ ಅದರ ಹಿಂದಿನ ವರ್ಷಗಳಲ್ಲಿ “ವಾಗ್ಭೂಷಣ” ಪ್ರಕಟವಾಗುತ್ತಿದ್ದ ಅನುವಾದಗಳ ಪುಸ್ತಕ ರೂಪ” ಪುಟ ಸಂಖ್ಯೆ32
ಜನಾರ್ದನ ಭಟ್ ಇವರು ಹನಾರಾ ಅವರ ಅನುವಾದಿತ ಕವಿತೆಗಳು ಕೆಲವು ಅಂದಿನ ಕವಿಗಳ ಮೇಲೆ ಪ್ರಭಾವ ಬೀರಿದೆ. ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಡುತ್ತಾರೆ.
ಹನಾರಾ ಅವರ ಅನುವಾದದ ಬಗ್ಗೆ ಜನಾರ್ದನ ಭಟ್ ಅವರು ಹೇಳುವುದು ಹೀಗೆ:”ಹ. ನಾ.ರಾ ಅವರ ಅನುವಾದಗಳು ಸರಳ ಸುಂದರವಾದ ಕಾವ್ಯಾನುವಾದಗಳು. ಈ ಕಾಲಕ್ಕೂ ಹೊಸತೆನಿಸುವ,ಖುಷಿ ಕೊಡುವ ಶಬ್ದ ಮಾಧುರ್ಯ, ಲಯ ಅವರ ಕವಿತೆಗಳಲ್ಲಿವೆ ಮೂಲ ಕಾವ್ಯವನ್ನು ಸರಿಮಿಗಿಲೆನಿಸುವಂತೆ ಅನುವಾದಿಸುವಲ್ಲಿ ತಮ್ಮ ವಿದ್ವತ್ತು ಮತ್ತು ರಸಿಕತೆ ಎರಡನ್ನೂ ಮೇಳೈಸಿ ಅವರು ತಮ್ಮ ರೂಪಾಂತರದಂತಹ ಅನುವಾದ ಕವಿತೆಗಳನ್ನು ರಚಿಸಿದ್ದಾರೆ. ಅವರ ಅನುವಾದಗಳಲ್ಲಿ ಪಾಶ್ಚಾತ್ಯ ಪುರಾಣ, ಜೀವನಧರ್ಮ ಇತ್ಯಾದಿ ಪರಿಕಲ್ಪನೆಗಳಿಗೆ ಸಂವಾದಿಯಾಗಿ ಭಾರತೀಯ ಪುರಾಣ ಮತ್ತು ಜೀವನಧರ್ಮಗಳ ಶಬ್ದಗಳನ್ನು ಬಳಸಿರುವುದು ಅನುವಾದಗಳಿಗೆ ಹೊಸ ಮೆರಗನ್ನು ನೀಡಿದೆ.” ಎನ್ನುತ್ತಾರೆ ಜನಾರ್ದನ ಭಟ್ ಇವರು.
ಸಾಹಿತ್ಯ ಚರಿತ್ರೆ ಆಗಾಗ ಪರಿಷ್ಕಾರಕ್ಕೊಳಗಾಗುತ್ತದೆ ಹೊಸ ಸಂಶೋಧನೆ, ಈವರೆಗೆ ಕಂಡಿರದ ಹೊಸ ಕೃತಿಗಳ ಸಂಶೋಧನೆ ಬಂದಾಗ ಸಾಹಿತ್ಯದ ಚರಿತ್ರೆ ಬದಲಾಗಬೇಕು
ಶ್ರೀ ವಿಜಯ ತನ್ನ ಕವಿರಾಜ ಮಾರ್ಗದಲ್ಲಿ ಪಂಪನಿಗಿಂತ ಮೊದಲು ಕವಿಗಳಿದ್ದುದರ ಉಲ್ಲೇಖಗಳನ್ನು ಕೊಡುತ್ತಾನೆ. ಒಂದು ವೇಳೆ ಪಂಪನಿಗಿಂತ ಮೊದಲು ಬರೆದ ಕೃತಿ ಸಿಕ್ಕರೆ ಚರಿತ್ರೆಯನ್ನು ಮುರಿದು ಕಟ್ಟಬೇಕು
ಆ ಕೆಲಸವನ್ನು ಡಾ ಬಿ ಜನಾರ್ದನ ಭಟ್ ವಿದ್ವತ್ಪೂರ್ಣ ಉಲ್ಲೇಖಗಳ ಆಧಾರಗಳ ಮೇಲೆ ಸಾಬೀತು ಪಡಿಸಿದ್ದಾರೆ
ಹನಾರಾ ಅವರ ಜೀವನ ಚರಿತ್ರೆ, ಮತ್ತು ಅವರ ವೃತ್ತಿ ಜೀವನ ದುರಂತ ದಾಂಪತ್ಯ ವಕೀಲಿ ವೃತ್ತಿಗೆ ಬೇಸತ್ತು ಪತ್ರಿಕೋದ್ಯಮಿಯಾಗಿದ್ದು ಮುಂಬೈನಲ್ಲಿ ಇದ್ದೂ ಕನ್ನಡಿಗರ ಸಂಪರ್ಕದಲ್ಲಿದ್ದ ಮಾಹಿತಿಗಳನ್ನು ಸವಿಸ್ತಾರವಾಗಿ ಸೊಗಸಾಗಿ ಕೊಟ್ಟಿದ್ದಾರೆ
ಹನಾರಾ ಅವರ ಕಾವ್ಯ ಮೀಮಾಂಸೆಯನ್ನು, ಕನ್ನಡ ಕಾವ್ಯ ತೆಗೆದುಕೊಳ್ಳಬೇಕಾದ ಹೊಸ ಮಾರ್ಗದ ಕುರಿತು ಅವರು ಹೇಳಿದ ಸಾಹಿತ್ಯದ ಸಿದ್ಧಾಂತಗಳನ್ನು ಸೊಗಸಾಗಿ ಹೇಳಿದ್ದಾರೆ
ಕನ್ನಡ ಓದುಗರಿಗೆ ಗೊತ್ತಿಲ್ಲದ ಅನೇಕ ನೂತನ ಮಾಹಿತಿಗಳನ್ನು ಕೊಟ್ಟಿದ್ದಾರೆ.
ಆಂಗ್ಲ ಕವಿತಾವಳಿಯಲ್ಲಿ ಮಿಲ್ಟನ್, ಎಚ್ ಡಬ್ಲ್ಯೂ ಲಾಂಗ್ ಫೆಲೋ,ಥಾಮಸ್ ಗ್ರೇ, ಶೇಕ್ಸ್‌ಪಿಯರ್ ನ ಹಲವು ನಾಟಕಗಳ ಪ್ರಸಿದ್ಧ ಕಾವ್ಯ ಭಾಗಗಳನ್ನು ಸಂಕ್ಷಿಪ್ತಾನುವಾದದ ತಂತ್ರದಿಂದ ಅನುವಾದಿಸಿ ಸ್ವತಂತ್ರ ಕವಿತೆಗಳಂತೆ ಭಾಸವಾಗುತ್ತವೆ
ಎಮರ್ಸನ್ ಕವಿಯ “” ದಿ ಪೋಯೆಟ್ ” ಎಂಬ ಸುದೀರ್ಘವಾದ ಪ್ರಬಂಧವನ್ನು ಎರಡು ಪುಟಗಳ ಕವಿತೆಯನ್ನಾಗಿ ರೂಪಾಂತರಿಸಿದ್ದು ವಿಶೇಷವೆನಿಸಿತು
ಹನಾರಾ ಅವರ ಕೊಂಕಣಿಯ “ಕೊಂಕಣಿಚೋ ಮೂಲಾದರ್ಶ” ಈ ಲೇಖನ ದೇವನಾಗರಿ ಲಿಪಿಯಲ್ಲಿದೆ :ಭಾಗ ಮೂರು
ಇದರಲ್ಲಿ ಹನಾರಾ ಅವರ ಅನೇಕ ಲೇಖನಗಳಿವೆ.
ಆ ಲೇಖನಗಳು ಹೆಚ್ಚಾಗಿ ಅವರ ಹೊಸ ಕಾವ್ಯ ಮೀಮಾಂಸೆ ಯನ್ನು ಪ್ರತಿಪಾದಿಸುತ್ತವೆ. ಹೊಸತರ ಬಗ್ಗೆ ಇರುವ ಟೀಕೆಗಳ ಕುರಿತೂ ಬರೆದಿದ್ದಾರೆ.
ಆಂಗ್ಲ ಕವಿತಸವಳಿಯ ಕುರಿತು ಪತ್ರಿಕೆಗಳಲ್ಲಿ ಬಂದ ಪತ್ರಿಕಾ ಸಮೀಕ್ಷೆಯ ಮೂರು ಲೇಖನಗಳಿವೆ
ಒಟ್ಟಾರೆಯಾಗಿ ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ವಿದ್ವಾಂಸರಾದ ಡಾ ಬಿ ಜನಾರ್ದನ ಭಟ್ ಮಾಡಿದ್ದಾರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು






0 Comments