ರಂಗಸ್ವಾಮಿ ಸಿದ್ದಯ್ಯ
ಗಜಲ್
ಪ್ರೀತಿ ಮುರಿದು ಹೋದ ಅಗಲಿಕೆ ವಿರಹದ ದಳ್ಳುರಿ ಸಹಿಲಾರೆ ಗೆಳೆತಿ
ಕಣ್ಣೀರ ಅಲೆಗಳು ಹೃದಯಕ್ಕೆ ಅಪ್ಪಳಿಸಲು ನೋವು ತಾಳಲಾರೆ ಗೆಳೆತಿ
ಹೃದಯವೆಂಬ ಏಕತಾರಿಯಲಿ ಒಮ್ಮಿದ ಸ್ವರವು ಭಗ್ನ ರಾಗವೇ ಆಗಿದೆ
ಒಲವಿನ ಗೀತೆ ಅಂತ್ಯದ ವಿಷಾದ ಮಾತ್ರ ಮರೆಯಲಾರೆ ಗೆಳೆತಿ
ಅಂದು ನೀಡಿದ ಬೆಚ್ಚನೆ ಅಪ್ಪುಗೆ ಜೀವ ಹಂಬಲಿಸುತ್ತದೆ
ನೀನಿರದ ಬಾಳಿನಲ್ಲಿ ಉಸಿರು ಭಾರ ಸಹಿಸಲಾರೆ ಗೆಳೆತಿ
ನಗುವಿನ ಮುಖವಾಡ ಧರಿಸಿ ಲೋಕದೆದುರು ನಿಂತರೂಒಡೆದ ಮನಸ್ಸನ್ನು ಯಾರಿಗೂ ತೋರಲಾರೆ ಗೆಳೆತಿ
ನಿನ್ನ ಮೌನದೊಳಗೆ ನನ್ನ ಪ್ರಶ್ನೆಗಳೆಲ್ಲ ಕಳೆದು ಹೋದವು
ಉತ್ತರಗಳಿಲ್ಲದ ಈ ಜೀವನ ಇನ್ನೂ ಸಾಗಿಸಲಾರೆ ಗೆಳೆತಿ
“ರಂಗ”ನ ಬದುಕೇ ಬರಿದಾದ ಮರುಭೂಮಿಯಂತಾಗಿದೆ
ಪ್ರೀತಿ ಮಳೆ ಬಾರದಿದ್ದರೆ ಹಸಿರು ಕಾಣಲಾರೆ ಗೆಳೆತಿ






0 Comments