-ರಮ್ಯ ಕೆ ಜಿ ಮೂರ್ನಾಡು
ಗಜ಼ಲ್
ಯಾರೂ ಬರದ ದಾರಿಯಲ್ಲಿ ನೀನು ಬಂದೆ ಏತಕೆ
ಕಹಿಯನುಂಡ ನನ್ನ ಎದೆಗೆ ಜೇನು ತಂದೆ ಏತಕೆ
ಬರೆಯಲಾರೆ ನಾನು ಇಂದು ನೀನು ಇರದ ಕವಿತೆಯ
ಪದಗಳೆದೆಯ ಕದವ ತೆರೆದು ಜತೆಗೆ ನಿಂದೆ ಏತಕೆ
ತೀರವೇಕೋ ನಡುಗುತ್ತಿದೆ ನೆನಪುಗಳು ಹಾಯುವಾಗ
ವಿರಹಗಡಲ ಅಲೆಗಳಲ್ಲಿ ನೀನೇ ನೆಂದೆ ಏತಕೆ
ಯಾವ ಊರ ವಿಳಾಸ ಮರೆತು ಅಲೆಯುತ್ತಿರುವೆ ಇಲ್ಲಿ
ಹೆಜ್ಜೆ ಸೋತು ಬೀಳುವಾಗ ಬಳಸು ಎಂದೆ ಏತಕೆ
ಪ್ರೇಮವೆನುವ ಹೆಸರಿನಲ್ಲಿ ಕತೆಗಳೆಷ್ಟೋ ‘ಪ್ರಾಣವೇ’
ಕಾಡುವಂಥ ನೂರು ನೆನಪ ಹೀಗೆ ಕೊಂದೆ ಏತಕೆ?






0 Comments