ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೋಚಿದ್ದನ್ನೆಲ್ಲ ಗೀಚಿದರೆ

ಪಾಡು ಹಾಡಾಗಬೇಕು

-ಮಾಲತಿ ಗೋರೇಬೈಲ್

ತೋಚಿದ್ದನ್ನೆಲ್ಲ ಗೀಚಿದರೆ
ಪದಗಳು ಎದೆಗಿಳಿಯುವುದಿಲ್ಲ,
ಕಾಡಬೇಕು,ತೋಯಬೇಕು,ಬೇಯಬೇಕು
ಕಹಿಯ ಉಣಬೇಕು…
ಕಾಣದ ದಾರಿಯಲ್ಲಿ ತಡಕಾಡಬೇಕು…

ಬರಿಯ‌ ನೋವನ್ನೇ ಕಕ್ಕಿದೆನೆಂದು;
ಕಡಲು ಬಿಕ್ಕುವುದಿಲ್ಲ…
ನಲಿಯಬೇಕು,ಅಣು- ಅಣುವ ಬದುಕಬೇಕು
ಸಿಹಿ ಸುಖವ ಕಾಣಬೇಕು,
ಬೆಳದಿಂಗಳ ಅಂಗಳದಲ್ಲಿ
ಪಿಸುಮಾತಿಗೆ ಮುತ್ತು ಪೋಣಿಸಬೇಕು.

ಸಂಕಟ,ಸಂತಸಗಳೇ ಮೇಳೈಸುತ್ತಿದ್ದರೆ
ಅಸ್ಮಿತೆ ಸ್ಥಿರವಾಗುವುದಿಲ್ಲ,
ಸಮಾಜದ ಒಡಲ ಹಸಿವಿಗೆ
ತುತ್ತಾಗಬೇಕು….
ಹತಾಶೆ,ಅವಮಾನಗಳ
ಮೆಟ್ಟಿ ನಿಲ್ಲಬೇಕು…

ಹೊರಮರಳಿ ಅಂದಿದ್ದನ್ನೇ ಆಡುತ್ತಿದ್ದರೆ,
ಇಳೆ ಹಗುರಾಗುವುದಿಲ್ಲ,
ಒಣ ಜಂಭಗಳ ಸುರುಳಿ ಸುತ್ತಿ,
ಪಸೆ ಒಸರಿ
ಬಗೆಯ ಗೂಡಿನ ದನಿಗೆ
ಕೊರಳೊಡ್ಡಬೇಕು
ಪಾಡು ಹಾಡಾಗಬೇಕು……

                       

‍ಲೇಖಕರು Admin

19 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading