-ಕೆ. ಎಂ .ಎಸ್ . ಸ್ವಾಮಿ
ಒಮ್ಮೆ ಗಮನಿಸಿ
ಅಮ್ಮ ಅಮ್ಮನೇ ಆದ ದಿನ ಇಪ್ಪತೈದು,
ಭಾದ್ರಪದ ಮಾಸ ,ಒಂದು..
ಸಾವಿ…ರದ,ಒಂಬೈನೂರ,
ಅರವತ್ತ…ನಾ…ಲಕ್ಕು…
ನಾನು ಗಂಡು ಎಂಬ ಅಹಂ,
ಅಮ್ಮ ಹೇಳಿಕೊಡಲಿಲ್ಲ,
ಅಮ್ಮನೇ ಆಗು ಕಂದ,
ಚಲನೆಯೇ ಸಂತೃಪ್ತ ಸೃಷ್ಟಿ,
ಈ ದಿನ ಅದೆಷ್ಟು ಜೀವಿಗಳು,
ನನ್ನ ಹಾಗೆ ಹುಟ್ಟು ಪಡೆದಿದ್ದಾರೂ,
ತಾಯಂದಿರ ನೋವ ನಲಿವಾಗಿಸಿ,
ನನ್ನ ತಾಯಿ ಎಂದೂ ಹೇಳಲಿಲ್ಲ,
ಹೆಸರುಮಾಡು,ದೊಡ್ಡ ವ್ಯಕ್ತಿಯಾಗು,
ಕಿವಿಮಾತು ಹೇಳಿದಳು,
ಬರೀ ಸನ್ನಡತೆ ಇರಲಿ ಸಕಲ ಜೀವಗಳಿಗೆ,
ಬದುಕು ಬದಲಾಗುವ ತೋರು ಗಂಬ,
ತಾಯಿಯ ಅಸ್ತಿತ್ವ ಪೋಟೋ,
ಪಿತೃಪಕ್ಷವಲ್ಲ,ಆಸ್ತಿಯಲಿನ ಅಸ್ಥಿ,
ಎಲ್ಲ ಅಪ್ಪು ಒಪ್ಪುವ,
ನದಿಯಾಗುವ ಪ್ರೀತಿ,
ಉಸಿರು, ಹಾಲು,ತುತ್ತು ನೀಡಿ,
ಕಾಪಿಟ್ಟವಳು ಇಲ್ಲ ಈಗ,
ಅವಳ ನೆನಪಿನ ಕೌದೀ ,
ನೆನಪುಗಳ ಮರು ಬಳಕೆ,
ಕೌದೀ,ಒಳಗೆ ಕನಸುಗಳ
ಚಟುವಟಿಕೆ ,
ಪ್ರೀತಿಗೆ ಸಾಲಗಾರನಾಗು,
ಋಣಿಯಾಗು,
ಸಾಲ ನೀಡುವ ಶ್ರೀಮಂತನೂ,
ಆಗು, ವೃದ್ಧಿಸಲಿ, ವೃದ್ಯಾಪ್ಯ,
ವೂ, ನೆನಪುಗಳ ಮರುನೆನಪು,
ಕವಿತೆಯಾಗಿ….ಅಮ್ಮನೆಂಬ,
ಹೊಕ್ಕಳಿನ ಜೀವಂತ ಹಚ್ಚೆ.






0 Comments