ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವಜಲಕ್ಕಾಗಿ ಕಣ್ಬಿಟ್ಟು ನಿಂತಿವೆ

-ಮಹಾದೇವ ಎಸ್‌. ಪಾಟೀಲ

ಬರದ ನಕಾಶೆ

ಈ ನಾಡ ತುಂಬಾ ಉರಿಬಿಸಿಲು ಹಾಸಿದೆ
ಬಿರಿದ ನೆಲದ ಒಡಲಾಳ ಬಾಯ್ತೇರದು
ರೈತನ ಎದೆಗೆ ಬರದ ಬರೆ ಹಾಕಿದೆ
ತೀರದ ಸಾಲಕ್ಕೆ ರೈತರ ಆತ್ಮಹತ್ಯೆಯೂ ನಡದಿದೆ.

ಕೃಷ್ಣಾ, ತುಂಗಾ, ಕಾವೇರಿ
ಜನರ ಜೀವನಾಡಿಗಳು ಬತ್ತಿ
ಕೆರೆ, ಬಾವಿ, ಹಳ್ಳ, ಕೊಳ್ಳಗಳು ಒಣಗಿ
ವರುಣನ ಹನಿ ಹನಿಗಾಗಿ ಜೀವರಾಶಿಗಳು
ಜೀವಜಲಕ್ಕಾಗಿ ಕಣ್ಬಿಟ್ಟು ನಿಂತಿವೆ

ಮುನಿದ ಮಳೆರಾಯ ತಂದ ಕ್ಷಾಮಗಾಲ
ಇಳೆಗಾಗಿ ಪ್ರಾರ್ಥನೆ ಮಾಡಿದರೂ
ಗುಡಿಯೊಳಗಿನ ದೇವರು ಮೌನವಾಗಿವೆ
ದುಡಿವ ಜನಗಳ ಬದುಕು ಬಿದಿಗೆ ಬಿದ್ದಿದೆ

ಕೊಟ್ಟಿಗೆಯಲ್ಲಿ ಕಟ್ಟಿದ ರಾಸುಗಳು
ಆರ್ಭಟಿಸುತ್ತಾ ಏದುಸಿರು ಬಿಡುತ್ತಿವೆ
ಹಸಿದ ಬಾಧೆಗೆ ತತ್ತರಿಸಿದ ಜಾನುವಾರುಗಳು
ಕಸಾಯಿಖಾನೆಯ ಹಸಿವು ಇಂಗಿಸಿವೆ

ಪೃಥ್ವಿಯ ಮಡಿಲಲ್ಲಿ ಲಾವಾರಸ ಚಿಮ್ಮಿ
ಅನ್ನದಾತನ ಬದುಕು ಬೂದಿಯಾಗಿದೆ
ಹಸಿದೊಡಲಿನ ಬವಣೆ ನೀಗಿಸಲು
ಜನಜೀವನ ನಗರದತ್ತ ಗುಳೆ ಹೋರಟಿದೆ

ಬಯಲಂಗಳದಲ್ಲಿ ಬಿಸಿಲ್ಗುದುರೆ ಕುಣಿಯುತ್ತಿದೆ
ಕಾನನ ಹಸಿರುಡಿಗೆ ಕಳಚಿ ಬಿಸಿಲು ಚೆಲ್ಲಿ
ನಾಡ ತುಂಬ ಬರದ ಛಾಯೆ ಆವರಿಸಿ
ಬಡವನ ಎದೆಯಲಿ ಬರದ ನಕಾಶೆ ಬಿಡಿಸಿದೆ

ಕಾರ್ಪೋರೆಟ್ ಕಂಪನಿಗಳು
ಸೂಜಿ, ಪಿನ್‌ಗಳಿಗೂ
ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಮಾಡಿವೆ
ನಮ್ಮ ರೈತರ ಬೆಳೆದ ಬೆಳೆಗೆ
ಬೆಲೆ ನಿಗದಿ ಮಾಡಲು ಬೀದಿಯಲಿ‌ ನಿಂತು
ಚಳುವಳಿ ಮಾಡಬೇಕಿದೆ
ದಯವಿಟ್ಟು ಬೆಂಬಲ ಬೆಲೆ ನಿಗದಿ ಮಾಡಿ
ಅನ್ನದಾತನ ಪ್ರಾಣ ಉಳಿಸಿ.

‍ಲೇಖಕರು Admin

20 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading