ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುರುಡಿಗೊಂದು ಕಣ್ಣುಕೊಡು ಭಗವಂತ

-ಅಪರ್ಣಾ ಹೆಗಡೆ

ಚುಮುಚುಮುಚುಮುಗುಡುವ ಶರದ್ರುತುವಿನ ಬೆಳಗು
ಅಂಗಳದ ತುಂಬ ಮುತ್ತು ಪೋಣಿಸಿದ ಹನಿಯ ಸೊಬಗು
ಇನ್ನೂ ತೆರೆಯದ ಕಿಟಕಿ ಹೆಬ್ಬಾಗಿಲು
ಕುರುಡಿಗೊಂದು ಕಣ್ಣುಕೊಡು ಭಗವಂತ
ಈ ಇಳೆಗಿಳಿದ ಬೆಳಗ ಸವಿಯಲು

ಗಡಿಬಿಡಿಯ ಗೋಜಿಲ್ಲದ ಚಳಿಗಾಲದಲ್ಲಿ
ಕಾಲವೆ ಚಲಿಸದೆ ಸೋಮಾರಿಯಾದ ಕಾಲದಲ್ಲಿ
ಹಸಿ ಬೆಳಗೊಂದು
ಈ ಇವಳಿಗಾಗಿ ಬಂದು
ಪುಟ್ಟ ರಂಗವಲ್ಲಿಯ ನಟ್ಟನಡುವಲ್ಲಿ ಕುಳಿತು
ಅಟ್ಟದ ಏಣಿಯ ಮೇಲೆ ಅಂಕುಡೊಂಕಲಿ ಹರಿದು
ಹಿಡಿಗೆ ಸಿಗದೆ ನುಣುಚಿಕೊಂಡು
ಬೆಳಕ ಕಾಣಬೇಕಿದೆ ಕಣ್ಣೊಂದ ಕೊಂಡು

ಶಂಕುಪುಷ್ಪದ ಸುರುಳಿ ಪಕಳೆಯ ಮಧ್ಯ
ಪೇರಲೆಯ ಎಲೆಯ ಮಧ್ಯ ಅವಿತ
ಮಂಗಟೆಯ ಕೊಕ್ಕಿನ ತುದಿಗೆ
ದಾಸವಾಳದ ತೊಟ್ಟಿಗೆ
ಎಲ್ಲೆಂದರಲ್ಲಿ ಹರಡಿ ಹರಿದಾಡಿ ಹಗಲಾಗುವ ಈ ಪರಿಗೆ
ಕಾಣಬೇಕು ಕಣ್ಣುಮುಚ್ಚಿ ಒಂದರೆಕ್ಷಣ ಮೌನದ ಕೋಣೆಯಲ್ಲಿ
ಕಣ್ಣು ಕೊಡು ಭಗವಂತ ಬೆಳಕೊಂದ ಕಾಣಬೇಕು
ಮನದ ನಡುಮನೆಯ ಕತ್ತಲ ಕರಗಿಸಲು

‍ಲೇಖಕರು Admin

31 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading