ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗಲು ಅರಳಲೂ ಆಗದ ಶಾಪಗ್ರಸ್ತೆ!

ಮತ್ತೆ ಮತ್ತೆ ಕಾಡುವುದು ಪಾರಿಜಾತದ ಕಥೆಗಳೇ

-ಶ್ರೀವಿಭಾವನ

ಹಗಲು ಅರಳಲೂ ಆಗದ ಶಾಪಗ್ರಸ್ತೆ!
ಆದರೆ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ
ಪಾರಿಜಾತ ಹೂವು!
ಅದರ ಬೆನ್ನಿಗಂಟಿರುವ ಉತ್ಕಟ ಪ್ರೇಮದ ಕಥೆಗಳಿಗೆ!

ಅರಳಿದರೂ ಸಿಗದ ಸೂರ್ಯ
ಪಾರಿಜಾತಕ್ಕಷ್ಟೇ ಅಂಟಿದ ಶಾಪ
ಕಾಡುತ್ತಲೇ ಇರುತ್ತದೆ!
ಹೂವಿನ ಸ್ನಿಗ್ಧಸೌಂದರ್ಯ
ಅದರ ಮೇ ಲಣ ಕಥೆಗಳಂತೆ.

ಇಲ್ಲಿ ಎಲ್ಲವೂ ಬರೀ ನೆಪ..
ಪ್ರತಿ ಪ್ರೇಮ ಕಥೆಗೂ ಒಂದಿಷ್ಟು ದುರಂತದ ಸಾಲುಗಳು ಬೇ ಕಿದ್ದವು. ಉತ್ಕಟ ಪ್ರೀತಿಯನ್ನು ಕೊ ಲ್ಲಲು ಕವಿಗೆ
ಆದರೆ ಶಾಪ ಹೊ ತ್ತದ್ದು ಮಾತ್ರ ಪಾರಿಜಾತ

ಅದೆಷ್ಟು ಕಥೆಗಳು:
ಸೀ ತೆ- ಸತ್ಯಭಾಮೆ- ರುಕ್ಮಿ ಣಿ
ಕೊ ನೆಗೆ ಸೂರ್ಯ ನ ಶಾಖಕ್ಕೆ ಸತ್ತು ಹೋ ದ ಆ ರಾಜಕುಮಾರಿ ಎಲ್ಲರೂ ಈಗ ಅಜರಾಮರ
ಪ್ರೇಮಿಗಳೇ ನೋ ಹುತಾತ್ಮರಾದರು.
ಹೂವಿಗೆ ಮಾತ್ರ ಶಿಕ್ಷೆ ಮುಂದುವರಿದೆ ಇದೆ!
ಪ್ರತಿ ಕಥೆಯ ಬಳಿಕವೂ ಉಳಿಯುವುದು
ಒಂದು ಸುದೀ ರ್ಘ ವಿಷಾಧ
ಸೀ ತೆಯ ಕಣ್ಣೀರು
ಸತ್ಯಭಾಮೆಗೆ ಅಂಟಿದ ಕಳಂಕ
ರಾಜಕುಮಾರಿಗೆ ದಕ್ಕದ ಪ್ರೀತಿ
ಸಿಕ್ಕ ಪ್ರೀತಿಯಲ್ಲೂ ಪಾಲು ನೀ ಡಬೇ ಕಾಗಿದ್ದ ರುಕ್ಮಿಣಿ

ಆದರೆ ಅದೇ ನೋ ಮೋ ಹ…
ಮತ್ತೆ ಇರುಳು ಅರಳುವ ಸಮಯಕ್ಕೆ ಕಾಯುವಿಕೆ ಮಣ್ಣಿಗೆ ಬಿದ್ದಪಾರಿಜಾತದಲ್ಲೂ
ಹೊ ಸ ಪ್ರೇಮ ಕತೆಯ ಕುರುಹುಗಳಿಗೆ
ಹುಡುಕಾಟ

ಪ್ರೇಮ,
ವಿರಹ
ಕೊನೆಗೆ, ಬದುಕ ಮೇ ಲಿನ ವೈ ರಾಗ್ಯ
ಎಲ್ಲದಕ್ಕೂ ಪಾರಿಜಾತದ್ದೇ ಸೆಳೆತ

ನೆಲಕ್ಕೆ ಬಿದ್ದಹೂವು ಕೃಷ್ಣನ ಕಾರುಣ್ಯ ಪಡೆದಂತೆ

‍ಲೇಖಕರು Admin

19 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading