ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾರಾಯಣ ರಾಯಚೂರ್ ಕವಿತೆ- ನಾಟಕವು ನಿಲ್ಲದೆಂದೂ!!…

ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ಆಶಯ ನುಡಿ ಕಾವ್ಯ

ನಾರಾಯಣ ರಾಯಚೂರ್

ರಂಗ ಬಾಂಧವರೆಲ್ಲ
ಒಂದಾಗಿ ಹಾಡೋಣ
ಛಂದಾದ ರಂಗ ಕಲೆ
‘ರಂಗ ಭೂಮಿ’-ಎಂದು.
ಆನಂದದಾ ಸೆಲೆ
‘ರಂಗ ಭೂಮಿ’-ಎಂದು.
ಭೂಮಿ-ತೂಕದ ಅಭಿವ್ಯಕ್ತಿ
‘ರಂಗ-ಭೂಮಿ’-ಎಂದು.

ಅಂದು,ಇಂದು
ಎಂದು -ಮುಂದೂ
ರಂಗಕ್ಕೆ ಇಲ್ಲ -ಕುಂದು!
ನಾಟಕವು ನಿಲ್ಲದೆಂದೂ!!

ಭರತ, ಭಾಸ-ಕವಿ
ಕಾಳಿದಾಸ ಭವಭೂತಿ
ಬ್ರೆಕ್ಟ್, ಷೇಕ್ಸ್ ಪಿಯರ್
ಇಬ್ಸನ್ ವಿಲಾಯತಿ.,
ಪೂರ್ವ- ಪಶ್ಚಿಮ
ಭಿನ್ನ,ಭಿನ್ನ ಸಂಸ್ಕೃತಿ
ವಿನಿಮಯದ ಮೂಲಕ
ಸಮ್ಮಿಲನ, ಸ್ವೀಕೃತಿ.

ಬಣ್ಣ -ಬಿನ್ನಾಣಗಳ
‘ಕಣ್ಣ-ಯಜ್ಞ’ ವೆ ರಂಗ,
ಭಾವ ರಸ-ಯಾನ
ಅವಿಭಾಜ್ಯ ಅಂಗ.

ಜಗವೆ ನಾಟಕ-ರಂಗ
ಜೀವಿಗಳೇ ಪಾತ್ರ;
ದೇಶ ಕಾಲೈಕ್ಯಗಳ
ಸಮೃದ್ಧ ಗಾತ್ರ.
ದಿನ-ವಿದ್ಯಮಾನಗಳೆ
ಅನುಪಮ ‘ಪ್ರಸಂಗ’ಗಳು
ಸಾಕ್ಷಿ-ಭಾವದ ಪ್ರೇಕ್ಷಕನೇ
‌ಕಂಗಳು….
ನಾಟಕದ ನೋಟಕನೇ
ಬೆಳದಿಂಗಳು…

ನೋವು-ನಲಿವುಗಳೆಲ್ಲ,
ಸೋಲು-ಗೆಲವುಗಳೆಲ್ಲ,
ಕಾಲ-ಕಾಲಕ್ಕೆ
ಅಭಿವ್ಯಕ್ತಿಗೊಂಡು,
ಅರಿವಿನೆಚ್ಚರ ಮೂಡಿ
ರಂಗ-ಕಲೆ ಕೊಂಡಾಡಿ
ಭಂಗವಾಗದ ಶಕ್ತಿ
ಕಂಡು ಕೊಂಡು-
ಸಾಗುತ್ತಿರಲಿ -‘ರಂಗ’
ಪ್ರಬಲಗೊಂಡು.
SHOW MUST GO ON…..

ಜಯ, ಜಯಾ
ಜಯ ವಿಶ್ವ ರಂಗ;
ದಿಗ್ವಿಜಯಾಭ್ಯುದಯಾ
ವಿಶ್ವ ರಂಗ

‍ಲೇಖಕರು avadhi

27 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading