-ಶಂಕರಾನಂದ ಹೆಬ್ಬಾಳ
ಗಝಲ್
ಲೇಖನಿಯಲ್ಲಿ ಪದಗಳೇಕೋ ಹುಟ್ಟುತ್ತಿಲ್ಲ
ನಿನ್ನ ಕಾಟದಿಂದ
ಹೃದಯದಲ್ಲಿ ಭಾವಗಳೇಕೋ ಹುಟ್ಟುತ್ತಿಲ್ಲ
ನಿನ್ನ ಕಾಟದಿಂದ
ಹೂವಿಗೆ ದುಂಬಿಯಂತೆ ಜಗದ ನಿಯಮ
ಅಲ್ಲವೇ ಹೇಳು
ಪ್ರಣಯದ ಅಪ್ಪುಗೆಗಳೇಕೋ ಹುಟ್ಟುತ್ತಿಲ್ಲ
ನಿನ್ನ ಕಾಟದಿಂದ
ನಿಶ್ಶಬ್ದದ ರಾತ್ರಿಯಲಿ ಚಂದ್ರ ಬೊಬ್ಬೆ
ಹೊಡಿಯುತ್ತಿದ್ದಾನೆ ನೋಡು
ಸುಪ್ತಿಯಲಿ ಕನಸುಗಳೇಕೋ ಹುಟ್ಟುತ್ತಿಲ್ಲ
ನಿನ್ನ ಕಾಟದಿಂದ
ವಿಷಾದ ಭಾವವಿದು ಎದೆಯಲ್ಲಿ ಸುಳಿದು
ಸ್ಥಬ್ತವಾಗಿದೆ ಲೋಕ
ಮಸ್ತಕದಲಿ ಕಲ್ಪನೆಗಳೇಕೋ ಹುಟ್ಟುತ್ತಿಲ್ಲ
ನಿನ್ನ ಕಾಟದಿಂದ
ದ್ವಂದ್ವದಲಿ ಸಿಲುಕಿ ಕೊರಗುತಿದೆ ಅಭಿನವನ
ಜೀವನದ ದೋಣಿ
ಬಾಹುಗಳಲಿ ಬಂಧನಗಳೇಕೋ ಹುಟ್ಟುತ್ತಿಲ್ಲ
ನಿನ್ನ ಕಾಟದಿಂದ






0 Comments